ರಾಘವ್ ಚಡ್ಡಾ 
ದೇಶ

ರಾಘವ್ ಚಡ್ಡಾ ಹೊಸ ರಾಜಕೀಯ ಪಕ್ಷ ಸ್ಥಾಪನೆ? ಆಸಕ್ತಿದಾಯಕ ಚಿಂತನೆ ಮುಂದಿಟ್ಟ AAP ಸಂಸದ!

ರಾಘವ್ ಚಡ್ಡಾ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪುಸ್ತಕವೊಂದರ ‘ನೆವರ್ ಔಟ್‌ಶೈನ್‌ ದ ಮಾಸ್ಟರ್‌’ ಎಂಬ ಪಠ್ಯದ ಶೀರ್ಷಿಕೆ ಹಾಕಿ ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ತಿರುಗೇಟು ನೀಡಿದ್ದರು.

ನವದೆಹಲಿ: ಮತ್ತೊಂದು ಪಕ್ಷ ಸೇರುವುದಕ್ಕಿಂತ ಸ್ವಂತ ಪಕ್ಷವನ್ನೇಕೆ ಸ್ಥಾಪಿಸಬಾರದು ಎಂಬ Instagram ಬಳಕೆದಾರರೊಬ್ಬರ ವಿಡಿಯೋ ಪೋಸ್ಟ್‌ಗೆ ಕುತೂಹಲಕಾರಿ ಆಲೋಚನೆ ಎಂದು ಎಎಪಿ ರಾಜ್ಯಸಭೆ ಸದಸ್ಯ ರಾಘವ್ ಚಡ್ಡಾ ಪ್ರತಿಕ್ರಿಯಿಸಿದ್ದಾರೆ.

ರಾಘವ್ ಚಡ್ಡಾ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪುಸ್ತಕವೊಂದರ ‘ನೆವರ್ ಔಟ್‌ಶೈನ್‌ ದ ಮಾಸ್ಟರ್‌’ ಎಂಬ ಪಠ್ಯದ ಶೀರ್ಷಿಕೆ ಹಾಕಿ ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ತಿರುಗೇಟು ನೀಡಿದ್ದರು. ಇದನ್ನು ಹಂಚಿಕೊಂಡಿದ್ದ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ವಿಡಿಯೋ ಪೋಸ್ಟ್‌ ಮಾಡಿದ್ದರು.

ಕಳೆದ ವಾರ ಚಡ್ಡಾ ಅವರನ್ನು ಆಮ್‌ ಆದ್ಮಿ ಪಕ್ಷ ರಾಜ್ಯಸಭೆಯ ಉಪನಾಯಕನ ಸ್ಥಾನದಿಂದ ತೆರವು ಮಾಡಿತ್ತು. ಅಲ್ಲದೆ, ಪ್ರಧಾನಿ ಮೋದಿ ವಿರುದ್ಧ ಚಡ್ಡಾ ಪ್ರಶ್ನೆ ಎತ್ತುತ್ತಿಲ್ಲ ಎಂದು ಆರೋಪಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಚಡ್ಡಾ ‘ನನ್ನ ಧ್ವನಿ ಅಡಗಿಸಲಾಗಿದೆ, ಸೋಲಿಸಲಾಗಿಲ್ಲ’ ಎಂದಿದ್ದರು. ನಾಲ್ಕು ವಿಡಿಯೊ ಮತ್ತು ಎರಡು ಪೋಸ್ಟ್‌ಗಳನ್ನು ಬಿಡುಗಡೆ ಮಾಡುವ ಮೂಲಕ ‘ಪಕ್ಷದ ನಿರ್ಧಾರದಿಂದ ನಾನು ಸುಮ್ಮನೆ ಕೂರುವುದಿಲ್ಲ’ ಎಂದು ಸಂದೇಶ ರವಾನಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಅಥವಾ ಕೇಂದ್ರ ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಎತ್ತುವುದನ್ನು ಚಡ್ಡಾ ತಪ್ಪಿಸುತ್ತಿದ್ದಾರೆ ಎಂದು ಎಎಪಿ ಆರೋಪಿಸಿತ್ತು. ನಾನು ಗದ್ದಲ ಸೃಷ್ಟಿಸಲು ಅಲ್ಲ, ಜನರ ಸಮಸ್ಯೆಗಳ ಬಗ್ಗೆ ದನಿ ಎತ್ತಲು ಸಂಸತ್ತಿನಲ್ಲಿದ್ದೇನೆ ಎಂದು ಹೇಳುವ ಮೂಲಕ ಚಡ್ಡಾ ತಿರುಗೇಟು ನೀಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!