ಗಾಜಿಯಾಬಾದ್ ರೀಲ್ಸ್ ಅಪಘಾತ 
ದೇಶ

ಬೈಕ್ ಚಾಲನೆ ಮಾಡುತ್ತಾ Reels ರೆಕಾರ್ಡ್: ಭೀಕರ ಅಪಘಾತದಲ್ಲಿ ಯುವತಿ ಸಾವು, ಯುವಕ ಗಂಭೀರ! Video

ಅಪಘಾತದ ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಯುವತಿ ಮೃತಪಟ್ಟಿದ್ದಾಳೆಂದು ಘೋಷಿಸಿದರು ಎನ್ನಲಾಗಿದೆ.

ಗಾಜಿಯಾಬಾದ್‌: ರೀಲ್ಸ್ ಹುಚ್ಚಾಟಕ್ಕೆ ಮತ್ತೊಂದು ಬಲಿಯಾಗಿದ್ದು, ಬೈಕ್ ಚಾಲನೆ ಮಾಡುವಾಗ ರೀಲ್ಸ್ ಚಿತ್ರಿಸುತ್ತಿದ್ದ ವೇಳೆ ಡಿವೈಡರ್ ಗೆ ಢಿಕ್ಕಿಯಾಗಿ ಯುವತಿ ಸಾವನ್ನಪ್ಪಿದ್ದರೆ, ಯುವಕ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಉತ್ತರ ಪ್ರದೇಶದ ಗಾಜಿಯಾಬಾದ್‌ನ ಐಎಂಎಸ್ ಕಾಲೇಜು ಫ್ಲೈಓವರ್ ಬಳಿ ಈ ದುರ್ಘಟನೆ ಸಂಭವಿಸಿದ್ದು, ಬೈಕ್ ಚಾಲನೆ ಮಾಡುವಾಗ ರೀಲ್‌ ಚಿತ್ರೀಕರಿಸುತ್ತಿದ್ದ ವೇಳೆ ಬೈಕ್ ಡಿವೈಡರ್ ಗೆ ಢಿಕ್ಕಿಯಾಗಿದೆ.

ಬೈಕ್ ಚಾಲನೆ ಮಾಡುತ್ತಿದ್ದ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಹಿಂಬದಿಯಲ್ಲಿದ್ದ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ.

ಆಗಿದ್ದೇನು?

ಗಾಜಿಯಾಬಾದ್‌ನ ಐಎಂಎಸ್ ಕಾಲೇಜು ಫ್ಲೈಓವರ್ ಬಳಿ ರೀಲ್ಸ್ ಚಿತ್ರೀಕರಿಸಲಾಗುತ್ತಿತ್ತು. ಈ ವೇಳೆ 19 ವರ್ಷದ ಯುವತಿ ಇಕ್ರಾ ಬೈಕ್ ಚಲಾಯಿಸುತ್ತಿದ್ದರೆ, ಆಕೆಯ ಪ್ರಿಯಕರ 20 ವರ್ಷದ ಹಾಶಿಮ್ ಆಕೆಯ ಹಿಂದೆ ಕುಳಿತಿದ್ದ. ಇಬ್ಬರೂ ಗಾಜಿಯಾಬಾದ್‌ನ ಪಸೋಂಡಾ ನೆರೆಹೊರೆಯ ನಿವಾಸಿಗಳು. ಆರಂಭದಲ್ಲಿ ಈ ಜೋಡಿ ತಮ್ಮ ಮೊಬೈಲ್ ನಲ್ಲಿ ಇದನ್ನು ವಿಡಿಯೋ ಮಾಡಿ ಅಪ್ಲೋಡ್ ಮಾಡಿತ್ತು.

ಇದರ ಬೆನ್ನಲ್ಲೇ ಯುವತಿ ಅತಿ ವೇಗದಲ್ಲಿ ಬೈಕ್ ಚಲಾಯಿಸಿದ್ದು, ನಿಯಂತ್ರಣ ಕಳೆದುಕೊಂಡಾಗ ಬೈಕ್ ಮೇಲ್ಸೇತುವೆಯ ಡಿವೈಡರ್ ಗೆ ಢಿಕ್ಕಿಯಾಗಿದೆ. ಈ ವೇಳೆ ಇಬ್ಬರೂ ನೆಲಕ್ಕುರುಳಿದ್ದು, ಇಬ್ಬರೂ ಹೆಲ್ಮೆಟ್ ಧರಿಸದ ಹಿನ್ನಲೆಯಲ್ಲಿ ಗಂಭೀರ ಗಾಯಗಳಾಗಿತ್ತು.

