ಲಕ್ನೋದ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರ ಲಗೇಜ್‌ನಲ್ಲಿ ಜೀವಂತ ಕಾರ್ಟ್ರಿಡ್ಜ್ ಪತ್ತೆಯಾದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ.
ನಿನ್ನೆ ಶನಿವಾರ ನಿಯಮಿತ ಭದ್ರತಾ ತಪಾಸಣೆಯ ಸಮಯದಲ್ಲಿ ಈ ಕಾರ್ಟ್ರಿಡ್ಜ್ ಪತ್ತೆಯಾಗಿದೆ.
ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಮೇಲ್ವಿಚಾರಕರು ಸಲ್ಲಿಸಿದ ದೂರಿನ ಪ್ರಕಾರ, ಆರೋಪಿ ಇರ್ಫಾನ್ ಅಹ್ಮದ್ ಅವರ ಬ್ಯಾಗ್‌ನಲ್ಲಿ 8 ಎಂಎಂ ಜೀವಂತ ಕಾರ್ಟ್ರಿಡ್ಜ್ ಪತ್ತೆಯಾಗಿದೆ. ಪ್ರಕರಣ ದಾಖಲಿಸಿರುವ ಪೊಲೀಸರು ಇರ್ಫಾನ್ ಅಹ್ಮದ್ ನನ್ನು ಬಂಧಿಸಿ ತೀವ್ರ ತನಿಖೆ ನಡೆಸುತ್ತಿದ್ದಾರೆ.