ಪ್ರಹ್ಲಾದ್ ಜೋಶಿ 
ದೇಶ

Video ಗೇಮ್ ಚೇಂಜರ್ ಆಗುತ್ತಾ ಈ ಎಲೆಕ್ಟ್ರಿಕ್ ಸ್ಟವ್?; LPG ಮಾದರಿಯ ಇಂಡಕ್ಷನ್ ಪ್ರದರ್ಶಿಸಿದ ಪ್ರಹ್ಲಾದ್ ಜೋಶಿ!

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು LPG ಸ್ಟವ್ ಮಾದರಿಯ ವಿದ್ಯುತ್ ಆಧಾರಿತ ಹೊಸ ಸ್ವವ್ ಅನ್ನು ಪ್ರದರ್ಶಿಸಿದ್ದು, ಇದು "ಗೇಮ್ ಚೇಂಜರ್" ಆಗಬಹುದು ಎಂದು ಹೇಳಿದ್ದಾರೆ.

ನವದೆಹಲಿ: ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಎಲ್‌ಪಿಜಿ ಪೂರೈಕೆಯಲ್ಲಿನ ಅಡಚಣೆಗಳ ನಡುವೆ, ಅಮೆರಿಕ ಮತ್ತು ಇರಾನ್ ನಡುವಿನ ದುರ್ಬಲ ಕದನ ವಿರಾಮದ ನಂತರ ಭಾರತದಲ್ಲಿ ಆಟೋ ಎಲ್‌ಪಿಜಿ ಹಾಗೂ ಮನೆಗಳಿಗೆ ಎಲ್ ಪಿಜಿ ಪೂರೈಕೆಯಲ್ಲಿ ತೀವ್ರ ಸಮಸ್ಯೆಯಾಗುತ್ತಿದೆ.

ಭಾರತ ಎಲ್ ಪಿಜಿಗೆ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದ್ದು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು LPG ಸ್ಟವ್ ಮಾದರಿಯ ವಿದ್ಯುತ್ ಆಧಾರಿತ ಹೊಸ ಸ್ವವ್ ಅನ್ನು ಪ್ರದರ್ಶಿಸಿದ್ದು, ಇದು "ಗೇಮ್ ಚೇಂಜರ್" ಆಗಬಹುದು ಎಂದು ಹೇಳಿದ್ದಾರೆ.

ಗ್ಯಾಸ್ ಸ್ಟವ್ ಮಾದರಿಯಲ್ಲೇ ಜ್ವಾಲೆ ಹರಡುವ ‌ವಿದ್ಯುತ್ ಸ್ಟವ್ ಅನ್ನು ಪರಿಚಯಿಸಿ ಕೇಂದ್ರ ಸರ್ಕಾರ, ಅದರ ಉತ್ಪಾದನೆಗೆ ಆದ್ಯತೆ ನೀಡುವ ಚಿಂತನೆ ಸಹ ನಡೆಸುತ್ತಿದೆ.

ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರು ಆಗಿರುವ ಪ್ರಹ್ಲಾದ್ ಜೋಶಿ ಅವರು, LPG ಇಲ್ಲದೆ ಜ್ವಾಲೆಯನ್ನು ಉತ್ಪಾದಿಸುವ ವಿನೂತನ ಮಾದರಿ, ತಂತ್ರಜ್ಞಾನದ ವಿದ್ಯುತ್ ಸ್ಟವ್ ಅನ್ನು ಪ್ರದರ್ಶಿಸಿ, ಪರಿಚಯಿಸಿದ್ದಾರೆ.

"ನಿನ್ನೆ, ಭಾರತೀಯ ಕಂಪನಿಯೊಂದು ಅಡುಗೆಗಾಗಿ ಎಲ್‌ಪಿಜಿಯಂತೆಯೇ ಜ್ವಾಲೆ ಹರಡುವ ಬರ್ನರ್‌ಗಳನ್ನು ಹೊಂದಿರುವ, ಆಮದು ಮಾಡಿಕೊಂಡ ವಿದ್ಯುತ್ ಸ್ಟವ್ ಅನ್ನು ಪ್ರದರ್ಶಿಸಿತು. ಈ ನವೀನ ತಂತ್ರಜ್ಞಾನದಿಂದ ನಾನು ನಿಜವಾಗಿಯೂ ಪ್ರಭಾವಿತನಾಗಿದ್ದೇನೆ ಮತ್ತು ಭಾರತೀಯ ತಯಾರಕರು ಇದನ್ನು ದೇಶೀಯವಾಗಿ ಅಳವಡಿಸಿಕೊಂಡು ಉತ್ಪಾದಿಸುವುದನ್ನು ಎದುರು ನೋಡುತ್ತಿದ್ದೇನೆ" ಎಂದು ಜೋಶಿ ಅವರು X ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಎಲ್‌ಪಿಜಿಯ ಅಗತ್ಯವಿಲ್ಲದೆ ಅನಿಲದಂತೆ ಉರಿಯುವ ಶುದ್ಧ ಇಂಧನ ಮೂಲವನ್ನು ಅರಸುತ್ತಿದ್ದ ಭಾರತಿಯರಿಗೆ ಇದೀಗ ಎಲ್‌ಪಿಜಿಯಂತೆ ಜ್ವಾಲೆ ಹರಡುವ ಈ ವಿದ್ಯುತ್ ಸ್ಟೌ ಅಡುಗೆ ಅನಿಲದ ಕೊರತೆ ನೀಗಿಸುವ ಆಶಾಭಾವನೆ ಮೂಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ಅಕ್ರಮಗಳ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಹುಲ್ ಗಾಂಧಿ; TMC, RJD, ಮಿತ್ರಪಕ್ಷಗಳಿಂದಲೂ ಅರ್ಜಿ

ಸ್ಮಿತ್ ಮಚ್ಚರ್ ಬಗ್ಗೆ ಮೌನವೇಕೆ: ನನ್ನ ಆದರ್ಶ ಧ್ರುವ ರಾಠಿ ಅಲ್ಲ: ಶಿವಸೇನೆ UBT ತೊರೆದ ರಾಷ್ಟ್ರೀಯ ವಕ್ತಾರ ಆನಂದ್ ದುಬೆ!

'ದೇಶಕ್ಕೆ ಬೇಕಿರುವುದು ಸಾಕ್ಷ್ಯವೇ ಹೊರತು ಆರೋಪಗಳಲ್ಲ; ರಾಹುಲ್ ಗಾಂಧಿಯದ್ದು 'ಪೊಳ್ಳು' ಪ್ರತಿಭಟನೆ, ಆರೋಪ: ಬಿಜೆಪಿ ವಾಗ್ದಾಳಿ

ಗುಟ್ಟಾಗಿ ಮದುವೆಯಾಗಿದ್ದಾರಾ ನಟಿ ತ್ರಿಶಾ?: ಲಂಡನ್ ಸೆಲ್ಫಿಯಲ್ಲಿನ ಲಾಕೆಟ್ ನ ಗುಟ್ಟೇನು!

'ಬೆಂಗಳೂರಿನಲ್ಲಿ ಬ್ಲಿಂಕಿಟ್ ರೀತಿ ಕೆಲವೇ ನಿಮಿಷದಲ್ಲಿ ಗುಂಡಿ ಮುಚ್ಚುತ್ತೇವೆ': GBA ಮುಖ್ಯ ಆಯುಕ್ತ ಮಹೇಶ್ವರ ರಾವ್