ಸಿ ಪಿ ರಾಧಾಕೃಷ್ಣನ್ ಮತ್ತು ಅವರ ತಾಯಿ 
ದೇಶ

'ನನ್ನ ಮಗ ಹುಟ್ಟಿದಾಗ' ರಾಧಾಕೃಷ್ಣನ್ ಎಂದು ಹೆಸರಿಟ್ಟ ಹಿಂದಿನ ಆಸಕ್ತಿಕರ ಸಂಗತಿ ಹೇಳಿದ ಉಪ ರಾಷ್ಟ್ರಪತಿಗಳ ತಾಯಿ

ಸಿ.ಪಿ. ರಾಧಾಕೃಷ್ಣನ್ ಅವರ ಗೆಲುವಿನ ಬಗ್ಗೆ ಅವರ ತಾಯಿ ಜಾನಕಿ ಅಮ್ಮಾಳ್ ಸಂತೋಷ ವ್ಯಕ್ತಪಡಿಸಿದರು. ತಮ್ಮ ಮಗ ಉನ್ನತ ಸ್ಥಾನಕ್ಕೆ ಏರಿರುವುದು ತುಂಬಾ ಸಂತೋಷದ ವಿಷಯ ಎಂದು ಹೇಳಿದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಿ.ಪಿ. ರಾಧಾಕೃಷ್ಣನ್ ಅವರಿಗೆ ಇಂದು ಪ್ರಮಾಣವಚನ ಬೋಧಿಸುವ ಮೂಲಕ ದೇಶದ 15ನೇ ಉಪ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದರು. ಕೆಂಪು ಕುರ್ತಾ ಧರಿಸಿ, ದೇವರ ಹೆಸರಿನಲ್ಲಿ ಇಂಗ್ಲಿಷ್‌ನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಕಳೆದ ಮಂಗಳವಾರ ನಡೆದ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಮಹಾರಾಷ್ಟ್ರ ರಾಜ್ಯಪಾಲರಾಗಿದ್ದ ಸಿ.ಪಿ. ರಾಧಾಕೃಷ್ಣನ್ ಅವರು ಭಾರತದ 15ನೇ ಉಪರಾಷ್ಟ್ರಪತಿಯಾಗಿ ಆಯ್ಕೆಯಾದರು. ಅವರು ತಮ್ಮ ಪ್ರತಿಸ್ಪರ್ಧಿ ಇಂಡಿಯಾ ಬ್ಲಾಕ್ ಅಭ್ಯರ್ಥಿ ಮತ್ತು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಬಿ. ಸುದರ್ಶನ್ ರೆಡ್ಡಿ ಅವರನ್ನು ಸೋಲಿಸಿದರು.

ಸಿ.ಪಿ. ರಾಧಾಕೃಷ್ಣನ್ ಅವರ ಗೆಲುವಿನ ಬಗ್ಗೆ ಅವರ ತಾಯಿ ಜಾನಕಿ ಅಮ್ಮಾಳ್ ಸಂತೋಷ ವ್ಯಕ್ತಪಡಿಸಿದರು. ತಮ್ಮ ಮಗ ಉನ್ನತ ಸ್ಥಾನಕ್ಕೆ ಏರಿರುವುದು ತುಂಬಾ ಸಂತೋಷದ ವಿಷಯ ಎಂದು ಹೇಳಿದರು.

ಮಗನ ಹೆಸರಿನ ಹಿಂದಿನ ಕಥೆಯನ್ನು ಸ್ಮರಿಸಿಕೊಂಡ ತಾಯಿ

ಸಿ ಪಿ ರಾಧಾಕೃಷ್ಣನ್ ಅವರ ಹೆಸರಿನ ಹಿಂದಿನ ಕಥೆಯನ್ನು ಅವರ ತಾಯಿ ಪ್ರೀತಿಯಿಂದ ನೆನಪಿಸಿಕೊಂಡರು. ಸುದ್ದಿ ಸಂಸ್ಥೆ ANI ಜೊತೆ ಮಾತನಾಡುತ್ತಾ, ಜಾನಕಿ ಅಮ್ಮಲ್ ಅವರು ತಮ್ಮ ಮಗನಿಗೆ ಭಾರತದ ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹೆಸರನ್ನು ಇಟ್ಟಿದ್ದಾಗಿ ಹೇಳಿದರು.

ತಮ್ಮ ಮಗ ಜನಿಸಿದಾಗ, ಅಂದಿನ ದೇಶದ ರಾಷ್ಟ್ರಪತಿ ರಾಧಾಕೃಷ್ಣನ್ ಅವರು ಅಧಿಕಾರದಲ್ಲಿದ್ದರು. ನಾನು ಆ ಸಮಯದಲ್ಲಿ ಶಿಕ್ಷಕಿಯಾಗಿದ್ದೆ. ಮಾಜಿ ರಾಷ್ಟ್ರಪತಿಗಳ ನೆನಪಿಗಾಗಿ ಮಗನಿಗೆ ಆ ಹೆಸರನ್ನಿಟ್ಟೆ ಎಂದರು.

