ನವದೆಹಲಿ: ಭಾರತೀಯ ಮೂಲದ ಕೆನಡಾ-ಅಮೆರಿಕನ್ ಲೇಖಕಿ ಪದ್ಮಾ ವಿಶ್ವನಾಥನ್, ಪೋರ್ಚುಗೀಸ್ ಭಾಷೆಯ ಕಿರು ಕಾದಂಬರಿಯೊಂದನ್ನು ಇಂಗ್ಲಿಷ್‌ಗೆ ಅನುವಾದಿಸಿದಕ್ಕಾಗಿ 2026ರ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಯ ಅಂತಿಮ ಪಟ್ಟಿಗೆ ಆಯ್ಕೆಯಾಗಿದ್ದಾರೆ.
ಬ್ರೆಜಿಲಿಯನ್ ಲೇಖಕಿ ಆನಾ ಪೌಲಾ ಮೈಯಾ ಅವರ "On Earth As It Is Beneath" ಕೃತಿಯನ್ನು ಪದ್ಮಾ ವಿಶ್ವನಾಥನ್ ಅನುವಾದಿಸಿದ್ದಾರೆ. "ದೂರದ ಬ್ರೆಜಿಲಿಯನ್ ಪೀನಲ್ ಕಾಲೊನಿಯಲ್ಲಿನ ಕಥೆಯನ್ನು ಇ ಕಾದಂಬರಿ ಹೇಳುತ್ತಿದ್ದು, ನ್ಯಾಯ ಮತ್ತು ಕ್ರೌರ್ಯದ ಗಡಿಗಳು ಕುಸಿಯುವ, ಮಂತ್ರಮುಗ್ಧಗೊಳಿಸುವ ಕೃತಿ ಇದಾಗಿದೆ" ಎಂಬ ಹೆಗ್ಗಳಿಕೆಗೆ ಈ ಕಾದಂಬರಿ ಪಾತ್ರವಾಗಿದೆ.
ಈ ಅಂತರರಾಷ್ಟ್ರೀಯ ಸಾಹಿತ್ಯ ಗೌರವಕ್ಕಾಗಿ ಸ್ಪರ್ಧಿಸುತ್ತಿರುವ ಆರು ಕೃತಿಗಳಲ್ಲಿ ಇದೂ ಒಂದಾಗಿದೆ. ವರ್ಷಕ್ಕೊಮ್ಮೆ ನೀಡಲಾಗುವ, ಒಟ್ಟು 50,000 GBP ಮೌಲ್ಯದ ಈ ಬಹುಮಾನವನ್ನು ಲೇಖಕ ಮತ್ತು ಅನುವಾದಕರ ನಡುವೆ ಸಮವಾಗಿ ಹಂಚಲಾಗುತ್ತದೆ. ಕಳೆದ ವರ್ಷ ಈ ಪ್ರಶಸ್ತಿಯನ್ನು ಕನ್ನಡ ಲೇಖಕಿ-ಸಮಾಜಸೇವಕಿ ಬಾನು ಮುಶ್ತಾಕ್ ಮತ್ತು ಅನುವಾದಕಿ ದೀಪಾ ಭಾಸ್ತಿ ಅವರು "ಹಾರ್ಟ್ ಲ್ಯಾಂಪ್" ಎಂಬ ಕಥಾಸಂಕಲನಕ್ಕಾಗಿ ಪಡೆದಿದ್ದರು.
ಅಂತಿಮ ಪಟ್ಟಿಗೆ ಆಯ್ಕೆಯಾದ ಪ್ರತಿಯೊಂದು ಕೃತಿಗೂ GBP 5,000ರ ಬಹುಮಾನ ಖಚಿತವಾಗಿದ್ದು, ಇದನ್ನೂ ಪುಸ್ತಕದ ಮೂಲ ಲೇಖಕ ಮತ್ತು ಇಂಗ್ಲಿಷ್ ಅನುವಾದಕರಿಗೆ ಸಮಭಾಗವಾಗಿ ಹಂಚಲಾಗಿತ್ತು.
ಈ ಕೃತಿ ಎಷ್ಟು ಮಿತವ್ಯಯಿ, ನಿರ್ದಾಕ್ಷಿಣ್ಯ, ಅಸಂಶಯ ಮತ್ತು ನಿರಂತರವಾಗಿದೆಯೆಂಬುದು ನಮ್ಮನ್ನು ಅತ್ಯಂತ ಆಕರ್ಷಿಸಿದ ಸಂಗತಿಯಾಗಿದೆ. ಮಾಯಾ ಅವರು ದೂರದ ಕಾರಾಗೃಹ, ಕೆಲವೇ ಮಂದಿ ಪುರುಷರು ಮತ್ತು ಅವರ ಜೀವನವನ್ನು ನಿಯಂತ್ರಿಸುವ ಶಿಕ್ಷೆಯ ವಿಧಿವಿಧಾನಗಳಂತಹ ಅತಿ ಕಡಿಮೆ ಅಂಶಗಳಿಂದಲೇ ಒಂದು ಸಂಪೂರ್ಣ ನೈತಿಕ ಜಗತ್ತನ್ನು ಈ ಕೃತಿಯ ಮೂಲಕ ನಿರ್ಮಿಸಿದ್ದಾರೆ.
“ಈ ಕಾದಂಬರಿ ಅಧಿಕಾರದ ಕುರಿತ ನೀತಿಕಥೆಯಂತಿದ್ದು; ಇಲ್ಲಿ ಕ್ರೌರ್ಯ ಸಾಮಾನ್ಯವಾಗಿದ್ದು, ನಾಗರಿಕತೆ ಭಯ ಹುಟ್ಟಿಸುವಷ್ಟು ಕ್ಷೀಣವಾಗಿ ಕಾಣಿಸುತ್ತದೆ,” ಎಂದು ತೀರ್ಪುಗಾರರ ಮಂಡಳಿ ಹೇಳಿದೆ. ಈ ಮಂಡಳಿಯಲ್ಲಿ ಪ್ರಶಸ್ತಿ ವಿಜೇತ ಭಾರತೀಯ ಕಾದಂಬರಿಕಾರ್ತಿ ಮತ್ತು ಕಾಲಮಿಸ್ಟ್ ನಿಲಾಂಜನಾ ಎಸ್. ರಾಯ್ ಕೂಡ ಇದ್ದಾರೆ. ಅಮೆರಿಕಾದಲ್ಲಿ ನೆಲೆಸಿರುವ ವಿಶ್ವನಾಥನ್ ಅವರು ಈ ಕೃತಿಯನ್ನು ಅನುವಾದಿಸಿದ್ದಾರೆ.