ನವದೆಹಲಿ: ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್ ಮತ್ತು ಭೂಪೇಂದರ್ ಯಾದವ್ ಅವರನ್ನು ಕ್ರಮವಾಗಿ ಬಿಹಾರ ಮತ್ತು ಪಶ್ಚಿಮ ಬಂಗಾಳಕ್ಕೆ ಚುನಾವಣಾ ಉಸ್ತುವಾರಿಗಳನ್ನಾಗಿ ಬಿಜೆಪಿ ಗುರುವಾರ ನೇಮಿಸಿದೆ.
ಇನ್ನು ಎಐಎಡಿಎಂಕೆಗೆ ಕಿರಿಯ ಮಿತ್ರ ಪಕ್ಷವಾಗಿ ಉಳಿದಿರುವ ತಮಿಳುನಾಡಿನಲ್ಲಿ ಪಕ್ಷದ ಪ್ರಚಾರವನ್ನು ಮೇಲ್ವಿಚಾರಣೆ ಮಾಡುವ ಕಾರ್ಯವನ್ನು ಬಿಜೆಪಿ ಉಪಾಧ್ಯಕ್ಷ ಬೈಜಯಂತ್ 'ಜಯ್' ಪಾಂಡಾ ಅವರಿಗೆ ವಹಿಸಲಾಗಿದೆ.
ನವೆಂಬರ್‌ನಲ್ಲಿ ಬಿಹಾರ ವಿಧಾನಸಭೆ ಚುನಾವಣೆ ನಡೆಯುವ ನಿರೀಕ್ಷೆಯಿದ್ದು, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಮುಂದಿನ ವರ್ಷ ಮಾರ್ಚ್-ಏಪ್ರಿಲ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ.
ಬಿಹಾರಕ್ಕೆ ಗುಜರಾತ್ ಬಿಜೆಪಿ ಮುಖ್ಯಸ್ಥ ಸಿ ಆರ್ ಪಾಟೀಲ್ ಮತ್ತು ಯುಪಿ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರನ್ನು ಸಹ-ಪ್ರಭಾರಿಗಳನ್ನಾಗಿ ಕೇಸರಿ ಪಕ್ಷ ನೇಮಿಸಿದೆ.
ತ್ರಿಪುರದ ಮಾಜಿ ಸಿಎಂ ಬಿಪ್ಲಾಬ್ ಕುಮಾರ್ ದೇಬ್ ಮತ್ತು ಕೇಂದ್ರ ಸಚಿವ ಮುರಳೀಧರ್ ಮೊಹೋಲ್ ಅವರನ್ನು ಕ್ರಮವಾಗಿ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿಗೆ ಸಹ-ಪ್ರಭಾರಿಗಳಾಗಿ ನೇಮಕ ಮಾಡಿದೆ.