ಅಸಾದುದ್ದೀನ್ ಓವೈಸಿ 
ದೇಶ

ಮುಸ್ಲಿಮರನ್ನು ದನಗಳಂತೆ ನಡೆಸಿಕೊಳ್ಳುತ್ತೀರಿ; 8 ಲಕ್ಷ ಮುಸಲ್ಮಾನರನ್ನು ಪೂರ್ವ ಪಾಕಿಸ್ತಾನಕ್ಕೆ ಗಡೀಪಾರು ಮಾಡಿದಾಗ ಎಲ್ಲಿದ್ರಿ: ಅಸಾದುದ್ದೀನ್ ಓವೈಸಿ ಕಿಡಿ

ಬಂಗಾಳದಲ್ಲಿ ಬಿಜೆಪಿಯ ಸ್ಥಾನವನ್ನು ಬಲಪಡಿಸುತ್ತಿರುವುದು ಮಮತಾ ಬ್ಯಾನರ್ಜಿ. 1977 ರಲ್ಲಿ ಬಿಜೆಪಿ ಕೇವಲ ನಾಲ್ಕು ಶಾಸಕರನ್ನು ಹೊಂದಿತ್ತು ಎಂದು ಓವೈಸಿ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ: ಪ್ರಧಾನಿ ನರೇಂದ್ರ ಮೋದಿ ಮತ್ತು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ವರಿಷ್ಠ (ಟಿಎಂಸಿ) ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು "ಒಂದೇ ನಾಣ್ಯದ ಎರಡು ಮುಖಗಳು" ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸೋಮವಾರ ಆರೋಪ ಮಾಡಿದ್ದಾರೆ.

ಮಮತಾ ಬ್ಯಾನರ್ಜಿಗೆ ನಿಮ್ಮನ್ನ ಕಂಡರೆ ಪ್ರೀತಿ ಇಲ್ಲ. ಅವ್ರ ಪ್ರೀತಿ ಇರೋದು ನಿಮ್ಮ ಮತಗಳ ಮೇಲೆ ಮಾತ್ರ. ಬಿಜೆಪಿಯ ಫ್ಯಾಸಿಸ್ಟ್ ಅಜೆಂಡಾವನ್ನು ನಾವು ತಡೆಯಬೇಕಿದೆ ಎಂದು ಹೇಳಿದ್ದಾರೆ. ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆಪಿ ಬೆಳೆಯಲು ಸಹಾಯ ಮಾಡಿದವರು ಮತ್ತು ಮುಸ್ಲಿಮರೊಂದಿಗೆ 'ಯೂಸ್ ಅಂಡ್ ಥ್ರೋ' ನೀತಿಯನ್ನು ಬಳಸಿದವರೂ ಅವರೇ ಎಂದು ಹೇಳಿದ್ದಾರೆ.

ಮುಸ್ಲಿಂ ಮತಗಳನ್ನು ವಿಭಜಿಸುವ ಮೂಲಕ ಬಿಜೆಪಿಯ ಬಿ ಟೀಮ್ ಆಟವಾಡುತ್ತಿದೆ ಎಂದು ಆರೋಪಿಸಿದ್ದಾರೆ. ಆರ್‌ಜೆಡಿ ಜೊತೆಗಿನ ಮೈತ್ರಿಯ ಮೂಲಕ ಬಿಹಾರದಲ್ಲಿ ರಾಜ್ಯಸಭಾ ಸ್ಥಾನವನ್ನು ಪಡೆದವು. ಆದರು ನಮ್ಮ 'ಪಾಪಗಳಿಂದ' ಮುಕ್ತರಾಗಲಿಲ್ಲ. ನಿಜವಾದ ಕಳಂಕ ಇನ್ನೊಂದು ಬದಿಯಲ್ಲಿದೆ. ಬಂಗಾಳದಲ್ಲಿ ಬಿಜೆಪಿಯ ಸ್ಥಾನವನ್ನು ಬಲಪಡಿಸುತ್ತಿರುವುದು ಮಮತಾ ಬ್ಯಾನರ್ಜಿ. 1977 ರಲ್ಲಿ, ಬಿಜೆಪಿ ಕೇವಲ ನಾಲ್ಕು ಶಾಸಕರನ್ನು ಹೊಂದಿತ್ತು ಎಂದು ಓವೈಸಿ ತಿಳಿಸಿದ್ದಾರೆ.

ಜನರು ನಮ್ಮ ಮೇಲೆ ನಿಂದಿಸುತ್ತಿದ್ದಾರೆ. ನೀವು ಏಕೆ ಸ್ಪರ್ಧಿಸುತ್ತಿದ್ದೀರಿ? ಎಂದು ಪ್ರಶ್ನಿಸುತ್ತಿದ್ದಾರೆ. 800,000 ಮುಸ್ಲಿಮರನ್ನು ಪೂರ್ವ ಪಾಕಿಸ್ತಾನಕ್ಕೆ ಗಡೀಪಾರು ಮಾಡಿದಾಗ ಈಗ ಪ್ರಶ್ನಿಸುತ್ತಿರುವವರು ಎಲ್ಲಿದ್ದರು? ನಾವು ಸ್ಪರ್ಧಿಸಲಲು ಆಯ್ಕೆ ಮಾಡಿದ್ದಕ್ಕಾಗಿ ನಮ್ಮನ್ನು ನಿಂದಿಸುತ್ತಿದ್ದಾರೆ ಎಂದು ಅವರು ಓವೈಸಿ ಕಿಡಿ ಕಾರಿದ್ದಾರೆ.

