ಜೈಪುರ ಪೊಲೀಸರು 
ದೇಶ

400 ಕೋಟಿ ರೂ. ಸೈಬರ್ ವಂಚನೆ ಜಾಲ ಭೇದಿಸಿದ ಜೈಪುರ ಪೊಲೀಸರು; ವಂಚಕರು ಮಾಡಿದ್ದೇನು ಗೊತ್ತಾ?

ದುಬೈನಿಂದ ನಡೆಸಲಾಗುತ್ತಿದೆ ಎಂದು ನಂಬಲಾದ ಈ ಸಂಘಟಿತ ಸೈಬರ್ ವಂಚನೆಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ.

ಜೈಪುರ: ವಿದೇಶಾಂಗ ವ್ಯಾಪಾರ ನಿರ್ದೇಶನಾಲಯ(DGFT) ಪೋರ್ಟಲ್‌ನಲ್ಲಿ ದೇಶದಾದ್ಯಂತ 400 ಕಂಪನಿಗಳ ನಿರ್ದೇಶಕರ ಪ್ರೊಫೈಲ್‌ಗಳನ್ನು ಮೋಸದಿಂದ ಬದಲಾಯಿಸಿದ ಪ್ರಮುಖ ಸೈಬರ್ ವಂಚನೆ ಜಾಲವನ್ನು ಜೈಪುರ ಪೊಲೀಸರು ಬಯಲು ಮಾಡಿದ್ದಾರೆ.

ದುಬೈ ನಂಟು ಹೊಂದಿರುವ ಈ DGFT-ICEGATE ಸ್ಕ್ರಿಪ್ ಹಗರಣವು ಕೋಟ್ಯಂತರ ರೂಪಾಯಿ ನಷ್ಟವನ್ನುಂಟುಮಾಡಿದೆ ಎಂದು ಜೈಪುರ ಪೊಲೀಸ್ ಕಮಿಷನರೇಟ್ ಹೇಳಿದೆ.

ದುಬೈನಿಂದ ನಡೆಸಲಾಗುತ್ತಿದೆ ಎಂದು ನಂಬಲಾದ ಈ ಸಂಘಟಿತ ಸೈಬರ್ ವಂಚನೆಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ.

ಪೊಲೀಸರ ಪ್ರಕಾರ, ಈ ಜಾಲವು 400 ಕ್ಕೂ ಹೆಚ್ಚು ಕಂಪನಿಗಳ ನಿರ್ದೇಶಕರ ಪ್ರೊಫೈಲ್‌ಗಳನ್ನು ಅತ್ಯಂತ ಹೆಚ್ಚು ಕುಶಲತೆಯಿಂದ ನಿರ್ವಹಿಸಿ ಕೋಟಿಗಟ್ಟಲೆ ನಷ್ಟವನ್ನುಂಟುಮಾಡಿದ್ದಾರೆ. ಇಲ್ಲಿಯವರೆಗೆ ಐದು ಆರೋಪಿಗಳನ್ನು ಬಂಧಿಸಲಾಗಿದೆ, ಎಲ್ಲರೂ ದುಬೈನಿಂದ ನಡೆಸಲ್ಪಡುತ್ತಿರುವ ಜಾಲದ ಭಾಗವಾಗಿದ್ದಾರೆ ಎಂದು ಹೇಳಿದ್ದಾರೆ.

ಆರೋಪಿಗಳು ನಕಲಿ ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗಳನ್ನು ಬಳಸಿ ಡಿಜಿಟಲ್ ಸಿಗ್ನೇಚರ್ ಪ್ರಮಾಣಪತ್ರಗಳನ್ನು(ಡಿಎಸ್‌ಸಿ) ಪಡೆದುಕೊಂಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಕಂಪನಿಯ ನಿರ್ದೇಶಕರು ಅಥವಾ ರಫ್ತುದಾರರ ಡಿಜಿಟಲ್ ಗುರುತನ್ನು ಪರಿಶೀಲಿಸಲು ಸಾಮಾನ್ಯವಾಗಿ ಬಳಸಲಾಗುವ ಈ ಪ್ರಮಾಣಪತ್ರಗಳನ್ನು ನಂತರ ಸುರಕ್ಷಿತ ICEGATE ಪೋರ್ಟಲ್‌ಗೆ ಅನಧಿಕೃತ ಪ್ರವೇಶವನ್ನು ಪಡೆಯಲು ದುರುಪಯೋಗಪಡಿಸಿಕೊಂಡಿದ್ದಾರೆ. ಒಳಗೆ ಪ್ರವೇಶಿಸಿದ ನಂತರ, ಹ್ಯಾಕರ್‌ಗಳು ರಫ್ತುದಾರರ ಖಾತೆಗಳನ್ನು ಭೇದಿಸಿ, ಡ್ಯೂಟಿ ಕ್ರೆಡಿಟ್ ಸ್ಕ್ರಿಪ್‌ಗಳನ್ನು ಮೋಸದ ಖಾತೆಗಳಿಗೆ ವರ್ಗಾಯಿಸಿ, ನಂತರ ಅದನ್ನು ನಗದು ರೂಪದಲ್ಲಿ ಪಡೆದುಕೊಂಡಿದ್ದಾರೆ. ಹಣದ ಹಾದಿಯನ್ನು ಮರೆಮಾಚಲು, ಹಣವನ್ನು ಹಲವು "ಮ್ಯೂಲ್ ಖಾತೆಗಳು" ಮೂಲಕ ರವಾನಿಸಲಾಗಿದೆ.

