ಅಶೋಕ್ ಗೆಹ್ಲೋಟ್ 
ದೇಶ

Bihar Polls: ಕೇವಲ 26 ಸೆಕೆಂಡುಗಳಲ್ಲಿ ಬಿಡುಗಡೆಯಾದ NDA ಪ್ರಣಾಳಿಕೆ 'ಸುಳ್ಳಿನ ಸರಮಾಲೆ'; ಅಶೋಕ್ ಗೆಹ್ಲೋಟ್

ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಅಖಿಲೇಶ್ ಪ್ರಸಾದ್ ಸಿಂಗ್ ಮಾತನಾಡಿ, ನಿತೀಶ್ ಕುಮಾರ್ ಅವರಿಗೆ ಪ್ರಣಾಳಿಕೆಯ ಕುರಿತು ಮಾತನಾಡಲು ಅವಕಾಶ ನೀಡದಿರುವುದು ಬಿಹಾರ ಮತ್ತು ಬಿಹಾರಿಗಳಿಗೆ ಮಾಡಿದ ಅಗೌರವ ಎಂದು ಹೇಳಿದ್ದಾರೆ.

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಎನ್‌ಡಿಎ ಕೇವಲ 26 ಸೆಕೆಂಡುಗಳ ಪತ್ರಿಕಾಗೋಷ್ಠಿಯಲ್ಲಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಏಕೆಂದರೆ, ಅವರು ಪತ್ರಕರ್ತರ ಪ್ರಶ್ನೆಗಳನ್ನು ಎದುರಿಸಲು ಹೆದರುತ್ತಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಶುಕ್ರವಾರ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಗೆಹ್ಲೋಟ್, ಎನ್‌ಡಿಎಯ ಪ್ರಣಾಳಿಕೆಯನ್ನು 'ಸುಳ್ಳುಗಳ ಸರಮಾಲೆ' ಎಂದು ಕರೆದರು.

ಜೆಪಿ ನಡ್ಡಾ, ಸಿಎಂ ನಿತೀಶ್ ಕುಮಾರ್ ಮತ್ತು ಇತರ ನಾಯಕರು ಕೇವಲ 26 ಸೆಕೆಂಡುಗಳ ಕಾಲ ಇದ್ದರು. 26 ಸೆಕೆಂಡುಗಳ ಪತ್ರಿಕಾಗೋಷ್ಠಿಯನ್ನು ನೋಡಿದ್ದು ಇದೇ ಮೊದಲು ಎಂದು ನನಗೆ ಮಾಧ್ಯಮದವರು ಹೇಳಿದರು. ಅವರು ಭಯಭೀತರಾಗಿ ಓಡಿಹೋದರು... ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಸಂಕೇತ. ಪ್ರಣಾಳಿಕೆ ಬಿಡುಗಡೆಯು ಚುನಾವಣೆಯಲ್ಲಿ ಒಂದು ಪ್ರಮುಖ ಘಟನೆಯಾಗಿದೆ. ನೀವು ಮಾಧ್ಯಮ ಮತ್ತು ಪ್ರಶ್ನೆಗಳಿಗೆ ಏಕೆ ಹೆದರುತ್ತೀರಿ? ಅವರು ಪ್ರಜಾಪ್ರಭುತ್ವವನ್ನು ನಂಬುವುದಿಲ್ಲ...' ಎಂದು ಆರೋಪಿಸಿದರು.

ಪ್ರಣಾಳಿಕೆಯ ಬಗ್ಗೆ ಸಿಎಂ ನಿತೀಶ್ ಕುಮಾರ್ ಮಾತನಾಡಲೇ ಇಲ್ಲ. ಆದರೆ, ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಮಾತ್ರ ಮಾಡಿದರು. ಹಾಗಿದ್ದರೆ, ಅವರು (ಕುಮಾರ್) ಅದರ ಬಗ್ಗೆ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲವೇ?. ಅವರು ತಮ್ಮ 20 ವರ್ಷಗಳ ಆಳ್ವಿಕೆಯ ರಿಪೋರ್ಟ್ ಕಾರ್ಡ್‌ನೊಂದಿಗೆ ಪತ್ರಿಕಾಗೋಷ್ಠಿಯನ್ನು ಪ್ರಾರಂಭಿಸಬೇಕಿತ್ತು' ಎಂದು ಕಾಂಗ್ರೆಸ್ ನಾಯಕ ಹೇಳಿದರು.

