ಜೆಎಸ್‌ಡಬ್ಲ್ಯು ಗ್ರೂಪ್ 
ದೇಶ

ಛತ್ತೀಸಗಢ: ಜೆಎಸ್‌ಡಬ್ಲ್ಯು ಸ್ಟೀಲ್ ಪ್ಲಾಂಟ್‌ನಲ್ಲಿ 'ಅವಘಡ'; ಡೆಪ್ಯುಟಿ ಮ್ಯಾನೇಜರ್ ಸಾವು

ಭೂಪ್‌ದೇವ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಹರ್‌ಪಾಲಿ ಗ್ರಾಮದ ಘಟಕದಲ್ಲಿರುವ ಸಿಂಟರ್ ಪ್ಲಾಂಟ್ ವಿಭಾಗದ ಅಂಗಳದಲ್ಲಿ ಬೆಳಿಗ್ಗೆ ಈ ಘಟನೆ ನಡೆದಿದೆ.

ರಾಯಗಢ: ಛತ್ತೀಸಗಢದ ರಾಯಗಢ ಜಿಲ್ಲೆಯ ಜೆಎಸ್‌ಡಬ್ಲ್ಯು ಸ್ಟೀಲ್ ಲಿಮಿಟೆಡ್‌ನ ಸ್ಥಾವರದಲ್ಲಿ ಗುರುವಾರ ನಡೆದ ಅಪಘಾತದಲ್ಲಿ ಉಪ ವ್ಯವಸ್ಥಾಪಕರೊಬ್ಬರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಭೂಪ್‌ದೇವ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಹರ್‌ಪಾಲಿ ಗ್ರಾಮದ ಘಟಕದಲ್ಲಿರುವ ಸಿಂಟರ್ ಪ್ಲಾಂಟ್ ವಿಭಾಗದ ಅಂಗಳದಲ್ಲಿ ಬೆಳಿಗ್ಗೆ ಈ ಘಟನೆ ನಡೆದಿದೆ ಎಂದು ಖಾರ್ಸಿಯಾ ಪಟ್ಟಣದ ಉಪ-ವಿಭಾಗದ ಪೊಲೀಸ್ ಅಧಿಕಾರಿ (ಎಸ್‌ಡಿಒಪಿ) ಪ್ರಭಾತ್ ಪಟೇಲ್ ತಿಳಿಸಿದ್ದಾರೆ.

'ಅವಘಡ'ದ ನಂತರ, ರಾಯಗಢ ಜಿಲ್ಲೆಯ ತಾರಾಪುರ ನಿವಾಸಿಯಾದ ಉಪ ವ್ಯವಸ್ಥಾಪಕ ರವೀಂದ್ರ ದನ್ಸೇನ (43) ಅವರನ್ನು ಜಿಂದಾಲ್ ಫೋರ್ಟಿಸ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಆ ವೇಳೆಗಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಮಾರಕ ಘಟನೆ ಹೇಗೆ ಸಂಭವಿಸಿತು ಎಂಬುದನ್ನು ಪೊಲೀಸರು ತಿಳಿಸಿಲ್ಲ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪಟೇಲ್ ಮಾಹಿತಿ ನೀಡಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

India vs Pakistan T20 World Cup 2026: ಪಂದ್ಯ ಬಹಿಷ್ಕರಿಸುವ​ ನಿರ್ಧಾರ, ನಮ್ಮ ನಿಲುವು ಸ್ಪಷ್ಟ ಎಂದ ಪಾಕ್ ಪ್ರಧಾನಿ

Namma Metro Price Hike: ಪರಿಷ್ಕೃತ ದರ ಪ್ರಕಟ, ಫೆಬ್ರವರಿ.9 ರಿಂದ ಹೊಸ ದರ ಜಾರಿಗೆ..!

'ನಾನು ಜೀವನದ ಸಂಧ್ಯಾಕಾಲದಲ್ಲಿದ್ದೇನೆ: ಈ ವೃದ್ಧನ ಮನವಿಗೆ ಮಾನವೀಯತೆಯಿಂದ ಸ್ಪಂದಿಸಿ; ಕರ್ನಾಟಕವನ್ನು ರಕ್ಷಿಸಿ'

ಶಶಿ ತರೂರ್ ಪುತ್ರ ಸೇರಿ 500 ಮಂದಿ ಕಿತ್ತೊಗೆದ ವಾಷಿಂಗ್ಟನ್ ಪೋಸ್ಟ್: 'ನನ್ನ ಹೃದಯ ಒಡೆದಿದೆ' ಎಂದ ಇಶಾನ್!

ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ 2026: "ಸಂಪಾಯಿತಲೇ ಪರಾಕ್' ಭವಿಷ್ಯವಾಣಿ ನುಡಿದ ಗೊರವಯ್ಯ, ಏನಿದರ ಅರ್ಥ..?

SCROLL FOR NEXT