ಈ ಸಂಬಂಧ ಮರುಧರ್ ಕ್ವಾರ್ಟ್ಜ್ ಸರ್ಫೇಸಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಸೌರಭ್ ಬಾಫ್ನಾ ಅವರು ದೂರು ನೀಡಿದ ನಂತರ ಈ ವಂಚನೆ ಬೆಳಕಿಗೆ ಬಂದಿದೆ ವಿಶೇಷ ಪೊಲೀಸ್ ಆಯುಕ್ತ ಓಂ ಪ್ರಕಾಶ್ ಅವರು ಹೇಳಿದ್ದಾರೆ.

ಡಿಸೆಂಬರ್ 17, 2025 ರ ನಂತರ ತಾವು ಲಾಗಿನ್ ಆಗದಿದ್ದರೂ, ಅವರ ಐಇಸಿ ಐಡಿಯಿಂದ 17.88 ಲಕ್ಷ ರೂ. ಮೌಲ್ಯದ ಐದು ಸ್ಕ್ರಿಪ್‌ಗಳನ್ನು ವರ್ಗಾಯಿಸಲಾಗಿದೆ ಎಂದು ಬಾಫ್ರಾ ಆರೋಪಿಸಿದ್ದಾರೆ.

ಈ ವಂಚನೆ ಜಾಲವು ಜೋಧ್‌ಪುರ ಮತ್ತು ಪಾಲಿ ಸೇರಿದಂತೆ ಹಲವು ಸ್ಥಳಗಳಲ್ಲಿ ವ್ಯಾಪಿಸಿದೆ. ಇಲ್ಲಿಯವರೆಗೆ ಒಟ್ಟು 13 ಶಂಕಿತರನ್ನು ಗುರುತಿಸಲಾಗಿದೆ. ಬಂಧಿತರಲ್ಲಿ ಸುಲ್ತಾನ್ ಖಾನ್, ನಂದ್ ಕಿಶೋರ್, ಅಶೋಕ್ ಕುಮಾರ್ ಭಂಡಾರಿ, ಪ್ರಮೋದ್ ಖತ್ರಿ (ಎಲ್ಲರೂ ಜೋಧ್‌ಪುರದವರು), ಮತ್ತು ಪಾಲಿಯ ನಿರ್ಮಲ್ ಸೋನಿ ಎಂದು ಗುರುತಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Iran ಸರ್ವಾಧಿಕಾರಿ ಈಗ 'ಜೀವಂತ ಶವ', 'ಪ್ರಜ್ಞಾಹೀನ'.. ಯುದ್ಧವೂ ಗೊತ್ತಿಲ್ಲ.. ಕದನ ವಿರಾಮದ ಅರಿವೂ ಇಲ್ಲ: ವರದಿ

'ಹೇಳಿ ಇಲ್ಲದಿದ್ದರೆ ಜೈಲಿಗೆ ಹೋಗಿ': F-15 ಜೆಟ್‌ ಸೂಕ್ಷ್ಮ ಮಾಹಿತಿ 'ಸೋರಿಕೆದಾರನ' ಪತ್ತೆಗೆ ಡೊನಾಲ್ಡ್ ಟ್ರಂಪ್ ಪ್ರತಿಜ್ಞೆ, ಮಾಧ್ಯಮಗಳಿಗೆ ಬೆದರಿಕೆ!

ವಲಸೆ ಕಾರ್ಮಿಕರಿಗೆ ಬಿಗ್ ರಿಲೀಫ್: ರಾಜ್ಯಗಳಿಗೆ 5 ಕೆಜಿ ಸಿಲಿಂಡರ್ ಹಂಚಿಕೆ ದ್ವಿಗುಣಗೊಳಿಸಿದ 'ಕೇಂದ್ರ ಸರ್ಕಾರ'

ಮಧ್ಯಪ್ರಾಚ್ಯ ಉದ್ವಿಗ್ನತೆ ನಡುವಲ್ಲೇ ಅಮೆರಿಕಾ ಪ್ರವಾಸ ಹೊರಟ ವಿಕ್ರಮ್ ಮಿಸ್ರಿ: ವ್ಯಾಪಾರ-ರಕ್ಷಣಾ ಸಹಕಾರ ಕುರಿತು ಚರ್ಚೆ

ಆಂಧ್ರಪ್ರದೇಶ ರಾಜಧಾನಿಯಾಗಿ Amaravati ಅಧಿಕೃತ: ಕೊನೆಗೂ ಬಿತ್ತು ರಾಷ್ಟ್ರಪತಿಗಳ ಅಂಕಿತ, ಸಿಎಂ ನಾಯ್ಡು ಅಭಿನಂದನೆ!

SCROLL FOR NEXT