1998 ಮತ್ತು 1999 ರಲ್ಲಿ ಬಿಜೆಪಿಯ ಮೊದಲ ಸಂಸತ್ತಿನ ಗೆಲುವಿಗೆ ತೃಣಮೂಲ ಪಕ್ಷ ಸಹಕರಿಸಲಿಲ್ಲವೇ? ತರುವಾಯ, ನೀವು (ಮಮತಾ ಬ್ಯಾನರ್ಜಿ) ರೈಲ್ವೆ ಸಚಿವರಾದಿರಿ, ಆದರೆ ನಂತರ ಜಾರ್ಜ್ [ಫರ್ನಾಂಡಿಸ್] ಸಾಬ್ ಅವರನ್ನು ನೆಪವಾಗಿ ಬಳಸಿಕೊಂಡು ಬೇರ್ಪಟ್ಟಿರಿ. ಅದಾದ ಮೇಲೂ ನೀವು ಖಾತೆ ಇಲ್ಲದ ಸಚಿವರಾಗಿ ಸಂಪುಟಕ್ಕೆ ಮತ್ತೆ ಸೇರಿದಿರಿ. ಇಡೀ ರಾಷ್ಟ್ರ ಗುಜರಾತ್ ನರಮೇಧದ ಬಗ್ಗೆ ಬೆರಳು ತೋರಿಸುತ್ತಿದ್ದಾಗ, ನೀವು ನನ್ನ ಕಡೆಗೆ ಬೆರಳು ತೋರಿಸುತ್ತಿದ್ದೀರಿ" ಎಂದು ಅವರು ಹೇಳಿದರು.

ಮುಖ್ಯಮಂತ್ರಿಗಳು ಮುಸ್ಲಿಮರಿಗಾಗಿ ಏನು ಮಾಡಿದ್ದಾರೆ ಎಂದು ಅವರು ಪ್ರಶ್ನಿಸಿದರು, ನೀವು (ಮಮತಾ ಬ್ಯಾನರ್ಜಿ) ವಿಶೇಷ ಆರ್ಥಿಕ ವಲಯಗಳನ್ನು ಏಕೆ ಸ್ಥಾಪಿಸುವುದಿಲ್ಲ? ನೀವು ಮುಸ್ಲಿಮರನ್ನು ದನಗಳಂತೆ , ಹಸುಗಳು ಮತ್ತು ಎಮ್ಮೆಗಳಂತೆ ನಡೆಸಿಕೊಳ್ಳುತ್ತಿದ್ದೀರಿ, ಅವರ ಮತಗಳಿಗಾಗಿ ಹಾಲು ಕುಡಿಸಿ ನಂತರ ಅವುಗಳನ್ನು ಪಕ್ಕಕ್ಕೆ ಎಸೆಯುತ್ತೀರಿ" ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಾರ್ಮುಜ್, ಲೆಬನಾನ್ ಕುರಿತು ಇಸ್ರೇಲ್ ವಿದೇಶಾಂಗ ಸಚಿವರೊಂದಿಗೆ ಜೈಶಂಕರ್ ಚರ್ಚೆ; ಇರಾನ್​​ನಿಂದ ಆರ್ಥಿಕ ಭಯೋತ್ಪಾದನೆ ಎಂದ ಸಾರ್!

ಇರಾನ್‌ನ ಬಂದರುಗಳ ದಿಗ್ಬಂಧನ ಕೈಬಿಡುವಂತೆ ಸೌದಿ ಅರೇಬಿಯಾ 'ಒತ್ತಡ': ಟ್ರಂಪ್ ನೀತಿಗೆ ಮಿತ್ರ ರಾಷ್ಟ್ರದಿಂದಲೇ ವಿರೋಧ!

Strait of Hormuz: ಟ್ರಂಪ್ ದಿಗ್ಬಂಧನ ಮೀರಿ ಹಾರ್ಮುಜ್ ದಾಟಿದ ಚೀನಾ ಹಡಗು!

US-Iran Peace Talks: ಅಣ್ವಸ್ತ್ರ ವಿಚಾರದಲ್ಲಿ ಅಮೆರಿಕಾ ಕಠಿಣ ನಿಲುವು; ಮಾತುಕತೆಯಲ್ಲಿ ಪ್ರಗತಿ ಸಾಧಿಸಿದ್ದೇವೆ, ಮುಂದಿನ ನಿರ್ಧಾರ ಇರಾನ್'ಗೆ ಬಿಟ್ಟದ್ದು- ಜೆ.ಡಿ.ವ್ಯಾನ್ಸ್

ದಿವಂಗತ ಆಶಾ ಭೋಸ್ಲೆ ಸ್ಮರಿಸಿದ WWE ತಾರೆ John Cena

SCROLL FOR NEXT