ನವದೆಹಲಿ: ದಿವಂಗತ ಉದ್ಯಮಿ ಸಂಜಯ್ ಕಪೂರ್ ಅವರ ಅಂದಾಜು ರೂ. 30,000 ಕೋಟಿ ಮೊತ್ತದ ಎಸ್ಟೇಟ್ ನಲ್ಲಿ ನ್ಯಾಯಯುತ ಪಾಲಿಗಾಗಿ ಅವರ ಎರಡನೇ ಪತ್ನಿ ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಅವರ ಇಬ್ಬರ ಮಕ್ಕಳು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಇಡೀ ಆಸ್ತಿ ಕಬಳಿಸಲು ಯತ್ನದ ಆರೋಪ:
ತಮ್ಮ ಮಲತಾಯಿ, ಸಂಜಯ್ ಕಪೂರ್ ಅವರ ಮೂರನೇ ಪತ್ನಿ ಪ್ರಿಯಾ ಕಪೂರ್ ಇಡೀ ಆಸ್ತಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ತಂದೆಯ ವಿಲ್ ನ್ನು ನಕಲು ಮಾಡಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿ ಸಿವಿಲ್ ಮೊಕದ್ದಮೆ ದಾಖಲಿಸಿದ್ದಾರೆ. ಕಾನೂನು ತಮ್ಮ ತಾಯಿಯ ಮೂಲಕ ಪ್ರತಿನಿಧಿಸಿರುವ ಮಕ್ಕಳು, ಎಸ್ಟೇಟ್ ಪಾಲು, ಖಾತೆಗಳ ವಿವರಣೆ ಮತ್ತು ಪ್ರತಿವಾದಿಗಳ ವಿರುದ್ಧ ಶಾಶ್ವತ ತಡೆಯಾಜ್ಞೆಯನ್ನು ಕೋರಿದ್ದಾರೆ.
ತಮ್ಮ ತಂದೆಯ ಮರಣದ ಸಮಯದಲ್ಲಿ ಅವರ ಆಸ್ತಿಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದಿರಲಿಲ್ಲ ಎಂದು ದೂರಿನಲ್ಲಿ ಅವರು ತಿಳಿಸಿದ್ದಾರೆ. ಗೊತ್ತಿರುವ ಆಸ್ತಿಗಳ ಪಟ್ಟಿಯನ್ನು ದೂರಿನಲ್ಲಿ ಲಗತ್ತಿಸಿದ್ದಾರೆ. ಆದರೆ ಆರೋಪಿ ನಂ. 1 ಆಗಿರುವ ಪ್ರಿಯಾ ಕಪೂರ್ ವಿವರಗಳನ್ನು ಮರೆಮಾಚಿದ್ದಾರೆ ಮತ್ತು ಇಡೀ ಆಸ್ತಿಯ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಅವರು ಆರೋಪಿಸಿದ್ದಾರೆ.
