ಪೊಲೀಸ್ ವಾಹನದಲ್ಲಿ ಕುಳಿತಿದ್ದ ಕುಡುಕರು 
ದೇಶ

'ಎಣ್ಣೆಬೇಕು ಅಣ್ಣಾ..': ಪೊಲೀಸ್ ವಾಹನದ ಕೀ ಕದ್ದು, ಮನೆಗೆ ಡ್ರಾಪ್ ಕೇಳಿದ ಕುಡುಕರು! Video

ಮದ್ಯ ಸೇವಿಸಿದ ಇಬ್ಬರು ವ್ಯಕ್ತಿಗಳು ಪೊಲೀಸರಿಂದಲೇ ಅವರ ಕಾರಿನ ಕೀ ಕದ್ದಿದ್ದಾರೆ. ಬಳಿಕ ಬೊಲೆರೋ ಕಾರಿನೊಳಗೆ ಕುಳಿತು ತಮ್ಮನ್ನು ಮನೆಗೆ ಡ್ರಾಪ್ ಮಾಡುವಂತೆ ಒತ್ತಾಯಿಸಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

ಭುವನೇಶ್ವರ: ಮದ್ಯದ ಅಮಲಿನಲ್ಲಿದ್ದವ ಯಾರ ಮಾತನ್ನೂ ಕೇಳುವುದಿಲ್ಲ ಎಂಬ ಮಾತಿದೆ.. ಆದರೆ ಇಲ್ಲಿ ಇಬ್ಬರು ಭೂಪರು ಕಂಠಪೂರ್ತಿ ಮದ್ಯಸೇವಿಸಿ ಪೊಲೀಸರನ್ನೇ ಮನೆಗೆ ಡ್ರಾಪ್ ಮಾಡುವಂತೆ ಕೇಳಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.

ಹೌದು.. ಒಡಿಶಾದಲ್ಲಿ ಈ ಘಟನೆ ನಡೆದಿದ್ದು, ಮದ್ಯ ಸೇವಿಸಿದ ಇಬ್ಬರು ವ್ಯಕ್ತಿಗಳು ಪೊಲೀಸರಿಂದಲೇ ಅವರ ಕಾರಿನ ಕೀ ಕದ್ದಿದ್ದಾರೆ. ಬಳಿಕ ಬೊಲೆರೋ ಕಾರಿನೊಳಗೆ ಕುಳಿತು ತಮ್ಮನ್ನು ಮನೆಗೆ ಡ್ರಾಪ್ ಮಾಡುವಂತೆ ಒತ್ತಾಯಿಸಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

ಪೊಲೀಸ್ ಅಧಿಕಾರಿ ವಾಹನದ ಕೀ ಕೊಡುವಂತೆ ಕೇಳಿದರೂ ಕೊಡದ ಕುಡುಕರು, “ನಮಗೆ ಹಕ್ಕುಗಳು ಬೇಕು”.. ಮನೆಗೆ ನಮ್ಮನ್ನು ಡ್ರಾಪ್ ಮಾಡಿ ಎಂದು ಕೂಗಾಡಿದ್ದಾನೆ. ಈ ವೇಳೆ ಪೊಲೀಸ್ ಅಧಿಕಾರಿ ನಿರಾಶೆಗೊಂಡು ಅವನ ಮತ್ತು ಅವನ ಸ್ನೇಹಿತನ ಮೇಲೆ ಕೂಗಾಡಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಈ ಕಾರು ನಮ್ಮ ತೆರಿಗೆ ಹಣದಿಂದ ಖರೀದಿ ಮಾಡಿದ್ದು, ಹೀಗಾಗಿ ಇದು ನಮಗೆ ಸೇರಿದ್ದು. ನಮ್ಮನ್ನು ಮನೆಗೆ ಡ್ರಾಪ್ ಮಾಡಬೇಕಿರುವುದು ನಿಮ್ಮ ಕರ್ತವ್ಯ ಎಂದು ವಾದಿಸಿದ್ದಾನೆ. ಅದು ಸಾಧ್ಯವಿಲ್ಲ ಎಂದು ಅಧಿಕಾರಿ ಹೇಳಿದಾಗ ನಾವೇನೂ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿಲ್ಲ. ಬದಲಿಗೆ ನಮ್ಮನ್ನು ಮನೆಗೆ ಬಿಡುವಂತೆ ಕೇಳುತ್ತಿದ್ದೇವೆ. ಅದೇನೂ ತಪ್ಪಲ್ಲವಲ್ಲ ಎಂದು ವಾದಿಸಿದ್ದಾರೆ.

ಈ ವೇಳೆ ತಾಳ್ಮೆ ಕಳೆದುಕೊಂಡ ಪೊಲೀಸರು ಬಲವಂತವಾಗಿ ಅವರ ಜೇಬಿಗೆ ಕೈ ಹಾಕಿ ಕೀ ಹುಡುಕಿದ್ದಾರೆ. ಈ ವೇಳೆ ಕುಡುಕ ಯುವಕರು ಮಾತಿನ ಚಕಮಕಿ ನಡೆಸಿದ್ದಾರೆ. ವಿಡಿಯೋದ ಅಂತ್ಯದಲ್ಲಿ ಯುವಕರು ತಾವು ಸೋಷಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್ ಗಳು ಎಂದು ಹೇಳಿಕೊಂಡಿದ್ದಾರೆ. ಬಳಿಕ ಇಬ್ಬರನ್ನೂ ಬಂಧಿಸಿ ದಂಡ ಹಾಕಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬ್ರಹ್ಮಪುತ್ರ ನದಿ ಕೆಳಗೆ ದೇಶದ ಮೊದಲ ರಸ್ತೆ-ರೈಲು ಸುರಂಗಕ್ಕೆ ಕೇಂದ್ರ ಸಂಪುಟ ಅನುಮೋದನೆ

ಹಂಪಿ ಉತ್ಸವ: ಸ್ವಂತ ಖರ್ಚಿನಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಹೆಲಿಕಾಪ್ಟರ್‌ನಲ್ಲಿ ಸುತ್ತಾಡಿಸಿದ ಸಚಿವ ಜಮೀರ್!

ಬಳ್ಳಾರಿ- ಹೊಸಪೇಟೆ ಹೊಸ ರೈಲು ಮಾರ್ಗಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ

ಅಕ್ರಮ ಚುನಾವಣೆ ಆರೋಪ: ಸುಪ್ರೀಂ ಕೋರ್ಟ್ ನಲ್ಲಿ ಯತ್ನಾಳ್‌ಗೆ ಜಯ, ಅಬ್ದುಲ್ ಹಮೀದ್‌ಗೆ ಮುಖಭಂಗ

T20 ವಿಶ್ವಕಪ್ 2026: ಭಾರತ - ಪಾಕ್ ಪಂದ್ಯ, ಹ್ಯಾಂಡ್ ಶೇಕ್ ಇರುತ್ತಾ- ಸೂರ್ಯ ಕುಮಾರ್ ಯಾದವ್ ಮಹತ್ವದ ಹೇಳಿಕೆ!

SCROLL FOR NEXT