ಸಂಗ್ರಹ ಚಿತ್ರ 
ದೇಶ

Lunar Eclipse 2025: ವರ್ಷದ ಕೊನೆಯ ಖಗ್ರಾಸ ಚಂದ್ರಗ್ರಹಣ; ಶುರು-ಅಂತ್ಯ ಯಾವಾಗ? ಸೂತಕ ಸಮಯ ಸೇರಿದಂತೆ 5 ವಿಶೇಷ ಸಂಗತಿ!

ಇದು ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣವಾಗಲಿದೆ. ಈ ಸಮಯದಲ್ಲಿ ಚಂದ್ರನು ಕೆಂಪು ಬಣ್ಣದಲ್ಲಿ ಗೋಚರಿಸುವುದರಿಂದ ಇದನ್ನು ರಕ್ತ ಚಂದ್ರ ಎಂದು ಕರೆಯಲಾಗುತ್ತದೆ.

ಹಿಂದೂ ಧರ್ಮದಲ್ಲಿ ಚಂದ್ರಗ್ರಹಣವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಇದು ಖಗೋಳ ಘಟನೆಯಾಗಿದ್ದು, ಇದು ಧಾರ್ಮಿಕ ಮಹತ್ವವನ್ನು ಸಹ ಹೊಂದಿದೆ. ಭಾದ್ರಪದ ಪೂರ್ಣಿಮೆ ಸೆಪ್ಟೆಂಬರ್ 7ರಂದು ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣವಾಗಲಿದೆ. ಈ ಸಮಯದಲ್ಲಿ ಚಂದ್ರನು ಕೆಂಪು ಬಣ್ಣದಲ್ಲಿ ಗೋಚರಿಸುವುದರಿಂದ ಇದನ್ನು ರಕ್ತ ಚಂದ್ರ ಎಂದು ಕರೆಯಲಾಗುತ್ತದೆ. ಈ ಚಂದ್ರಗ್ರಹಣವು ಭಾರತದಲ್ಲಿ ಸಂಪೂರ್ಣವಾಗಿ ಗೋಚರಿಸುತ್ತದೆ.

ಭಾರತದಲ್ಲಿ ಗೋಚರಿಸುವುದರಿಂದ, ಅದರ ಸೂತಕ ಅವಧಿಯು ಸಹ ಮುಖ್ಯವಾಗುತ್ತದೆ. ಸೂತಕ ಅವಧಿಯಲ್ಲಿ, ದೇವಾಲಯಗಳ ಬಾಗಿಲುಗಳನ್ನು ಮುಚ್ಚಲಾಗುತ್ತದೆ. ಆ ಸಮಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಯಲ್ಲ. ವರ್ಷದ ಎರಡನೇ ಚಂದ್ರಗ್ರಹಣದ ಸಮಯ ಯಾವುದು, ಯಾವ ಸಮಯದಲ್ಲಿ ಉತ್ತುಂಗದಲ್ಲಿರುತ್ತದೆ ಮತ್ತು ಸೂತಕ ಅವಧಿ ಸೇರಿದಂತೆ 5 ವಿಶೇಷ ವಿಷಯಗಳನ್ನು ತಿಳಿಯಿರಿ.

  1. ಸೆ.7ರಂದು ಚಂದ್ರಗ್ರಹಣ ಎಷ್ಟು ಸಮಯದಿಂದ ಎಷ್ಟು ಸಮಯದವರೆಗೆ ಇರುತ್ತದೆ: ಚಂದ್ರಗ್ರಹಣವು ಸೆಪ್ಟೆಂಬರ್ 7ರಂದು ಭಾದ್ರಪದ ಪೂರ್ಣಿಮೆಯ ದಿನದಂದು ಪ್ರಾರಂಭವಾಗಿ ಸೆಪ್ಟೆಂಬರ್ 8ರ ಮಧ್ಯರಾತ್ರಿಯಲ್ಲಿ ಕೊನೆಗೊಳ್ಳುತ್ತದೆ. ಸೆಪ್ಟೆಂಬರ್ 7 ರಂದು ರಾತ್ರಿ 09:57 ರಿಂದ ಸೆಪ್ಟೆಂಬರ್ 8 ರಂದು ಬೆಳಿಗ್ಗೆ 01:26 ರವರೆಗೆ ಇರುತ್ತದೆ. ಚಂದ್ರಗ್ರಹಣದ ಒಟ್ಟು ಅವಧಿ 03 ಗಂಟೆ 29 ನಿಮಿಷಗಳು.

  2. ಚಂದ್ರಗ್ರಹಣವು ಯಾವ ಸಮಯದಲ್ಲಿ ಉತ್ತುಂಗದಲ್ಲಿರುತ್ತದೆ: ವೈದಿಕ ಕ್ಯಾಲೆಂಡರ್ ಪ್ರಕಾರ, ಈ ಚಂದ್ರಗ್ರಹಣವು ರಾತ್ರಿ 11 ರಿಂದ 12:22 ರವರೆಗೆ ಉತ್ತುಂಗದಲ್ಲಿರುತ್ತದೆ.

