ಪ್ರಧಾನಿ ಮೋದಿಯಿಂದ ಚಿಪ್ ಅನಾವರಣ  
ದೇಶ

'Made in India' chip ಅನಾವರಣ: 1 ಟ್ರಿಲಿಯನ್ ಡಾಲರ್ ಸೆಮಿಕಂಡಕ್ಟರ್ ಮಾರುಕಟ್ಟೆಯಲ್ಲಿ ಭಾರತದ ಪಾಲು ಗಮನಾರ್ಹ- ಪ್ರಧಾನಿ ಮೋದಿ

ಜಾಗತಿಕ ಸೆಮಿಕಂಡಕ್ಟರ್ ಮಾರುಕಟ್ಟೆ ಈಗಾಗಲೇ 600 ಬಿಲಿಯನ್ ಡಾಲರ್ ತಲುಪಿದೆ. ಮುಂಬರುವ ವರ್ಷಗಳಲ್ಲಿ, ಇದು 1 ಟ್ರಿಲಿಯನ್ ಡಾಲರ್ ಗೂ ಅಧಿಕವಾಗುವ ನಿರೀಕ್ಷೆಯಿದೆ.

ನವದೆಹಲಿ: ಜಗತ್ತಿನ 1 ಟ್ರಿಲಿಯನ್ ಡಾಲರ್ ಮೌಲ್ಯದ ಸೆಮಿಕಂಡಕ್ಟರ್ ಉದ್ಯಮದಲ್ಲಿ ಭಾರತವು ಗಮನಾರ್ಹ ಪಾಲನ್ನು ಹೊಂದಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 'ಸೆಮಿಕಾನ್ ಇಂಡಿಯಾ - 2025' ನ ಮೂರನೇ ಆವೃತ್ತಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮೋದಿ, ಹದಿನೆಂಟು ಶತಕೋಟಿ ಡಾಲರ್‌ಗಳಿಗೂ ಹೆಚ್ಚು ಹೂಡಿಕೆಯನ್ನು ಒಳಗೊಂಡ ಒಟ್ಟು ಹತ್ತು ಸೆಮಿಕಂಡಕ್ಟರ್ ಯೋಜನೆಗಳು ಅಂದರೆ 1..5 ಲಕ್ಷ ಕೋಟಿ ರೂಪಾಯಿಗಿಂತಲೂ ಅಧಿಕ ಕಾರ್ಯರೂಪ ಹಂತದಲ್ಲಿವೆ ಎಂದರು.

ಜಾಗತಿಕ ಸೆಮಿಕಂಡಕ್ಟರ್ ಮಾರುಕಟ್ಟೆ ಈಗಾಗಲೇ 600 ಬಿಲಿಯನ್ ಡಾಲರ್ ತಲುಪಿದೆ. ಮುಂಬರುವ ವರ್ಷಗಳಲ್ಲಿ, ಇದು 1 ಟ್ರಿಲಿಯನ್ ಡಾಲರ್ ಗೂ ಅಧಿಕವಾಗುವ ನಿರೀಕ್ಷೆಯಿದೆ.. ಭಾರತ ಸೆಮಿಕಂಡಕ್ಟರ್ ವಲಯದಲ್ಲಿ ಮುನ್ನಡೆಯುತ್ತಿದೆ, ಈ 1 ಟ್ರಿಲಿಯನ್ ಡಾಲರ್ ಮಾರುಕಟ್ಟೆಯಲ್ಲಿ ಭಾರತವು ಗಮನಾರ್ಹ ಪಾಲನ್ನು ಹೊಂದಿರುತ್ತದೆ ಎಂದು ಮೋದಿ ಹೇಳಿದರು.

ಮೊದಲ ಮೇಡ್ ಇನ್ ಇಂಡಿಯಾ ಸೆಮಿಕಂಡಕ್ಟರ್ ಚಿಪ್ ಹಸ್ತಾಂತರ

ಕಾರ್ಯಕ್ರಮದಲ್ಲಿ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನ್ ವೈಷ್ಣವ್ ಅವರು ನಾಲ್ಕು ಅನುಮೋದಿತ ಯೋಜನೆಗಳಿಂದ ಮೊದಲ ಮೇಡ್ ಇನ್ ಇಂಡಿಯಾ ಪರೀಕ್ಷಾ ಚಿಪ್‌ಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಸ್ತಾಂತರಿಸಿದರು.

