ಚೆನ್ನೈ: ತಮಿಳುನಾಡಿಗೆ ನಟಿ-ರಾಜಕಾರಣಿ ಕಂಗನಾ ರಣಾವತ್ ಭೇಟಿ ನೀಡಿದರೆ "ಕಪಾಳಮೋಕ್ಷ ಮಾಡಿ" ಎಂದು ತಮಿಳುನಾಡು ಕಾಂಗ್ರೆಸ್ ಮಾಜಿ ಮುಖ್ಯಸ್ಥ ಕೆ.ಎಸ್. ಅಳಗಿರಿ ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ.
ಕೆಲವು ತಿಂಗಳ ಹಿಂದೆ ವಿಮಾನ ನಿಲ್ದಾಣದಲ್ಲಿ ಒಬ್ಬ ಮಹಿಳಾ ಪೊಲೀಸ್ ಅಧಿಕಾರಿ ಆಕೆಗೆ ಕಪಾಳಮೋಕ್ಷ ಮಾಡಿದ್ದರು. ಅವರು ಎಲ್ಲಿ ಹೋದರೂ ಎಲ್ಲರನ್ನೂ ನಿಂದಿಸುತ್ತಿರುತ್ತಾರೆ ಎಂದು ಪೊಲೀಸ್ ಅಧಿಕಾರಿ ಕಾರಣ ನೀಡಿದ್ದರು.
ಹಾಗಾಗಿ ನಾನು ಕೃಷಿ ಕಾರ್ಮಿಕರಿಗೆ ಹೇಳಿದ್ದೆ ಒಂದೊಮ್ಮೆ ಕಂಗನಾ ತಮಿಳುನಾಡಿಗೆ ಬಂದರೆ ಆ ಪೊಲೀಸ್ ಅಧಿಕಾರಿ ಮಾಡಿದ್ದನ್ನೇ ಮಾಡಿ, ಆಗ ಅವರು ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳುತ್ತಾರೆ ಎಂದರು. ತಮಿಳುನಾಡು ಕಾಂಗ್ರೆಸ್ನ ಮಾಜಿ ಅಧ್ಯಕ್ಷರೂ ಆಗಿರುವ ಅಳಗಿರಿ ಕಂಗನಾ ರಣಾವತ್ ಅವರ ಹಿಂದಿನ ಹೇಳಿಕೆಗಳಿಂದ ಅಸಮಾಧಾನಗೊಂಡ ರೈತರ ದೂರುಗಳಿಗೆ ಪ್ರತಿಕ್ರಿಯಿಸುತ್ತಿರುವುದಾಗಿ ಹೇಳಿದರು.
ನಿನ್ನೆ, 10-15 ರೈತ ಮಹಿಳೆಯರು ನನ್ನ ಬಳಿಗೆ ಬಂದು, ಪತ್ರಿಕಾಗೋಷ್ಠಿಯಲ್ಲಿ ಕಂಗನಾ ರಣಾವತ್ ಒಮ್ಮೆ ಕೃಷಿ ಮಹಿಳೆಯರು ದುರ್ಬಲ ಭೂಮಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದರು .
ಈ ವೇಳೆ ಪತ್ರಕರ್ತರೊಬ್ಬರು, ಅವರು ಕ್ರಾಂತಿಕಾರಿ ಮಹಿಳೆಯರು. ಆ ಮಹಿಳೆಯರು ಹೊಲಗಳಲ್ಲಿ ಕೆಲಸ ಮಾಡುತ್ತಿದ್ದರೂ, ಅವರು ತುಂಬಾ ಚುರುಕು ಮತ್ತು ಧೈರ್ಯಶಾಲಿಗಳು ಮತ್ತು ಏನನ್ನಾದರೂ ಸಾಧಿಸಲು ಸಮರ್ಥರು ಎಂದಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಕಂಗನಾ ರಣಾವತ್, 100 ರೂ ನೀಡಿದರೆ ಅವರು ಎಲ್ಲಿ ಬೇಕಾದರೂ ಬರುತ್ತಾರೆ ಎಂದಿದ್ದರು.
ಕಾಂಗ್ರೆಸ್ ನಾಯಕ ಅಳಗಿರಿ ಹೇಳಿಕೆಗೆ ಕಂಗನಾ ಪ್ರತಿಕ್ರಿಯೆ ನಾವು ಎಲ್ಲಿ ಬೇಕಾದರೂ ಹೋಗಬಹುದು. ಯಾರೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಕೆಲವರು ನನ್ನನ್ನು ದ್ವೇಷಿಸಿದರೆ, ನನ್ನನ್ನು ಪ್ರೀತಿಸುವವರು ಹಲವರಿದ್ದಾರೆ. ತಮಿಳುನಾಡಿನ ಜನರು ಯಾವಾಗಲೂ ನನಗೆ ಪ್ರೀತಿಯನ್ನು ನೀಡಿದ್ದಾರೆ. ಒಬ್ಬ ವ್ಯಕ್ತಿಯ ಮಾತುಗಳು ವ್ಯತ್ಯಾಸವನ್ನುಂಟು ಮಾಡುವುದಿಲ್ಲ ಎಂದಿದ್ದಾರೆ.