ಸಂಸತ್ ಭವನದಲ್ಲಿ ಸಂತಸದ ಕ್ಷಣಗಳನ್ನು ಹಂಚಿಕೊಂಡ ಪ್ರಧಾನಿ ನರೇಂದ್ರ ಮೋದಿ ಮತ್ತು ಮಲ್ಲಿಕಾರ್ಜುನ ಖರ್ಗೆ  
ದೇಶ

ಡಾ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ: ನಗುತ್ತಾ ಪರಸ್ಪರ ಖುಷಿಯಾಗಿ ಕಂಡ ಮೋದಿ-ಖರ್ಗೆ; Video

ವಿಡಿಯೊದಲ್ಲಿ ಪ್ರಧಾನಿ ಮೋದಿ ಅವರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೈಕುಲುಕಿ, ಫೋಟೋ ತೆಗೆದುಕೊಳ್ಳಲು ಹಲವಾರು ನಾಯಕರನ್ನು ಕರೆಯುತ್ತಿರುವುದು ಕಾಣುತ್ತದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ದೆಹಲಿಯ ಸಂಸತ್ ಭವನದಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪರಸ್ಪರ ಸಂತೋಷದ, ನಗುವಿನ ಕ್ಷಣಗಳನ್ನು ಕಳೆದಿದ್ದು ಮಾಧ್ಯಮಗಳ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಯಾವಾಗಲೂ ಪರಸ್ಪರ ಆರೋಪ, ಟೀಕೆಗಳಲ್ಲಿ ತೊಡಗುವ ನಾಯಕರ ಈ ರಸಮಯ ಕ್ಷಣಗಳ ವಿಡಿಯೊ -ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ವಿಡಿಯೊದಲ್ಲಿ ಪ್ರಧಾನಿ ಮೋದಿ ಅವರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೈಕುಲುಕಿ, ಫೋಟೋ ತೆಗೆದುಕೊಳ್ಳಲು ಹಲವಾರು ನಾಯಕರನ್ನು ಕರೆಯುತ್ತಿರುವುದು ಕಾಣುತ್ತದೆ. ಈ ವೇಳೆ ಕಾಂಗ್ರೆಸ್ ಅಧ್ಯಕ್ಷರು ಅವರ ಪಕ್ಕದಲ್ಲೇ ನಿಂತಿದ್ದರು. ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಸಚಿವ ಕಿರಣ್ ರಿಜಿಜು, ಉಪ ರಾಷ್ಟ್ರಪತಿ ಸಿ ಪಿ ರಾಧಾಕೃಷ್ಣನ್ ಮತ್ತು ರಾಜ್ಯಸಭಾ ಸದಸ್ಯ ರಾಮದಾಸ್ ಅಠವಾಲೆ ಅವರು ಮೋದಿ ಅವರ ಜೊತೆ ಫೋಟೋಗೆ ನಿಂತಿದ್ದರು.

ಮಲ್ಲಿಕಾರ್ಜುನ ಖರ್ಗೆಯವರು ಸ್ವಲ್ಪ ದೂರ ನಿಂತಿರುವುದನ್ನು ಗಮನಿಸಿದ ಪ್ರಧಾನಿ ಮೋದಿ ಅವರು ಅವರನ್ನು ಫೋಟೋಗೆ ಸೇರಲು ಆಹ್ವಾನಿಸಿದರು. ಕಿರಣ್ ರಿಜಿಜು ಅವರು ಖರ್ಗೆ ಅವರ ಬಳಿಗೆ ಹೋಗಿ ಫೋಟೋ ಸೆಷನ್‌ಗೆ ಸೇರಲು ಆಹ್ವಾನಿಸಿದರು. ಖರ್ಗೆಯವರು ಬಂದು ಇತರ ನಾಯಕರ ಜೊತೆ ಸೇರಿ ಪ್ರಧಾನಿ ಮೋದಿ ಅವರೊಂದಿಗೆ ಫೋಟೋ ತೆಗೆಸಿಕೊಂಡರು.

