ಪಾರ್ಥ ಚಟರ್ಜಿ 
ದೇಶ

ಶಿಕ್ಷಕರ ನೇಮಕಾತಿ ಹಗರಣ: ಪಶ್ಚಿಮ ಬಂಗಾಳ ಮಾಜಿ ಸಚಿವ ಪಾರ್ಥ ಚಟರ್ಜಿಗೆ ಜಾಮೀನು ಮಂಜೂರು

ವಿಚಾರಣೆ ಬಾಕಿ ಇರುವ ಸಮಯದಲ್ಲಿ ಅವರು ಯಾವುದೇ ಸಾರ್ವಜನಿಕ ಹುದ್ದೆಯನ್ನು ಹೊಂದದಂತೆಯೂ ನಿರ್ಬಂಧಿಸಲಾಗಿದೆ.

ಕೋಲ್ಕತ್ತಾ: ಬಹುಕೋಟಿ ಶಿಕ್ಷಕರ ನೇಮಕಾತಿ 'ಹಗರಣ'ಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮಾಜಿ ಸಚಿವ ಮತ್ತು ತೃಣಮೂಲ ಕಾಂಗ್ರೆಸ್ ಶಾಸಕ ಪಾರ್ಥ ಚಟರ್ಜಿ ಅವರಿಗೆ ಕಲ್ಕತ್ತಾ ಹೈಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.

ಜಾಮೀನು ಕೋರಿ ಪಾರ್ಥ ಚಟರ್ಜಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಸುವ್ರ ಘೋಷ್ ಅವರು, ಆರೋಪಿ ಮಾಜಿ ಸಚಿವರಿಗೆ ಷರತ್ತುಬದ್ಧ ಜಾಮೀನು ನೀಡಿದ್ದು, ಪಾಸ್‌ಪೋರ್ಟ್ ಒಪ್ಪಿಸುವಂತೆ ಮತ್ತು ವಿಚಾರಣಾ ನ್ಯಾಯಾಲಯದ ವ್ಯಾಪ್ತಿಯಲ್ಲಿರುವಂತೆ ಸೂಚಿಸಿದ್ದಾರೆ.

ವಿಚಾರಣೆ ಬಾಕಿ ಇರುವ ಸಮಯದಲ್ಲಿ ಅವರು ಯಾವುದೇ ಸಾರ್ವಜನಿಕ ಹುದ್ದೆಯನ್ನು ಹೊಂದದಂತೆಯೂ ನಿರ್ಬಂಧಿಸಲಾಗಿದೆ.

ಪಾರ್ಥ ಚಟರ್ಜಿ ಅವರು ಶಿಕ್ಷಣ ಸಚಿವರಾಗಿದ್ದಾಗ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಯ ನೇಮಕಾತಿಯಲ್ಲಿ ದೊಡ್ಡ ಪ್ರಮಾಣದ ಅಕ್ರಮ ನಡೆದಿದ್ದು, ಇದರಲ್ಲಿ ಚಟರ್ಜಿ ಭಾಗಿಯಾಗಿದ್ದಾರೆ ಎಂಬ ಆರೋಪ ಅವರ ಮೇಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮೈಸೂರು: ಪಂಚಭೂತಗಳಲ್ಲಿ ಸಾಹಿತಿ ಎಸ್‌.ಎಲ್‌ ಭೈರಪ್ಪ ಲೀನ; ಸಕಲ ಸರ್ಕಾರಿ ಗೌರವಗಳೊಂದಿಗೆ `ಅಕ್ಷರ ಮಾಂತ್ರಿಕ' ನ ಅಂತ್ಯಕ್ರಿಯೆ

MiG-21 ಇನ್ನು ನೆನಪು ಮಾತ್ರ: ಚಂಡೀಗಢದಲ್ಲಿ ಇಂದು ಭಾರತೀಯ ವಾಯುಪಡೆಯಿಂದ ವಿದಾಯ

ಕೇಂದ್ರದ ಆರೋಪಗಳ ನಡುವೆ Sonam Wangchuk ಬೆಂಬಲಕ್ಕೆ ನಿಂತ ಫಾರೂಕ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ

ಲಡಾಕ್ ಲಡಾಯಿ: ಅ. 7 ರ ಮಾತುಕತೆಗೆ ಮುನ್ನ ಪೂರ್ವ ಸಿದ್ಧತಾ ಸಭೆಗೆ ಗೃಹ ಸಚಿವಾಲಯ ಕರೆ

ಉತ್ತರ ಪ್ರದೇಶ: ಎನ್ಕೌಂಟರ್ ನಂತರ ಶಿಕ್ಷಕಿ ಮುಖಕ್ಕೆ ಆಸಿಡ್ ಎರಚಿದ ವ್ಯಕ್ತಿಯ ಬಂಧನ

SCROLL FOR NEXT