ಕೋಝಿಕೋಡ್: ಕೇರಳದಲ್ಲಿ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆ ಹೆಚ್ಚುತ್ತಲೇ ಇದ್ದರೂ, ಸೋಂಕು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಅನಿಶ್ಚಿತತೆ ಮುಂದುವರೆದಿದೆ.
ಮೆದುಳು ತಿನ್ನುವ ಅಮೀಬಾ ಮಾರಕ ಸೋಂಕು ಕೇರಳ ರಾಜ್ಯಕ್ಕೆ ತಲೆನೋವಾಗಿ ಪರಿಣಮಿಸಿದ್ದು, ಕಳೆದ 7 ತಿಂಗಳಿನಲ್ಲಿ ಒಟ್ಟು 17 ಮಂದಿಯನ್ನು ಬಲಿಪಡೆದುಕೊಂಡಿದೆ. ಈ ತಿಂಗಳೊಂದರಲ್ಲೇ ಏಳು ಪ್ರಕರಣಗಳು ವರದಿಯಾಗಿವೆ ಎಂದು ತಿಳಿದುಬಂದಿದೆ.
ಆರಂಭದಲ್ಲಿ ಆರೋಗ್ಯ ತಜ್ಞರು ನೀರಿನ ಕೊಳ, ಕೆರೆ ಅಥವಾ ಈಜುಕೊಳಗಳಲ್ಲಿ ಇಳಿದವರಲ್ಲಿ ಸೋಂಕು ತಗುಲುತತಿದೆ ಎಂದು ನಂಬಿದ್ದರು. ಕಲುಷಿತ ನೀರು ಮೂಗಿನ ಮೂಲಕ ದೇಹ ಪ್ರವೇಶಿಸಿ ಮೆದುಳು ತಲುಪುತ್ತಿದೆ ಎನ್ನಲಾಗುತ್ತಿತ್ತು. ಆದರೆ, ಇತ್ತೀಚೆಗೆ ಪತ್ತೆಯಾಗ ಕೆಲ ಪ್ರಕರಣಗಳು ಕಳವಳಗಳನ್ನು ಹೆಚ್ಚಿಸಲಿದೆ. ಕೊಳ, ಕೆರೆ, ಈಜುಕೊಳದಲ್ಲಿ ಒಡ್ಡಿಕೊಳ್ಳದ ಮೂರು ತಿಂಗಳ ಮಗುವಿನಲ್ಲಿ ಹಾಗೂ ಇತರರೂ ಸೋಂಕಿಗೆ ತುತ್ತಾಗಿದ್ದಾರೆ. ಹೀಗಾಗಿ, ಆರೋಗ್ಯ ತಜ್ಞರ ಊಹಿಗಳ ಕುರಿತು ಪ್ರಶ್ನೆಗಳು ಶುರುವಾಗುವಂತೆ ಮಾಡಿದೆ.
ಸೋಂಕುಗಳ ಸಂಖ್ಯೆ ಹೆಚ್ಚಾಗಿದ್ದರೂ ಕೇರಳದಲ್ಲಿ (ಶೇ.24) ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್‌ನಿಂದ ಮರಣ ಪ್ರಮಾಣವು ಜಾಗತಿಕ ಅಂಕಿ ಅಂಶಕ್ಕಿಂತ (ಶೇ.97) ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.
ಈ ನಡುವೆ ರೋಗ ತಡೆಗಟ್ಟುವುದು, ಸೋಂಕಿನಿಂದ ದೂರ ಉಳಿಯುವುದು ಹೇಗೆ ಎಂಬುದರ ಬಗ್ಗೆ ಸ್ಪಷ್ಟತೆಗಳು ಸಿಗದ ಕಾರಣ ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.