ಅಧಿಕಾರಿ ನೂಪುರ್ ಬೋರಾ  
ದೇಶ

Assam: ACS ಅಧಿಕಾರಿ ಮನೆ ಮೇಲೆ ದಾಳಿ; 2 ಕೋಟಿ ರೂ ನಗದು, ಅಪಾರ ಪ್ರಮಾಣದ ಚಿನ್ನಾಭರಣ ವಶ!

ಬಾರ್ಪೇಟಾದಲ್ಲಿರುವ ಆಕೆಯ ಬಾಡಿಗೆ ಮನೆಯಲ್ಲಿ ದಾಳಿ ನಡೆಸಿದಾಗ 10 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ.

ಗುವಾಹಟಿ: ಆದಾಯಕ್ಕೂ ಮೀರಿದ ಆಸ್ತಿ ಹೊಂದಿರುವ ಆರೋಪದ ಮೇಲೆ ಅಸ್ಸಾಂ ಸಿವಿಲ್ ಸರ್ವೀಸ್ (ACS) ಅಧಿಕಾರಿಯೊಬ್ಬರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಮುಖ್ಯಮಂತ್ರಿಗಳ ವಿಶೇಷ ಜಾಗೃತ ದಳದ ಅಧಿಕಾರಿಗಳ ತಂಡ ಅಧಿಕಾರಿ ನೂಪುರ್ ಬೋರಾ ಅವರ ಗುವಾಹಟಿ ನಿವಾಸದ ಮೇಲೂ ದಾಳಿ ನಡೆಸಿ ರೂ. 92 ಲಕ್ಷ ನಗದು ಮತ್ತು ಸುಮಾರು ರೂ. 1 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಬಾರ್ಪೇಟಾದಲ್ಲಿರುವ ಆಕೆಯ ಬಾಡಿಗೆ ಮನೆಯಲ್ಲಿ ದಾಳಿ ನಡೆಸಿದಾಗ 10 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ.

2019 ರಲ್ಲಿ ಅಸ್ಸಾಂ ಸಿವಿಲ್ ಸೇವೆಗೆ ಸೇರಿದ ಗೋಲಾಘಾಟ್ ನಿವಾಸಿ ನೂಪುರ್ ಬೋರಾ ಪ್ರಸ್ತುತ ಕಮ್ರೂಪ್ ಜಿಲ್ಲೆಯ ಗೊರೊಮರಿಯಲ್ಲಿ ವೃತ್ತ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಭೂ ವಿವಾದಿತ ಸಮಸ್ಯೆಗಳಲ್ಲಿ ಭಾಗಿಯಾಗಿರುವ ಆರೋಪದ ದೂರುಗಳ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿನಿಂದ ಆಕೆಯ ಮೇಲೆ ನಿಗಾ ಇರಿಸಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಬಾರ್ಪೇಟಾದಲ್ಲಿನ ಕಂದಾಯ ವೃತ್ತದ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಆಕೆಯ ಸಹಾಯಕ ಲಾತ್ ಮಂಡಲ್ ಸೂರಜಿತ್ ದೇಕಾ ಅವರ ನಿವಾಸದ ಮೇಲೂ ದಾಳಿ ನಡದಿದೆ. ಬಾರ್ಪೇಟಾದಲ್ಲಿ ಸರ್ಕಲ್ ಆಫೀಸರ್ ಆಗಿ ನೇಮಕಗೊಂಡಾಗ ನೂಪುರ್ ಬೋರಾ ಅವರೊಂದಿಗೆ ಶಾಮೀಲಾಗಿ ಅನೇಕ ಭೂ ಆಸ್ತಿಗಳನ್ನು ಸ್ವಾಧೀನಪಡಿಸಿಕೊಂಡ ಆರೋಪವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

UKP 3ನೇ ಹಂತ: ನೀರಾವರಿ ಭೂಮಿಗೆ 40 ಲಕ್ಷ ರೂ. ಪರಿಹಾರ ನೀಡಲು ಸಚಿವ ಸಂಪುಟ ನಿರ್ಧಾರ

75ರ ವಸಂತಕ್ಕೆ ಕಾಲಿಡುತ್ತಿರುವ ನರೇಂದ್ರ ಮೋದಿ: ಜನರ ಪ್ರಧಾನಿಯ ಏಳು ಬೀಳುಗಳ ಸ್ಮರಣೀಯ ಪ್ರಯಾಣ

Operation Sindoor ವೇಳೆ ಮೂರನೇ ದೇಶದ ಮಧ್ಯಸ್ಥಿಕೆ ಇರಲಿಲ್ಲ: ಟ್ರಂಪ್ ಮುಖವಾಡ ಬಯಲು ಮಾಡಿದ ಪಾಕ್ ಸಚಿವ

ಗುಜರಾತ್‌: ರಸ್ತೆ ಇಲ್ಲದೆ ಗರ್ಭಿಣಿಯನ್ನು ಜೋಲಿಯಲ್ಲಿ ಆಸ್ಪತ್ರೆಗೆ ಹೊತ್ತೊಯ್ದ ಕುಟುಂಬ; ದಾರಿ ಮಧ್ಯೆ ಮಹಿಳೆ ಸಾವು!

Gaza ವಶಕ್ಕೆ ಇಸ್ರೇಲ್ ಕಾರ್ಯಾಚರಣೆ; US ಕುಮ್ಮಕ್ಕು: IDF ದಾಳಿಯಲ್ಲಿ 62 ಪ್ಯಾಲೆಸ್ತೀನಿಯರು ಸಾವು, ಲಕ್ಷಾಂತರ ಮಂದಿ ಪಲಾಯನ!

SCROLL FOR NEXT