ಎನ್ಡಿಎ 'ಸಂಕಲ್ಪ ಪತ್ರ'ದ ಕುರಿತು ಮಾತನಾಡಿದ ಗೆಹ್ಲೋಟ್, 'ಅವರು ಇಂದು ಇತಿಹಾಸ ಸೃಷ್ಟಿಸಿದ್ದಾರೆ. ನಿತೀಶ್ ಕುಮಾರ್ ಮತ್ತು ಜೆಪಿ ನಡ್ಡಾ ಇಲ್ಲಿ (ಪತ್ರಿಕಾ ಗೋಷ್ಠಿಯಲ್ಲಿ) ಇದ್ದರು ಮತ್ತು 26 ಸೆಕೆಂಡುಗಳ ಒಳಗೆ ಹೊರಟುಹೋದರು. ಅವರ ಉಪಮುಖ್ಯಮಂತ್ರಿ ನಂತರ ಪ್ರಣಾಳಿಕೆಯನ್ನು ಓದಿದರು. ಅಂದರೆ ಅವರು ತಮ್ಮ ಪ್ರಣಾಳಿಕೆಯಲ್ಲಿ ನಂಬಿಕೆ ಇಟ್ಟಿಲ್ಲ. ಅವರು ಪ್ರಣಾಳಿಕೆ ಬಿಡುಗಡೆ ಮಾಡುವ ನಿಯಮಿತ ವಿಧಾನವನ್ನು ಮಾತ್ರ ಅನುಸರಿಸಿದರು. ಇದು ಅವರಿಗೆ ಪ್ರಣಾಳಿಕೆ ಮೇಲೆ ಯಾವುದೇ ಬದ್ಧತೆ ಇಲ್ಲ ಎಂಬುದನ್ನು ತೋರಿಸುತ್ತದೆ. ಅವರು ಬದ್ಧರಾಗಿದ್ದರೆ, ಅವರೆಲ್ಲರೂ ಒಟ್ಟಿಗೆ ಕುಳಿತು ಅದನ್ನು ವಿವರಿಸುತ್ತಿದ್ದರು...' ಎಂದರು.

ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಅಖಿಲೇಶ್ ಪ್ರಸಾದ್ ಸಿಂಗ್ ಮಾತನಾಡಿ, ನಿತೀಶ್ ಕುಮಾರ್ ಅವರಿಗೆ ಪ್ರಣಾಳಿಕೆಯ ಕುರಿತು ಮಾತನಾಡಲು ಅವಕಾಶ ನೀಡದಿರುವುದು ಬಿಹಾರ ಮತ್ತು ಬಿಹಾರಿಗಳಿಗೆ ಮಾಡಿದ ಅಗೌರವ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

70ನೇ ಕನ್ನಡ ರಾಜ್ಯೋತ್ಸವ: ನಾಡದೇವತೆ ಭುವನೇಶ್ವರಿಗೆ ಪುಷ್ಪಾರ್ಚನೆ, ಧ್ವಜಾರೋಹಣ ನೆರವೇರಿಸಿದ ಸಿಎಂ ಸಿದ್ದರಾಮಯ್ಯ

ಸರ್ಕಾರಿ ಕಚೇರಿ, ಸಭೆ, ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಾಟಲಿ ಬಳಕೆಗೆ ನಿಷೇಧ: ರಾಜ್ಯ ಸರ್ಕಾರ

ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿಯರ ಜೊತೆಗೆ ತ್ರಿಮೂರ್ತಿಗಳಿಗೆ ಪೂಜೆ: ಶ್ರೀ ಚಕ್ರರೂಪದಲ್ಲಿ ಆದಿಶಕ್ತಿ; ಗ್ರಹಣ ಸಮಯದಲ್ಲೂ ಮುಚ್ಚದ ಶಕ್ತಿ ಪೀಠವಿದು!

70ನೇ ಕನ್ನಡ ರಾಜ್ಯೋತ್ಸವ ಸಂಭ್ರಮ: ಎಲ್ಲೆಡೆ ಹರಡಿದ ಕನ್ನಡದ ಕಂಪು, ಕಂಠೀರವ ಸ್ಟೇಡಿಯಂನಲ್ಲಿ ಸಕಲ ಸಿದ್ಧತೆ

ನಾಡಿನಾದ್ಯಂತ 70ನೇ ಕನ್ನಡ ರಾಜ್ಯೋತ್ಸವ ಆಚರಣೆ: ಜನತೆಗೆ CM-DCM ಸೇರಿ ಗಣ್ಯರಿಂದ ಶುಭಾಶಯ

SCROLL FOR NEXT