ತಂದೆಯ ನಕಲಿ ಸಹಿಯ ವಿಲ್
ತಮ್ಮ ತಂದೆಯ ಪ್ರಯಾಣಗಳು, ರಜಾದಿನಗಳು, ಅವರ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದು ಸೇರಿದಂತೆ ಜೂನ್ 12, 2025 ರಂದು ಯುಕೆಯ ವಿಂಡರ್ಸರ್ ನಲ್ಲಿ ಫೋಲೋ ಆಡುವಾಗ ಹಠಾತ್ ನಿಧನದವರೆಗೂ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದೇವೆ ಎಂದು ಅವರು ವಾದಿಸಿದ್ದಾರೆ. ಆರಂಭದಲ್ಲಿ ಯಾವುದೇ ವಿಲ್ ಬರೆದಿಲ್ಲ ಸಂಜಯ್ ಕಪೂರ್ ಅವರ ಎಲ್ಲಾ ಆಸ್ತಿಗಳನ್ನು R.K. Family trust ಅಡಿಯಲ್ಲಿ ಇರಿಸಲಾಗಿದೆ ಎಂದು ಹೇಳುತ್ತಿದ್ದ ಪ್ರಿಯಾ ಕಪೂರ್, 'ವಿಲ್' ಎಂದು ಹೇಳಿ ಮಾರ್ಚ್ 21, 2025 ರಂದು ದಾಖಲೆಯೊಂದನ್ನು ತೋರಿಸಿದ್ದಾರೆ. ತಮ್ಮ ತಂದೆಯ ನಕಲಿ ಸಹಿ ಮಾಡಲಾಗಿದ್ದು, ಇದರಲ್ಲಿ ಹಲವರು ತೊಡಗಿರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ದೂರುದಾರರಾದ ಕರಿಷ್ಮಾ ಕಪೂರ್ ಮತ್ತು ಸಂಜಯ್ ಕಪೂರ್ ಅವರ ಮಗಳು ಮತ್ತು ಅಪ್ರಾಪ್ತ ಮಗ, ಅವರ ತಾಯಿಯ ಮೂಲಕ ನ್ಯಾಯಾಲಯದಲ್ಲಿ ಪ್ರತಿನಿಧಿಸುತ್ತಿದ್ದಾರೆ. ಮೊದಲ ಮತ್ತು ಎರಡನೇ ಆರೋಪಿಯಾಗಿರುವ ಪ್ರಿಯಾ ಕಪೂರ್ ಮತ್ತು ಅವರ ಅಪ್ರಾಪ್ತ ಮಗ, ಇಬ್ಬರೂ ರಾಜೋಕ್ರಿಯಲ್ಲಿರುವ ಕುಟುಂಬದ ಫಾರ್ಮ್‌ಹೌಸ್‌ನಲ್ಲಿ ವಾಸಿಸುತ್ತಿದ್ದಾರೆ. ಮೂರನೇ ಪ್ರತಿವಾದಿಯಾಗಿರುವ ಸಂಜಯ್ ಕಪೂರ್ ಅವರ ತಾಯಿ ಕೂಡಾ ಅದೇ ನಿವಾಸದಲ್ಲಿ ವಾಸಿಸುತ್ತಿದ್ದಾರೆ.
ನಾಲ್ಕನೇ ಪ್ರತಿವಾದಿ ಮಹಿಳೆಯಾಗಿದ್ದು, ಅವರು ವಿಲ್ ನ ನಿರ್ವಾಹಕಿ ಎಂದು ಗುರುತಿಸಿಕೊಂಡಿದ್ದಾರೆ. ಸಂಜಯ್ ಕಪೂರ್ ಬದುಕಿದಾಗ ತಮ್ಮ ಆರ್ಥಿಕ ಭದ್ರತೆ ಮತ್ತು ಭವಿಷ್ಯದ ಯೋಗಕ್ಷೇಮದ ಬಗ್ಗೆ ಪದೇ ಪದೇ ಭರವಸೆ ನೀಡಿದ್ದರು. ಅವರು ತಮ್ಮ ಹೆಸರಿನಲ್ಲಿ ಉದ್ಯಮ ಆರಂಭಿಸುವುದಾಗಿ ಹೇಳುತ್ತಿದ್ದರು. ವೈಯಕ್ತಿಕವಾಗಿ ಮತ್ತು ಕಾರ್ಪೊರೇಟ್ ಸಂಸ್ಥೆಗಳ ಮೂಲಕ ಆಸ್ತಿಗಳನ್ನು ಸಂಪಾದಿಸಿದ್ದು, ತಮ್ಮ ಕುಟುಂಬದ ಟ್ರಸ್ಟನ್ ಫಲಾನುಭವಿಗಳಾಗಿ ತಮ್ಮ ಹೆಸರಿಸಿದ್ದಾರೆ ಎಂಬುದು ಕರಿಷ್ಮಾ ಕಪೂರ್ ಮಕ್ಕಳು ವಾದವಾಗಿದೆ.