ದೋಸಾಂಜ್  
ದೇಶ

'Sardaar Ji 3' row: ಭಾರತ- ಪಾಕಿಸ್ತಾನ ಈಗಲೂ ಕ್ರಿಕೆಟ್ ಆಡುತ್ತಿವೆ; ನನ್ನ 'ಸಿನಿಮಾಗ್ಯಾಕೆ' ನಿಷೇಧ? ದಿಲ್ಜಿತ್ ದೋಸಾಂಜ್!

ಪಾಕಿಸ್ತಾನದ ಹನಿಯಾ ಅಮೀರ್ ಅಭಿನಯಿಸಿದ್ದ 'Sardaar Ji 3 ಭಾರತದಲ್ಲಿ ಬಿಡುಗಡೆಯಾಗಿರಲಿಲ್ಲ. ಆದರೆ, ವಿದೇಶದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.

ನವದೆಹಲಿ: ಪಾಕಿಸ್ತಾನದ ನಟನೊಂದಿಗೆ 'Sardaar Ji 3' ಚಿತ್ರದಲ್ಲಿ ನಟಿಸಿದ್ದಕ್ಕಾಗಿ ಕೆಲವರು ದೇಶ ವಿರೋಧಿ ಎಂದು ಬಿಂಬಿಸಿದ್ದ ಪಂಜಾಬಿ ಸ್ಟಾರ್ ದಿಲ್ಜಿತ್ ದೋಸಾಂಜ್, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮುನ್ನವೇ ಆ ಚಿತ್ರದ ಶೂಟಿಂಗ್ ಮಾಡಲಾಗಿತ್ತು. ಭಾರತ ಮತ್ತು ಪಾಕಿಸ್ತಾನ ಈಗಲೂ ಕ್ರಿಕೆಟ್ ಆಡುತ್ತಿವೆ ಎಂದು ಹೇಳಿದ್ದಾರೆ.

ಪಾಕಿಸ್ತಾನದ ಹನಿಯಾ ಅಮೀರ್ ಅಭಿನಯಿಸಿದ್ದ 'Sardaar Ji 3 ಭಾರತದಲ್ಲಿ ಬಿಡುಗಡೆಯಾಗಿರಲಿಲ್ಲ. ಆದರೆ, ವಿದೇಶದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಇದು ಸಾಮಾಜಿಕ ಮಾಧ್ಯಮ ಮತ್ತಿತರ ಕಡೆಗಳಲ್ಲಿ ವಿವಾದದ ಬಿರುಗಾಳಿ ಎಬ್ಬಿಸುವ ಮೂಲಕ ದೋಸಾಂಜ್ ಅನ್ನು ನಿಷೇಧಿಸಬೇಕೆಂದು ಕೆಲವು ನೆಟ್ಟಿಗರು ಹೇಳಿದ್ದರು. ಏಪ್ರಿಲ್ 22 ರ ದಾಳಿಯ ನಂತರ ಪಾಕಿಸ್ತಾನದ ನಟನೊಂದಿಗೆ ತೆರೆ ಹಂಚಿಕೊಂಡಿದ್ದಕ್ಕೆ ಚಲನಚಿತ್ರ ಒಕ್ಕೂಟಗಳು ಅವರನ್ನು ಟೀಕಿಸಿದವು.

ಬುಧವಾರ ಸಂಜೆ ಕೌಲಾಲಂಪುರ್‌ನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಪ್ರೇಕ್ಷಕರನ್ನುದ್ದೇಶಿಸಿ ಮಾತನಾಡಿದ ದೋಸಾಂಜ್ ತಮ್ಮ ಚಿತ್ರದ ಸುತ್ತ ಎದ್ದಿದ್ದ ವಿವಾದಗಳ ಕುರಿತು ಮಾತನಾಡಿದರು. "ಮಾಧ್ಯಮಗಳು ನನ್ನನ್ನು ದೇಶವಿರೋಧಿ ಎಂದು ಬಿಂಬಿಸಲು ಪ್ರಯತ್ನಿಸಿದವು ಆದರೆ ಪಂಜಾಬಿಗಳು ಮತ್ತು ಸಿಖ್ ಸಮುದಾಯವು ಎಂದಿಗೂ ರಾಷ್ಟ್ರದ ವಿರುದ್ಧ ಹೋಗಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

