ನವದೆಹಲಿ: ಭಾರತದಲ್ಲಿ ಫ್ರೆಂಚ್ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುವ ಆಟೋ ಡ್ರೈವರ್ ಒಬ್ಬರ ವಿಡಿಯೋವನೊಂದನ್ನು ಅಮೆರಿಕ ಮೂಲದ ಕಂಟೆಂಟ್ ಕ್ರಿಯೇಟರ್ ಹಂಚಿಕೊಂಡಿದ್ದಾರೆ.
ಆಟೋ ಡ್ರೈವರ್ ಅವರ ಭಾಷಾ ಕೌಶಲ್ಯದಿಂದ ಚಕಿತಗೊಂಡ ಕಂಟೆಂಟ್ ಕ್ರಿಯೇಟರ್ ಜಯ್ ಸ್ವಲ್ಪ ಹೊತ್ತು ಅವರೊಂದಿಗೆ ಮಾತನಾಡಿರುವುದು ವಿಡಿಯೋದಲ್ಲಿದೆ.
ಎಷ್ಟು ಭಾಷೆಗಳನ್ನು ಮಾತನಾಡುತ್ತೀರಾ? ಎಂದು ಆಟೋ ಡ್ರೈವರ್ ಕೇಳ್ತಾರೆ. ಇದಕ್ಕೆ ಉತ್ತರಿಸುವ ಜಯ್ ಫ್ರೆಂಚ್ ಮತ್ತು ಇಂಗ್ಲೀಷ್ ಎರಡು ಭಾಷೆ ಬರುತ್ತದೆ ಅನ್ನುತ್ತಾರೆ.
ಆಗ ಇದಕ್ಕಿದ್ದಂತೆ ಫ್ರೆಂಚ್ ಭಾಷೆಗೆ ಬದಲಾಗುವ ಆಟೋ ಡ್ರೈವರ್ ಅವರನ್ನು ಇನ್ನಷ್ಟು ಮಾತನಾಡಿಸುತ್ತಾ ಹೋದಂತೆ ಅವರು ನಿರರ್ಗಳವಾಗಿ, ಹಾಸ್ಯವಾಗಿ ಫ್ರೆಂಚ್ ಭಾಷೆಯಲ್ಲಿ ಮಾತನಾಡುತ್ತಾರೆ. ಇಬ್ಬರು ಸ್ವಲ್ಪ ಹೊತ್ತು ನಗೆ ಗಡಲಲ್ಲಿ ಕಾಲ ಕಳೆಯುವುದು ವಿಡಿಯೋದಲ್ಲಿದೆ.
'ಭಾರತದಲ್ಲಿ ಫ್ರೆಂಚ್ ಭಾಷೆ ಮಾತನಾಡುವ ಆಟೋ ಡ್ರೈವರ್' ಎಂಬ ಶೀರ್ಷಿಕೆಯಲ್ಲಿ ಜಯ್ ಇನ್ಸಾಟಾಗ್ರಾಮ್ ನಲ್ಲಿ ಈ ವಿಡಿಯೋ ಫೋಸ್ಟ್ ಮಾಡಿದ್ದಾರೆ. ಇದು ಆನ್ ಲೈನ್ ನಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಸುಮಾರು 1.4 ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಕಂಡಿದೆ. ಈ ಕ್ಲೀಪ್ ಜಯ್ ಅವರ ಅತ್ಯಂತ ಜನಪ್ರಿಯ ಪೋಸ್ಟ್‌ಗಳಲ್ಲಿ ಒಂದಾಗಿದೆ. ಬಳಕೆದಾರರು ನಾನು ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.
ಇತ್ತೀಚಿಗೆ ಬೆಂಗಳೂರಿನಲ್ಲಿ ಎದೆಗೆ ಮಗುವನ್ನು ಕಟ್ಟಕೊಂಡು ಆಟೋ ಓಡಿಸುವ ಚಾಲಕನ ವಿಡಿಯೋ ಕೂಡಾ ಸಾಕಷ್ಟು ವೈರಲ್ ಆಗಿತ್ತು.