ಫೋಟೋ ತೆಗೆದ ನಂತರ, ಅಪರೂಪದ ಹಾಸ್ಯಮಯ ಕ್ಷಣವೆಂದು ಹೇಳಬಹುದಾದ ರೀತಿಯಲ್ಲಿ, ಮೋದಿ ಮತ್ತು ಖರ್ಗೆ ಮತ್ತೆ ಕೈಕುಲುಕಿ ಸ್ನೇಹಪೂರ್ಣವಾಗಿ ಮಾತನಾಡಿಕೊಂಡರು.

ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಹಲವು ನಾಯಕರು ಗೌರವ ನಮನ ಸಲ್ಲಿಸಿದರು.

ಡಾ. ಅಂಬೇಡ್ಕರ್ ಅವರು ಭಾರತದ ನ್ಯಾಯತಜ್ಞ, ಆರ್ಥಿಕ ತಜ್ಞ ಮತ್ತು ಸಾಮಾಜಿಕ ಸುಧಾರಕರಾಗಿದ್ದು, ಭಾರತದ ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರು ಜಾತಿ ಭೇದಭಾವದ ವಿರುದ್ಧ ಹೋರಾಡಿ, ದಲಿತರು ಮತ್ತು ಇತರ ಹಿಂದುಳಿದ ಸಮುದಾಯಗಳ ಹಕ್ಕುಗಳಿಗಾಗಿ ಹೋರಾಟ ನಡೆಸಿದರು.

‘ಸಂವಿಧಾನದ ಪಿತಾಮಹ’ ಎಂದು ಪರಿಚಿತರಾದ ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದು, ಸಮಾನತೆ, ಮೂಲಭೂತ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯದಂತಹ ಪ್ರಮುಖ ತತ್ವಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರವಹಿಸಿದರು. ಅವರು ಭಾರತದ ಮೊದಲ ಕಾನೂನು ಸಚಿವರಾಗಿಯೂ ಸೇವೆ ಸಲ್ಲಿಸಿ, ಶಿಕ್ಷಣ, ಕಾರ್ಮಿಕ ಹಕ್ಕುಗಳು ಮತ್ತು ಮಹಿಳಾ ಸಬಲೀಕರಣದ ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ಒತ್ತಾಯಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಾರ್ಮುಜ್, ಲೆಬನಾನ್ ಕುರಿತು ಇಸ್ರೇಲ್ ವಿದೇಶಾಂಗ ಸಚಿವರೊಂದಿಗೆ ಜೈಶಂಕರ್ ಚರ್ಚೆ; ಇರಾನ್​​ನಿಂದ ಆರ್ಥಿಕ ಭಯೋತ್ಪಾದನೆ ಎಂದ ಸಾರ್!

ಇರಾನ್‌ನ ಬಂದರುಗಳ ದಿಗ್ಬಂಧನ ಕೈಬಿಡುವಂತೆ ಸೌದಿ ಅರೇಬಿಯಾ 'ಒತ್ತಡ': ಟ್ರಂಪ್ ನೀತಿಗೆ ಮಿತ್ರ ರಾಷ್ಟ್ರದಿಂದಲೇ ವಿರೋಧ!

ಪ. ಬಂಗಾಳ: ಮತದಾನಕ್ಕೆ ಕೆಲವೇ ದಿನ ಇರುವಂತೆಯೇ I-PAC ಸಹ-ಸಂಸ್ಥಾಪಕ ವಿನೇಶ್ ಚಾಂಡೆಲ್ ಬಂಧನ! ಯಾಕೆ ಗೊತ್ತಾ?

Strait of Hormuz: ಟ್ರಂಪ್ ದಿಗ್ಬಂಧನ ಮೀರಿ ಹಾರ್ಮುಜ್ ದಾಟಿದ ಚೀನಾ ಹಡಗು!

US-Iran Peace Talks: ಅಣ್ವಸ್ತ್ರ ವಿಚಾರದಲ್ಲಿ ಅಮೆರಿಕಾ ಕಠಿಣ ನಿಲುವು; ಮಾತುಕತೆಯಲ್ಲಿ ಪ್ರಗತಿ ಸಾಧಿಸಿದ್ದೇವೆ, ಮುಂದಿನ ನಿರ್ಧಾರ ಇರಾನ್'ಗೆ ಬಿಟ್ಟದ್ದು- ಜೆ.ಡಿ.ವ್ಯಾನ್ಸ್

SCROLL FOR NEXT