  3. ಚಂದ್ರಗ್ರಹಣದ ಸೂತಕ ಅವಧಿ ಯಾವಾಗ ಪ್ರಾರಂಭ: ಚಂದ್ರಗ್ರಹಣದ ಸೂತಕ ಅವಧಿಯು ಸೆಪ್ಟೆಂಬರ್ 7ರಂದು ಮಧ್ಯಾಹ್ನ 12:57ಕ್ಕೆ ಪ್ರಾರಂಭವಾಗುತ್ತದೆ. ಗ್ರಹಣ ಮುಗಿದ ತಕ್ಷಣ ಸೂತಕ ಅವಧಿಯು ಕೊನೆಗೊಳ್ಳುತ್ತದೆ.

  4. ಚಂದ್ರಗ್ರಹಣದ ಸಮಯದಲ್ಲಿ ಏನು ಮಾಡಬೇಕು: ಧಾರ್ಮಿಕ ನಂಬಿಕೆಗಳ ಪ್ರಕಾರ, ಚಂದ್ರಗ್ರಹಣದ ಸಮಯದಲ್ಲಿ ಆಹಾರವನ್ನು ಬೇಯಿಸಬಾರದು ಅಥವಾ ತಿನ್ನಬಾರದು. ಈ ಸಮಯದಲ್ಲಿ, ಸೂಜಿ, ಕತ್ತರಿ ಮತ್ತು ಚಾಕು ಮುಂತಾದ ಯಾವುದೇ ಚೂಪಾದ ವಸ್ತುಗಳನ್ನು ಬಳಸಬಾರದು. ಗ್ರಹಣದ ಸಮಯದಲ್ಲಿ ಪೂಜೆಯನ್ನು ನಿಷೇಧಿಸಲಾಗಿದೆ.

  5. ಭಾರತದಲ್ಲಿ ಚಂದ್ರಗ್ರಹಣ ಎಲ್ಲಿ ಗೋಚರಿಸುತ್ತದೆ: ಭಾರತ ಸೇರಿದಂತೆ ಪ್ರಪಂಚದ ಹಲವು ಭಾಗಗಳಲ್ಲಿ ಚಂದ್ರಗ್ರಹಣ ಗೋಚರಿಸುತ್ತದೆ. ಭಾರತದಲ್ಲಿ ಈ ಗ್ರಹಣವು ದೆಹಲಿ, ಮುಂಬೈ, ಕೋಲ್ಕತ್ತಾ, ಪುಣೆ, ಲಕ್ನೋ, ಹೈದರಾಬಾದ್ ಮತ್ತು ಚಂಡೀಗಢದಲ್ಲಿ ಗೋಚರಿಸುತ್ತದೆ. ಇದಲ್ಲದೆ, ಆಸ್ಟ್ರೇಲಿಯಾ, ಉತ್ತರ ಮತ್ತು ದಕ್ಷಿಣ ಅಮೆರಿಕಾ, ನ್ಯೂಜಿಲೆಂಡ್, ಫಿಜಿ ದ್ವೀಪಸಮೂಹ ಮತ್ತು ಅಂಟಾರ್ಕ್ಟಿಕಾದ ಕೆಲವು ಭಾಗಗಳಲ್ಲಿ ಈ ಗ್ರಹಣ ಗೋಚರಿಸುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

MUDA ಕೇಸ್: ಸಿಎಂಗೆ ಕ್ಲೀನ್ ಚಿಟ್ ನೀಡಿದ್ದ ದೇಸಾಯಿ ಆಯೋಗ ವರದಿಗೆ ಸಂಪುಟ ಅನುಮೋದನೆ, ಅಧಿಕಾರಿಗಳು-ಅಕ್ರಮ ಫಲಾನುಭವಿಗಳಿಂದ ನಷ್ಟ ವಸೂಲಿಗೆ ನಿರ್ಧಾರ

ಬೆಂಗಳೂರಿನಲ್ಲಿ ಈದ್ ಮಿಲಾದ್ ಸಂಭ್ರಮ; ನಗರದ ಹಲವಡೆ ಸಂಚಾರ ಬದಲಾವಣೆ, ಪರ್ಯಾಯ ಮಾರ್ಗಗಳು ಹೀಗಿವೆ...

"ಸ್ವತಂತ್ರ ಭಾರತದ ಅತಿದೊಡ್ಡ ಸುಧಾರಣೆ"- GST ಸುಧಾರಣೆ ಶ್ಲಾಘಿಸಿದ ಪ್ರಧಾನಿ ಮೋದಿ

ಜಿಎಸ್‌ಟಿ ಕಡಿತ ಲಾಭ ಗ್ರಾಹಕರಿಗೆ ವರ್ಗಾಯಿಸುವುದಾಗಿ ಮುಖೇಶ್ ಅಂಬಾನಿ ಭರವಸೆ

ಕನಕಪುರದಲ್ಲಿ ಮೆಡಿಕಲ್ ಕಾಲೇಜ್; ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆಗೆ ಸಂಪುಟ ಅಸ್ತು

SCROLL FOR NEXT