ನನ್ನ ಮಗ ಜನಿಸಿದಾಗ, ಅಂದಿನ ರಾಷ್ಟ್ರಪತಿ ರಾಧಾಕೃಷ್ಣನ್ ಅವರು ಅಧಿಕಾರದಲ್ಲಿದ್ದರು. ಅವರು ಶಿಕ್ಷಕರಾಗಿದ್ದರು, ಮತ್ತು ನಾನು ಕೂಡ ಶಿಕ್ಷರಿಯಾಗಿದ್ದೆ. ಅವರ ನೆನಪಿಗಾಗಿ, ನಾನು ನನ್ನ ಮಗನಿಗೆ ಅವರ ಹೆಸರಿಟ್ಟಿದ್ದೇನೆ ಎಂದು ಎಂದರು.

ಮಗನಿಗೆ ರಾಧಾಕೃಷ್ಣನ್ ಎಂದೇ ಏಕೆ ಇಟ್ಟಿದ್ದೀಯಾ ಎಂದು ಕೇಳಿದ ಪತಿ

“ಆ ಸಮಯದಲ್ಲಿ, ನನ್ನ ಪತಿ ನನ್ನನ್ನು ನೋಡಿ, ನಿನ್ನ ಮಗ ಒಂದು ದಿನ ರಾಷ್ಟ್ರಪತಿಯಾಗಬೇಕೆಂದು ಬಯಸಿ ಈ ಹೆಸರು ಇಡುತ್ತಿದ್ದೀಯಾ ಎಂದು ಕೇಳಿದ್ದರು. 62 ವರ್ಷಗಳ ನಂತರ, ನನ್ನ ಪತಿ ಹೇಳಿದಂತೆ, ಅದು ನಿಜವಾಗಿದೆ. ನನಗೆ ಅದರ ಬಗ್ಗೆ ತುಂಬಾ ಸಂತೋಷವಾಗಿದೆ ಎಂದರು.

ಸಿ.ಪಿ. ರಾಧಾಕೃಷ್ಣನ್ ಯಾರು

ಚಂದ್ರಾಪುರಂ ಪೊನ್ನುಸ್ವಾಮಿ ರಾಧಾಕೃಷ್ಣನ್, ಜುಲೈ 31, 2024 ರಿಂದ ಮಹಾರಾಷ್ಟ್ರದ 24 ನೇ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದರು, ನಂತರ ಎನ್ಡಿಎ ಉಪ ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಲ್ಪಟ್ಟರು.

ಅವರು ಈ ಹಿಂದೆ ಫೆಬ್ರವರಿ 2023 ರಿಂದ ಜುಲೈ 2024 ರವರೆಗೆ ಜಾರ್ಖಂಡ್ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಮಾರ್ಚ್ ಮತ್ತು ಜುಲೈ 2024 ರ ನಡುವೆ ತೆಲಂಗಾಣ ರಾಜ್ಯಪಾಲ ಮತ್ತು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಹೆಚ್ಚುವರಿ ಜವಾಬ್ದಾರಿಯನ್ನು ಹೊಂದಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಾತಿಗಣತಿ ಮರು ಸಮೀಕ್ಷೆಗೆ ಸರ್ಕಾರ ನಿರ್ಧಾರ, ಸೆ.22ರಿಂದ ಸರ್ವೇ ಆರಂಭ: ಸಿಎಂ ಸಿದ್ದರಾಮಯ್ಯ

ಬುರುಡೆ Media ಷಡ್ಯಂತ್ರ? ಹೊಸ ವಿಡಿಯೋ ಬಿಡುಗಡೆ ಮಾಡಿದ ಯು ಟ್ಯೂಬರ್ ಸಮೀರ್!

Trump Unusual President: ಅವರಿಗಿಂತ ಮುನ್ನ ಅಮೆರಿಕ ಅಧ್ಯಕ್ಷರಾಗಿದ್ದವರು ಎಂದಿಗೂ ಈ ರೀತಿಯ ವರ್ತನೆ ತೋರಿರಲಿಲ್ಲ-ಶಶಿ ತರೂರ್ ಕಿಡಿ!

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನಿವಾಸದ ಬಳಿ ಹೊತ್ತಿ ಉರಿದ ಕಾರು!

'ಕಿರುಚಬೇಡ..ಇಲ್ಲ ಅಂದ್ರೆ ರುಚಿ ನೋಡ್ತಿಯಾ'; 30 ಸಾವಿರ ಕೋಟಿ ರೂ ಆಸ್ತಿ ತಗಾದೆ ವೇಳೆ ನಟಿ Karisma Kapoor ವಕೀಲರ 'ಜಟಾಪಟಿ'! Video

SCROLL FOR NEXT