ನವದೆಹಲಿ: ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆಗೆ ತಡೆ ನೀಡಲು ಸೋಮವಾರ ನಿರಾಕರಿಸಿದ ಸುಪ್ರೀಂಕೋರ್ಟ್, ಆಸ್ತಿಯನ್ನು ವಕ್ಫ್ ಮಾಡಬೇಕಿದ್ದರೆ ವ್ಯಕ್ತಿಯೊಬ್ಬ ಇಸ್ಲಾಂ ಧರ್ಮವನ್ನು ಕನಿಷ್ಠ 5 ವರ್ಷಗಳಿಂದ ಅನುಸರಿಸುತ್ತಿರಬೇಕು ಎನ್ನುವುದು ಸೇರಿದಂತೆ ಕೆಲವೊಂದು ಅಂಶಗಳಿಗೆ ತಡೆ ನೀಡಿದೆ.
ಎ.ಜಿ. ಮನೀಶ್ ಅವರಿದ್ದ ನ್ಯಾಯಪೀಠ, ಪ್ರತಿಯೊಂದು ಸೆಕ್ಷನ್ ನ ಸವಾಲನ್ನು ಮೇಲ್ನೋಟಕ್ಕೆ ಪರಿಗಣಿಸಿದ್ದು, ಇಡೀ ಕಾಯ್ದೆಗೆ ತಡೆ ನೀಡಬೇಕು ಎಂಬುದು ಕಂಡುಬಂದಿಲ್ಲ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಅವರಿದ್ದ ನ್ಯಾಯಪೀಠ ಮಧ್ಯಂತರ ಆದೇಶವನ್ನು ಪ್ರಕಟಿಸಿತು.
ಆದಾಗ್ಯೂ, ಆಸ್ತಿಯನ್ನು ವಕ್ಫ್ ಮಾಡಬೇಕಿದ್ದರೆ ವ್ಯಕ್ತಿಯೊಬ್ಬ ಇಸ್ಲಾಂ ಧರ್ಮವನ್ನು ಕನಿಷ್ಠ 5 ವರ್ಷಗಳಿಂದ ಅನುಸರಿಸುತ್ತಿರಬೇಕು ಎನ್ನುವ ಕಾಯ್ದೆಯ ಸೆಕ್ಷನ್ 3(1) (R) ಗೆ ತಡೆ ನೀಡಿದೆ.
ಒಬ್ಬ ವ್ಯಕ್ತಿಯು 5 ವರ್ಷ ಅಥವಾ ಅದಕ್ಕಿಂತಲೂ ಹೆಚ್ಚು ಕಾಲ ಇಸ್ಲಾಂ ಧರ್ಮವನ್ನು ಆಚರಿಸುತ್ತಿದ್ದಾನೆಯೇ ಎಂಬುದನ್ನು ನಿರ್ಧರಿಸಲು ರಾಜ್ಯ ಸರ್ಕಾರಗಳು ನಿಯಮಗಳನ್ನು ರೂಪಿಸುತ್ತವೆ. ಅಂತಹ ಕಾರ್ಯ ವಿಧಾನವಿಲ್ಲದೆ, ಈ ಅಂಶವು ಅಧಿಕಾರದ ಅನಿಯಂತ್ರಿತ ಬಳಕೆಗೆ ಕಾರಣವಾಗುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಅಲ್ಲದೇ, ಆಸ್ತಿ ಅತಿಕ್ರಮಣವಾಗಿದೆಯೇ ಎಂದು ನಿಯೋಜಿತ ಅಧಿಕಾರ ವರದಿ ಸಲ್ಲಿಸುವವರಿಗೆ ಆಸ್ತಿಯನ್ನು ವಕ್ಫ್ ಎಂದು ಪರಿಗಣಿಸಲಾಗದು ಎನ್ನುವ ಸೆಕ್ಷನ್ 3C(2)
ಒಂದು ವೇಳೆ ಆಸ್ತಿಯು ಸರ್ಕಾರಿ ಜಮೀನು ಎನ್ನುವುದನ್ನು ನಿಯೋಜಿತ ಅಧಿಕಾರಿ ನಿರ್ಧರಿಸಿದರೆ, ಈ ಬಗ್ಗೆ ಕಂದಾಯ ದಾಖಲೆಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎನ್ನುವ ಸೆಕ್ಷನ್ 3C(3)
ನಿಯೋಜಿತ ಅಧಿಕಾರಿ ಸಲ್ಲಿಸಿದ ವರದಿ ಆಧರಿಸಿ, ದಾಖಲೆಗಳಲ್ಲಿ ಅಗತ್ಯ ಬದಲಾವಣೆ ಮಾಡಬೇಕು ಎಂದು ವಕ್ಫ್ ಬೋರ್ಡ್ ಗೆ ರಾಜ್ಯ ಸರ್ಕಾರ ಸೂಚಿಸಬೇಕು ಎನ್ನುವ ಸೆಕ್ಷನ್ 3C(4)ಗೆ ತಡೆ ನೀಡಿದೆ.
ಹಕ್ಕುಗಳನ್ನು ನಿರ್ಧರಿಸುವ ಅಧಿಕಾರಿಗಳನ್ನು ಜಿಲ್ಲಾಧಿಕಾರಿಗಳನ್ನು ನೀಡುವುದು ಅಧಿಕಾರ ಪ್ರತ್ಯೇಕಿರಕರಣಕ್ಕೆ ವಿರುದ್ಧವಾಗಿದ್ದು, ನಾಗಿರಕರ ಹಕ್ಕನ್ನು ಕಾರ್ಯಾಂಗ ನಿರ್ಧರಿಸಲಾಗದು ಎಂದು ಸಿಜೆಐ ಅಭಿಪ್ರಾಯಪಟ್ಟಿದ್ದಾರೆ.
ವಕ್ಫ್ ಬೋರ್ಡ್ ನಲ್ಲಿ ಮುಸ್ಲಿಮೇತರರನ್ನು ಸದಸ್ಯರಾಗಿ ನೇಮಕ ಮಾಡುವುದಕ್ಕೆ ತಡೆ ನೀಡಲು ಕೋರ್ಟ್ ನಿರಾಕರಿಸಿದೆ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಸ್ಲಿಂ ಆಗಿರಬೇಕು ಎಂದು ಕೋರ್ಟ್ ಹೇಳಿದೆ. ಕೇಂದ್ರ ವಕ್ಫ್ ಕೌನ್ಸಿಲ್ ನಲ್ಲಿ 4 ಮಂದಿಗಿಂತ ಹೆಚ್ಚು ಮುಸ್ಲಿಮೇತರರು ಇರಬಾರದು. ರಾಜ್ಯ ವಕ್ಫ್ ಬೋರ್ಡ್ ಗಳಲ್ಲಿ ಈ ಸಂಖ್ಯೆ 3 ಮೀರಬಾರದು ಎಂದು ಹೇಳಿದೆ.