ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ "ಸೈಕೋ" ಎಂದು ಹೇಳುವ ಮೂಲಕ ನಟ-ರಾಜಕಾರಣಿ ಹಾಗೂ ಟಿಡಿಪಿ ಶಾಸಕ ನಂದಮೂರಿ ಬಾಲಕೃಷ್ಣ ಹೊಸ ವಿವಾದ ಹುಟ್ಟುಹಾಕಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ ಒತ್ತಾಯಿಸಿದ್ದಾಕ್ಕಾಗಿ ಜಗನ್ ರೆಡ್ಡಿ ಸಿನಿಮಾ ರಂಗದವರನ್ನು ಭೇಟಿಯಾದರು ಎಂಬ ಬಿಜೆಪಿ ಶಾಸಕ ಕಾಮಿನೇನಿ ಶ್ರೀನಿವಾಸ್ ಆಂಧ್ರಪ್ರದೇಶ ವಿಧಾನಸಭೆಯಲ್ಲಿ ನೀಡಿದ್ದ ಹೇಳಿಕೆಗೆ ನಂದಮೂರಿ ಬಾಲಕೃಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಚಿರಂಜೀವಿ ಒತ್ತಾಯಿಸಿದ್ದರಿಂದ ಜಗನ್ ಸಿನಿಮಾದವರನ್ನು ಭೇಟಿಯಾದರು ಎಂಬುದು ಸಂಪೂರ್ಣ ಸುಳ್ಳು. ಅಲ್ಲಿ ಯಾರೂ ಒತ್ತಾಯಿಸಲಿಲ್ಲ. ಸೈಕೋ ಜಗನ್ ನನ್ನು ಭೇಟಿ ಮಾಡಲು ತಮ್ಮನ್ನು ಆಹ್ವಾನಿಸಲಾಗಿತ್ತು ಆದರೆ ನಾನು ಹೋಗದಿರಲು ನಿರ್ಧರಿಸಿದೆ ಎಂದು ಅವರು ಹೇಳಿದರು.
ವಿವಾದಾತ್ಮಕ ಹೇಳಿಕೆಗಳ ನಂತರ, ಚಿರಂಜೀವಿ ಈ ವಿಷಯದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನನ್ನ ನಡವಳಿಕೆ ಪರಸ್ಪರ ಗೌರವವನ್ನು ಆಧರಿಸಿದೆ, ಅವರು ಯಾವಾಗಲೂ ಜನರನ್ನು ಗೌರವದಿಂದ ನಡೆಸಿಕೊಳ್ಳುತ್ತಾರೆ, ಅದು ಮುಖ್ಯಮಂತ್ರಿಯಾಗಿರಲಿ ಅಥವಾ ಸಾಮಾನ್ಯ ವ್ಯಕ್ತಿಯಾಗಿರಲಿ ಎಲ್ಲರನ್ನು ವಿಶ್ವಾಸದಿಂದ ನೋಡುತ್ತಾರೆ ಚಿರಂಜೀವಿ ಹೇಳಿದ್ದಾರೆ.
ಎಲ್ಲರನ್ನು ಜಗನ್ ಆತ್ಮೀಯವಾಗಿ ಸ್ವಾಗತಿಸಿದ್ದರು. "ನಾನು ಬಲವಂತ ಮಾಡಿದ್ದಕ್ಕೆ ಜಗನ್ ಸಿನಿಮಾ ಕಲಾವಿದರನ್ನು ಭೇಟಿ ಮಾಡಿದರು ಎಂಬುದು ಸಂಪೂರ್ಣ ಸುಳ್ಳು" ಎಂದು ಚಿರಂಜೀವಿ ಸ್ಪಷ್ಟಪಡಿಸಿದ್ದಾರೆ.
ನಿರ್ಮಾಪಕರು ಮತ್ತು ನಿರ್ದೇಶಕರು ತಮ್ಮನ್ನು ಸಂಪರ್ಕಿಸಿದ್ದರಿಂದ, ಚಲನಚಿತ್ರೋದ್ಯಮದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಈ ಸಭೆ ನಡೆಸಲಾಗಿತ್ತು ಎಂದು ಅವರು ವಿವರಿಸಿದರು. ಮಾಜಿ ಮುಖ್ಯಮಂತ್ರಿಯವರ ಆಹ್ವಾನದ ಮೇರೆಗೆ ಅವರು ನಿಯೋಗದೊಂದಿಗೆ ಭೇಟಿ ಮಾಡಲು ಹೋಗಿದ್ದರು.
ಚಿರಂಜೀವಿ ಅವರು ಬಾಲಕೃಷ್ಣ ಅವರನ್ನು ಸಭೆಗೆ ಆಹ್ವಾನಿಸಲು ವೈಯಕ್ತಿಕವಾಗಿ ಕರೆ ಮಾಡಿದ್ದರು, ಆದರೆ ಅವರು ಲಭ್ಯವಿರಲಿಲ್ಲ ಎಂದು ಬಹಿರಂಗಪಡಿಸಿದರು. ವಿಧಾನಸಭೆಯಲ್ಲಿ ತಮ್ಮ ಹೆಸರು ಪ್ರಸ್ತಾಪವಾದಾಗಿನಿಂದ ಮತ್ತು ಸಾರ್ವಜನಿಕರಿಗೆ ಸತ್ಯವಾದದ್ದನ್ನೇ ಹೇಳುವುದು ಮುಖ್ಯವೆಂದು ಭಾವಿಸಿ ತಾವು ಈ ಹೇಳಿಕೆ ನೀಡುತ್ತಿರುವುದಾಗಿ ಚಿರಂಜೀವಿ ತಿಳಿಸಿದ್ದಾರೆ.