ಇಸ್ರೋದ ಸೆಮಿಕಂಡಕ್ಟರ್ ಪ್ರಯೋಗಾಲಯವು ಅಭಿವೃದ್ಧಿಪಡಿಸಿದ ವಿಕ್ರಮ್ ಚಿಪ್, ಭಾರತದ ಮೊದಲ ಸಂಪೂರ್ಣ ಮೇಕ್-ಇನ್-ಇಂಡಿಯಾ 32-ಬಿಟ್ ಮೈಕ್ರೋಪ್ರೊಸೆಸರ್ ಆಗಿದ್ದು, ಉಡಾವಣಾ ವಾಹನಗಳ ತೀವ್ರ ಪರಿಸ್ಥಿತಿಗಳಲ್ಲಿ ವಿಶ್ವಾಸಾರ್ಹವಾಗಿ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ.

ಭಾರತದ ಚಿಪ್ ಜಗತ್ತನ್ನೇ ಬದಲಿಸಲಿದೆ

ಚಿಪ್ ನ್ನು ಡಿಜಿಟಲ್ ವಜ್ರಕ್ಕೆ ಹೋಲಿಸಿದ ಪ್ರಧಾನಿ ಮೋದಿ, 21 ನೇ ಶತಮಾನದ ಶಕ್ತಿಯು ಈಗ ಸಣ್ಣ ಚಿಪ್‌ನಲ್ಲಿ ಕೇಂದ್ರೀಕೃತವಾಗಿದೆ ಎಂದು ಒತ್ತಿ ಹೇಳಿದರು. ತೈಲ ಕಪ್ಪು ಚಿನ್ನವಾಗಿತ್ತು, ಈಗ ಚಿಪ್ ಡಿಜಿಟಲ್ ವಜ್ರಗಳು', ತೈಲವು ಹಿಂದಿನ ಶತಮಾನವನ್ನು ರೂಪಿಸಿತು. ಪ್ರಪಂಚದ ಭವಿಷ್ಯವನ್ನು ತೈಲ ಬಾವಿಗಳು ನಿರ್ಧರಿಸುತ್ತವೆ. ಈ ಬಾವಿಗಳಿಂದ ಎಷ್ಟು ಪೆಟ್ರೋಲಿಯಂ ನ್ನು ಹೊರತೆಗೆಯಲಾಯಿತು ಎಂಬುದರ ಆಧಾರದ ಮೇಲೆ ಜಾಗತಿಕ ಆರ್ಥಿಕತೆಯು ಏರಿಳಿತಗೊಂಡಿತು ಎಂದರು.

ಪ್ಲಗ್-ಅಂಡ್-ಪ್ಲೇ ಮೂಲಸೌಕರ್ಯ ಮಾದರಿಯಡಿಯಲ್ಲಿ ದೇಶಾದ್ಯಂತ ಸೆಮಿಕಂಡಕ್ಟರ್ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು, ಇದು ಭೂಮಿ, ವಿದ್ಯುತ್ ಸರಬರಾಜು, ಬಂದರು ಮತ್ತು ವಿಮಾನ ನಿಲ್ದಾಣ ಸಂಪರ್ಕ ಮತ್ತು ಕೌಶಲ್ಯಪೂರ್ಣ ಕಾರ್ಯಪಡೆಗೆ ಪ್ರವೇಶದಂತಹ ಸೌಲಭ್ಯಗಳನ್ನು ನೀಡುತ್ತದೆ. ಭಾರತವು ಪೂರ್ಣ ಪ್ರಮಾಣದ ಸೆಮಿಕಂಡಕ್ಟರ್ ರಾಷ್ಟ್ರವಾಗುವತ್ತ ಸಾಗುತ್ತಿದೆ ಎಂದು ದೃಢವಾಗಿ ಹೇಳಿದ ಮೋದಿ ಭಾರತದ ಚಿಕ್ಕ ಚಿಪ್ ವಿಶ್ವದ ಅತಿದೊಡ್ಡ ಬದಲಾವಣೆಗೆ ಚಾಲನೆ ನೀಡುವ ದಿನ ದೂರವಿಲ್ಲ ಎಂದು ಪುನರುಚ್ಚರಿಸಿದರು.

ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ನಮ್ಮ ಪ್ರಯಾಣ ತಡವಾಗಿ ಪ್ರಾರಂಭವಾಯಿತು. ಆದರೆ ಈಗ ನಮ್ಮನ್ನು ತಡೆಯಲು ಯಾವುದೂ ಸಾಧ್ಯವಿಲ್ಲ. ಸಿಜಿ ಪವರ್‌ನ ಪೈಲಟ್ ಸ್ಥಾವರವು ನಾಲ್ಕೈದು ದಿನಗಳ ಹಿಂದೆ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು.

