ನವದೆಹಲಿ: ರಾಜಕೀಯವಾಗಿ ನನ್ನನ್ನು ಟಾರ್ಗೆಟ್ ಮಾಡಲು ಸಾಮಾಜಿಕ ಮಾಧ್ಯಮಗಳಲ್ಲಿ 'Paid campaign ಮಾಡಲಾಗುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಗುರುವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಎಥೆನಾಲ್ ಮಿಶ್ರಿತ ಇಂಧನ ಬಿಡುಗಡೆ ವಿರುದ್ಧ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಈ ಹೇಳಿಕೆ ನೀಡಿರುವ ನಿತಿನ್ ಗಡ್ಕರಿ, ನನ್ನ ತೇಜೋವಧೆ ಮಾಡಲು ಹಣ ನೀಡಿ ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಭಾರತೀಯ ಆಟೋಮೊಬೈಲ್ ತಯಾರಕ ಸಂಘದ (SIAM) 65 ನೇ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ಗಡ್ಕರಿ, ಸಾಂಪ್ರದಾಯಿಕ ಇಂಧನದೊಂದಿಗೆ ಶೇ. 20 ರಷ್ಟು ಎಥೆನಾಲ್ ಬೆರೆಸುವ E20 E20 ಪೆಟ್ರೋಲ್ ಬಗ್ಗೆ ಸಾಮಾಜಿಕ ಜಾಲತಾಣಗಲ್ಲಿ ಕಳವಳ ವ್ಯಕ್ತವಾಗುತ್ತಿದ್ದು, ಇಂಧನವು ಸುರಕ್ಷಿತವಾಗಿದೆ. ನಿಯಂತ್ರಕರು ಮತ್ತು ವಾಹನ ತಯಾರಕರು ಇಬ್ಬರು ಇದನ್ನು ಬೆಂಬಲಿಸುತ್ತಾರೆ ಎಂದರು.
ARAI ಮತ್ತು ಸುಪ್ರೀಂ ಕೋರ್ಟ್ ಇ20 ಕಾರ್ಯಕ್ರಮದ ಬಗ್ಗೆ ಸ್ಪಷ್ಟನೆ ನೀಡಿದೆ. ನನ್ನನ್ನು ರಾಜಕೀಯವಾಗಿ ಟಾರ್ಗೆಟ್ ಮಾಡಲು ಸಾಮಾಜಿಕ ಜಾಲತಾಣ ಬಳಕೆದಾರರಿಗೆ ಹಣ ನೀಡಿ (Paid Campaign) ಆಗಿದ್ದು, ಅದರತ್ತ ಗಮನ ಹರಿಸಬೇಡಿ ಎಂದು ಹೇಳಿದರು.
ಇತ್ತೀಚಿಗೆ ಎಥೆನಾಲ್ ಮಿಶ್ರಣದ ಕುರಿತ ಜನರಿಂದ ಸಚಿವ ನಿತಿನ್ ಗಡ್ಕರಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ವಾಹನ ಚಾಲಕರು ಇಂಧನ ಮೈಲೇಜ್ ನ್ನು ಕಡಿಮೆ ಮಾಡುತ್ತದೆ ಎಂದು ಹಳೆಯ ವಾಹನಗಳಿಗೆ ಹಾನಿಯನ್ನುಂಟು ಮಾಡುತ್ತದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಈ ಇಂಧನ ಸುರಕ್ಷಿತವಾಗಿರುವುದಾಗಿ ನಿಯಂತ್ರಕರು ಮತ್ತು ವಾಹನ ತಯಾರಕರು ಇಬ್ಬರು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಸಚಿವ ನಿತಿನ್ ಗಡ್ಕರಿ ಸಮರ್ಥಿಸಿಕೊಳ್ಳುತ್ತಿದ್ದಾರೆ.
ಕಳೆದ ತಿಂಗಳು ಬ್ಯುಸಿನೆಸ್ ಟುಡೇ ಇಂಡಿಯಾ@100 ಶೃಂಗಸಭೆಯಲ್ಲಿ E20 ನಿಂದ ಕಾರು ಹಾನಿಗೊಳದ ಒಂದೇ ಒಂದು ನಿದರ್ಶನ ತೋರಿಸಲು ಟೀಕಾಕಾರರಿಗೆ ಸವಾಲು ಹಾಕಿದ್ದರು. ಈ ತಿಂಗಳ ಆರಂಭದಲ್ಲಿ ಸುಪ್ರೀಂಕೋರ್ಟ್ E20 ಬಿಡುಗಡೆ ನಿಲ್ಲಿಸಲು ಮತ್ತು ಪಂಪ್ ಗಳಲ್ಲಿ ಎಥೆನಾಲ್ ಮುಕ್ತ ಪೆಟ್ರೋಲ್ ಕಡ್ಡಾಯಗೊಳಿಸಲು ಪ್ರಯತ್ನಿಸಿದ್ದ ಅರ್ಜಿಯನ್ನು ವಜಾಗೊಳಿಸುವ ಮೂಲಕ ಸರ್ಕಾರದ ನಿಲುವನ್ನು ಬಲಪಡಿಸಿತ್ತು.