ಈ ಪೈಕಿ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಸ್ಥಳೀಯರು ಕೂಡಲೇ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಿದ್ದಾರೆ. ಇಕ್ರಾ ಅವರ ತಲೆ ಮತ್ತು ಮುಖಕ್ಕೆ ತೀವ್ರ ಗಾಯಗಳಾಗಿದ್ದರೆ, ಹಾಶಿಮ್ ಅವರ ಕಾಲುಗಳು, ಸೊಂಟ ಮತ್ತು ಭುಜಕ್ಕೆ ಗಾಯಗಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

ವಿಡಿಯೋ ವೈರಲ್

ಇನ್ನು ಈ ಜೋಡಿ ಬೈಕ್ ನಲ್ಲಿ ಕುಳಿತು ಸವಾರಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ. ಆಕೆ ಅತಿ ವೇಗದಲ್ಲಿ ಸವಾರಿ ಮಾಡುತ್ತಿದ್ದಳು. ಹಿಂದೆ ಕುಳಿತಿದ್ದ ಹಾಶೀಮ್ ತನ್ನ ಮೊಬೈಲ್ ನಲ್ಲಿ ಇದನ್ನು ಚಿತ್ರೀಕರಿಸುತ್ತಿದ್ದ.

ಅಪಘಾತದ ಪರಿಣಾಮ ಎಷ್ಟು ಪ್ರಬಲವಾಗಿತ್ತೆಂದರೆ ಅವರು ಹಲವಾರು ಅಡಿಗಳಷ್ಟು ಎತ್ತರಕ್ಕೆ ಎಸೆಯಲ್ಪಟ್ಟು ನೆಲಕ್ಕೆ ಬಿದ್ದಿದ್ದಾರೆ. ಇಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ. ಹೀಗಾಗಿ ಗಂಭೀರ ಪೆಟ್ಟಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಅಪಘಾತದ ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಯುವತಿ ಮೃತಪಟ್ಟಿದ್ದಾಳೆಂದು ಘೋಷಿಸಿದರು ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಗ್ರೇಟರ್ ನೋಯ್ಡಾದಲ್ಲಿ ಪ್ರವಾಸಿ ಬಸ್‌ಗೆ ಬೆಂಕಿ: 9ಮಂದಿ ಸಜೀವ ದಹನ; ಜಿಗಿದು ಪ್ರಾಣ ಉಳಿಸಿಕೊಂಡ ಜನ

ಸ್ಪರ್ಧೆ ಇರಲಿ, ವೈರತ್ವ ಬೇಡ: Trump ಭೇಟಿಯಾಗುತ್ತಿದ್ದಂತೆ Xi Jinping ಶಾಂತಿ ಮಂತ್ರ; US-China ನಡುವೆ ಶುರುವಾಯ್ತಾ ಹೊಸ ಸ್ನೇಹ ಪರ್ವ?

ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಆತಂಕ; ನಾವಿಕರು, ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ನಿಲ್ಲಲಿ: ಕ್ಷಿಪಣಿ ದಾಳಿ ಬೆನ್ನಲ್ಲೇ ವಿಶ್ವಕ್ಕೆ ಭಾರತ ಖಡಕ್ ಸಂದೇಶ..!

ಬರಗಾಲ ಕುರಿತು ಮುಗಿಯದ ಚರ್ಚೆ: ರಾಜ್ಯ ವಿಧಾನಸಭೆ ಅಧಿವೇಶನ ಒಂದು ದಿನ ವಿಸ್ತರಣೆ

ಪ್ರಧಾನಿ ಮೋದಿಗೆ ಸಿಎಂ ಡಿಕೆ ಶಿವಕುಮಾರ್ ಪತ್ರ: ಬರ ನಿರ್ವಹಣೆಗಾಗಿ ಶೇ. 50ರಷ್ಟು ಮಧ್ಯಂತರ ಪರಿಹಾರ ಬಿಡುಗಡೆಗೆ ಒತ್ತಾಯ!