ದೆಹಲಿ ಹೈಕೋರ್ಟ್ 
ದೇಶ

ದೆಹಲಿ ಹೈಕೋರ್ಟ್‌ಗೆ ಬಾಂಬ್ ಬೆದರಿಕೆ: ಆತಂಕದಿಂದ ಎದ್ದು ನಿಂತ ನ್ಯಾಯಾಧೀಶರು!

ಮೂಲಗಳ ಪ್ರಕಾರ, ರಿಜಿಸ್ಟ್ರಾರ್ ಜನರಲ್ ಅವರಿಗೆ ಇಂದು ಬೆಳಗ್ಗೆ 8.39 ಕ್ಕೆ ಇ-ಮೇಲ್ ಬಂದಿದ್ದು, ಕೆಲವು ನ್ಯಾಯಾಧೀಶರಿಗೆ ಅದರ ಬಗ್ಗೆ ತಿಳಿಸಲಾಗಿದೆ.

ನವದೆಹಲಿ: ದೆಹಲಿ ಹೈಕೋರ್ಟ್‌ಗೆ ಶುಕ್ರವಾರ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಕೋರ್ಟ್ ಆವರಣದಲ್ಲಿ ಆತಂಕ ಮನೆ ಮಾಡಿತು ಮತ್ತು ನ್ಯಾಯಾಧೀಶರು ಸಹ ಡಯಾಸ್ ನಿಂದ ಎದ್ದೇಳಬೇಕಾಯಿತು. ಅಲ್ಲದೆ ನ್ಯಾಯಾಲಯದ ಕೊಠಡಿಗಳನ್ನು ತೆರವುಗೊಳಿಸಲಾಯಿತು.

ಮೂಲಗಳ ಪ್ರಕಾರ, ರಿಜಿಸ್ಟ್ರಾರ್ ಜನರಲ್ ಅವರಿಗೆ ಇಂದು ಬೆಳಗ್ಗೆ 8.39 ಕ್ಕೆ ಇ-ಮೇಲ್ ಬಂದಿದ್ದು, ಕೆಲವು ನ್ಯಾಯಾಧೀಶರಿಗೆ ಅದರ ಬಗ್ಗೆ ತಿಳಿಸಲಾಗಿದೆ.

ಬೆದರಿಕೆ ಇಮೇಲ್‌ನಲ್ಲಿ ದೆಹಲಿ ಹೈಕೋರ್ಟ್ ಬಗ್ಗೆ ಉಲ್ಲೇಖಿಸಲಾಗಿದ್ದು, ಹೈಕೋರ್ಟ್ ಸಿಬ್ಬಂದಿಯನ್ನು ಉದ್ದೇಶಿಸಿ "ಪವಿತ್ರ ಶುಕ್ರವಾರದ ಸ್ಫೋಟಗಳಿಗೆ ಪಾಕಿಸ್ತಾನ ತಮಿಳುನಾಡು ಕೈಜೋಡಿಸಿದೆ. ನ್ಯಾಯಾಧೀಶರ ಕೊಠಡಿ/ಕೋರ್ಟ್ ಆವರಣದಲ್ಲಿ 3 ಬಾಂಬ್‌ಗಳನ್ನು ಇಡಲಾಗಿದೆ. ಮಧ್ಯಾಹ್ನ 2 ಗಂಟೆಯೊಳಗೆ ಎಲ್ಲರೂ ಸ್ಥಳಾಂತರಗೊಳ್ಳಿ" ಎಂದು ಬರೆಯಲಾಗಿದೆ.

ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಕೋರ್ಟ್ ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ ಮತ್ತು ನ್ಯಾಯಾಲಯದ ಆವರಣದಲ್ಲಿದ್ದ ಎಲ್ಲರೂ ಅಲ್ಲಿಂದ ತೆರಳುವಂತೆ ಕೇಳಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪ್ರಧಾನಿ ಮೋದಿ ಈಗ ಮಣಿಪುರ ಭೇಟಿ 'ದೊಡ್ಡ ವಿಷಯ'ವಲ್ಲ; 'ವೋಟ್ ಚೋರಿ' ದೇಶದ ಪ್ರಮುಖ ವಿಷಯ: ರಾಹುಲ್ ಗಾಂಧಿ

ಮದ್ದೂರು ಕೋಮು ಗಲಭೆ: ಮಂಡ್ಯ ಹೆಚ್ಚುವರಿ ಎಸ್‌ಪಿ ವರ್ಗಾವಣೆ

ಜಾತಿಗಣತಿ ಮರು ಸಮೀಕ್ಷೆಗೆ ಸರ್ಕಾರ ನಿರ್ಧಾರ, ಸೆ.22ರಿಂದ ಸರ್ವೇ ಆರಂಭ: ಸಿಎಂ ಸಿದ್ದರಾಮಯ್ಯ

ಧರ್ಮಸ್ಥಳ ಪ್ರಕರಣ: ಬುರುಡೆ Media ಷಡ್ಯಂತ್ರ? ಹೊಸ ವಿಡಿಯೋ ಬಿಡುಗಡೆ ಮಾಡಿದ ಯು ಟ್ಯೂಬರ್ ಸಮೀರ್! video

Trump Unusual President: ಅವರಿಗಿಂತ ಮುನ್ನ ಅಮೆರಿಕ ಅಧ್ಯಕ್ಷರಾಗಿದ್ದವರು ಎಂದಿಗೂ ಈ ರೀತಿಯ ವರ್ತನೆ ತೋರಿರಲಿಲ್ಲ-ಶಶಿ ತರೂರ್ ಕಿಡಿ!

SCROLL FOR NEXT