ಮೈಕ್ರಾನ್ ಮತ್ತು ಟಾಟಾದಿಂದ ಪರೀಕ್ಷಾ ಚಿಪ್‌ಗಳು ಈಗಾಗಲೇ ಉತ್ಪಾದನೆಯಲ್ಲಿವೆ. ಈ ವರ್ಷ ವಾಣಿಜ್ಯ ಚಿಪ್ ಉತ್ಪಾದನೆ ಪ್ರಾರಂಭವಾಗಲಿದೆ, ಇದು ಸೆಮಿಕಂಡಕ್ಟರ್ ವಲಯದಲ್ಲಿ ಭಾರತ ಸಾಧಿಸುತ್ತಿರುವ ತ್ವರಿತ ಪ್ರಗತಿಯನ್ನು ಒತ್ತಿಹೇಳುತ್ತದೆ. ಭಾರತವು ದೇಶವನ್ನು ಸ್ವಾವಲಂಬಿ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸುವ ದೃಢವಾದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ರಚಿಸುತ್ತಿದೆ ಎಂದು ಅವರು ಉಲ್ಲೇಖಿಸಿದರು. ನೋಯ್ಡಾ ಮತ್ತು ಬೆಂಗಳೂರಿನಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ವಿನ್ಯಾಸ ಕೇಂದ್ರಗಳು ಶತಕೋಟಿ ಟ್ರಾನ್ಸಿಸ್ಟರ್‌ಗಳನ್ನು ಸಂಗ್ರಹಿಸುವ ಸಾಮರ್ಥ್ಯವಿರುವ ವಿಶ್ವದ ಕೆಲವು ಅತ್ಯಾಧುನಿಕ ಚಿಪ್‌ಗಳ ಮೇಲೆ ಕಾರ್ಯನಿರ್ವಹಿಸುತ್ತಿವೆ ಎಂದು ಪ್ರಧಾನಿ ಹೇಳಿದರು.

ಭಾರತವು ಪ್ರಸ್ತುತ ರಾಷ್ಟ್ರೀಯ ನಿರ್ಣಾಯಕ ಖನಿಜ ಮಿಷನ್‌ನಲ್ಲಿ ಕೆಲಸ ಮಾಡುತ್ತಿದೆ. ದೇಶೀಯವಾಗಿ ಅಪರೂಪದ ಖನಿಜಗಳ ಬೇಡಿಕೆಯನ್ನು ಪೂರೈಸಲು ಬದ್ಧವಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ, ನಿರ್ಣಾಯಕ ಖನಿಜ ಯೋಜನೆಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ ಎಂದು ಮೋದಿ ನುಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಖಾಸಗಿ ಶಾಲೆಗಳ ಮಾನ್ಯತೆ: ನಿಯಮಗಳ ಪರಿಷ್ಕರಣೆಗೆ ಸದನ ಸಮಿತಿ ರಚನೆ- ಸಚಿವ ಮಧು ಬಂಗಾರಪ್ಪ

ಕೊಲೆ ಪ್ರಕರಣ: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಜಾ!

ದೇಶಕ್ಕೆ ಸ್ವಾತಂತ್ರ್ಯ ಬಂದ 79 ವರ್ಷಗಳ ನಂತರ 'ವಂದೇ ಮಾತರಂ' ಚರ್ಚೆಯ ಅಗತ್ಯವೇನಿತ್ತು?: ಪ್ರಿಯಾಂಕಾ ಗಾಂಧಿ; Video

ಪೂಮಾದಿಂದ 300 ಕೋಟಿ ಆಫರ್ ಕೈಬಿಟ್ಟ ಕೊಹ್ಲಿ: ತನ್ನದೇ ಬ್ರ್ಯಾಂಡ್ ಗಾಗಿ ಹೊಸ ಡೀಲ್, 40 ಕೋಟಿ ರೂ. ಹೂಡಿಕೆ!

ಮಳೆ, ಚಳಿಯಿಂದಾಗಿ ಕರ್ನಾಟಕದಲ್ಲಿ ಬಿಯರ್ ಮಾರಾಟದಲ್ಲಿ ಶೇ. 19.55ರಷ್ಟು ಕುಸಿತ: ಸಚಿವ ತಿಮ್ಮಾಪುರ

SCROLL FOR NEXT