"ಫೆಬ್ರವರಿಯಲ್ಲಿ 'Sardaar Ji 3' ಶೂಟಿಂಗ್ ಪೂರ್ಣಗೊಂಡಾಗ ಪಂದ್ಯಗಳು ನಡೆಯುತ್ತಿದ್ದವು. ತದನಂತರ ಪಹಲ್ಗಾಮ್ ಭಯೋತ್ಪಾದಕ ದಾಳಿ ಸಂಭವಿಸಿತು. ಆ ವೇಳೆ, ಈಗಲೂ ಸಹ ಭಯೋತ್ಪಾದಕರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ನಾವು ಪ್ರಾರ್ಥಿಸುತ್ತೇವೆ. ಆದರೆ ಒಂದು ವ್ಯತ್ಯಾಸವೇನೆಂದರೆ ದಾಳಿಗೂ ಮುನ್ನ ನನ್ನ ಚಿತ್ರವನ್ನು ಶೂಟಿಂಗ್ ಮಾಡಲಾಗಿತ್ತು. ಪಂದ್ಯಗಳು ಇಂದು ಕೂಡಾ ನಡೆಯುತ್ತಿವೆ ಎಂದು ದೋಸಾಂಜ್ ತಿಳಿಸಿದರು.

ದುಬೈಯಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡು ಬಾರಿ ಪರಸ್ಪರ ಎದುರಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ದೋಸಾಂಜ್ ಕೂಡಾ ತ್ರಿವರ್ಣ ಧ್ವಜಕ್ಕೆ ಸಲ್ಯೂಟ್ ಹೊಡೆಯುತ್ತಿರುವುದು ಕಂಡುಬಂದಿದೆ. ಇದು ನನ್ನ ದೇಶದ ಧ್ವಜ. ಯಾವಾಗಲೂ ಗೌರವ ಇರುತ್ತದೆ ಎಂದು ಮಲೇಷಿಯಾದ ರಾಜಧಾನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಪಂಜಾಬಿಯಲ್ಲಿ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

delhi red fort blast case: ಸ್ಫೋಟದ ಸ್ಥಳದಲ್ಲಿ 9 ಎಂಎಂ ಕಾರ್ಟ್ರಿಡ್ಜ್‌ ಗಳು ಪತ್ತೆ, ಭಯೋತ್ಪಾದಕರ ನಂಟು ದೃಢ..!

ಸಚಿವ ಸಂಪುಟ ಪುನಾರಚನೆಗೆ ರಾಹುಲ್ ಗಾಂಧಿ ತಾತ್ವಿಕ ಒಪ್ಪಿಗೆ: ರಾಜ್ಯದಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ, ಮಂತ್ರಿಗಿರಿಗಾಗಿ ಲಾಬಿ ಶುರು..!

1st Test: 124 ರನ್​ಗಳ ಗುರಿಯನ್ನೂ ಮುಟ್ಟಲಾಗದೇ ಹೀನಾಯ ಸೋಲುಕಂಡ ಭಾರತ!

Bihar polls: 'ಸೋಲಿಗೆ ರೋಹಿಣಿ ಆಚಾರ್ಯ ಕಾರಣ ಆರೋಪ; ಸೋದರಿ ಮೇಲೆ ಚಪ್ಪಲಿ ಎಸೆದ ತೇಜಸ್ವಿ ಯಾದವ್: ಮೂಲಗಳು

'ಸಂಪುಟ ಪುನಾರಚನೆ ಬಗ್ಗೆ ಚರ್ಚೆಯೇ ಆಗಿಲ್ಲ, ರಾಹುಲ್ ಗಾಂಧಿಯವರಿಗೆ ಧೈರ್ಯ ತುಂಬಿದ್ದೇನೆ': ಸಿದ್ದರಾಮಯ್ಯ

SCROLL FOR NEXT