ಪ್ರಿಯಾಂಕಾ ಗಾಂಧಿ ಮತ್ತು ಅಮಿತ್ ಶಾ 
ದೇಶ

'ಚಾಣಕ್ಯ ಬದುಕಿದ್ದಿದ್ದರೆ ನಿಮ್ಮ ರಾಜಕೀಯ ಕುತಂತ್ರ ಕಂಡು ಬೆಚ್ಚಿಬೀಳುತ್ತಿದ್ದ; NDA ಸರ್ಕಾರದ ಪಾಲಿಗೆ ಮಹಿಳಾ ಮೀಸಲಾತಿ ರಾಜಕೀಯ ಟ್ರಂಪ್ ಕಾರ್ಡ್'! Video

ಮಹಿಳಾ ಮೀಸಲಾತಿ ಎಂಬುದು ಎನ್‌ಡಿಎ ಸರ್ಕಾರದ ಪಾಲಿಗೆ ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳಲು ಬಳಸುತ್ತಿರುವ ರಾಜಕೀಯ ಟ್ರಂಪ್ ಕಾರ್ಡ್ ಆಗಿದೆ. ಬಿಜೆಪಿ ಸಂವಿಧಾನಕ್ಕೆ ಧಕ್ಕೆ ತರುವ ಮೂಲಕ ತನ್ನ ಪಕ್ಷದ ಬುನಾದಿಯನ್ನು ಭದ್ರಪಡಿಸಿಕೊಳ್ಳುತ್ತಿದೆ.

ನವದೆಹಲಿ: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಕುರಿತ ಚರ್ಚೆಯ ವೇಳೆ ಕಾಂಗ್ರೆಸ್‌ನ ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ 'ಚಾಣಕ್ಯ'ನ ಹೆಸರು ಉಲ್ಲೇಖಿಸಿ ಕಾಲೆಳೆದಿದ್ದಾರೆ.

ಗುರುವಾರ ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಮಂಡಿಸಿರುವ ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ಪಕ್ಷವು ಮಹಿಳಾ ಮೀಸಲಾತಿಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ಆದರೆ, ಇಲ್ಲಿ ಚರ್ಚೆ ನಡೆಯುತ್ತಿರುವುದು ಮೀಸಲಾತಿಯ ಬಗ್ಗೆ ಅಲ್ಲ, ಬದಲಾಗಿ ಈ ಮಸೂದೆಯಲ್ಲಿ ಅಡಗಿರುವ ರಾಜಕೀಯ ದುರುದ್ದೇಶದ ಬಗ್ಗೆ ಎಂದು ಗುಡುಗಿದರು.

ಮಹಿಳಾ ಮೀಸಲಾತಿ ಎಂಬುದು ಎನ್‌ಡಿಎ ಸರ್ಕಾರದ ಪಾಲಿಗೆ ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳಲು ಬಳಸುತ್ತಿರುವ ರಾಜಕೀಯ ಟ್ರಂಪ್ ಕಾರ್ಡ್ ಆಗಿದೆ. ಬಿಜೆಪಿ ಸಂವಿಧಾನಕ್ಕೆ ಧಕ್ಕೆ ತರುವ ಮೂಲಕ ತನ್ನ ಪಕ್ಷದ ಬುನಾದಿಯನ್ನು ಭದ್ರಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ತಮ್ಮ ಮಾತಿಗೆ ಅಮಿತ್ ಶಾ ಹಾಗೂ ಇತರ ಬಿಜೆಪಿ ಸಂಸದರು ನಗುತ್ತಿರುವುದನ್ನು ಗಮನಿಸಿದ ಪ್ರಿಯಾಂಕಾ ಗಾಂಧಿ, "ನೀವೆಲ್ಲರೂ ಸಂಪೂರ್ಣವಾಗಿ ಪ್ಲಾನ್ ಮಾಡಿಕೊಂಡೇ ಬಂದಿದ್ದೀರಿ. ಇಂದು ಒಂದು ವೇಳೆ ಚಾಣಕ್ಯ ಬದುಕಿದ್ದರೆ, ಆತನೂ ಕೂಡ ನಿಮ್ಮ ಕುತಂತ್ರವನ್ನು ನೋಡಿ ಆಘಾತಕ್ಕೊಳಗಾಗುತ್ತಿದ್ದ ಎಂದು ಚಾಟಿ ಬೀಸಿದರು. ಪ್ರಿಯಾಂಕಾ ಅವರ ಈ ಮಾತು ಕೇಳಿ ಅಮಿತ್ ಶಾ, ಕಿರಣ್ ರಿಜಿಜು ಸೇರಿದಂತೆ ಹಲವು ಬಿಜೆಪಿ ಸಂಸದರು ಜೋರಾಗಿ ನಕ್ಕರು.

ಮಹಿಳೆಯರಿಗೆ ಯಾರು ಸುಳ್ಳು ಹೇಳುತ್ತಿದ್ದಾರೆ ಎಂಬುದನ್ನು ಗ್ರಹಿಸುವ ಶಕ್ತಿ ಇರುತ್ತದೆ. ಹಾಗಾಗಿ ಬಿಜೆಪಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಪ್ರಧಾನಿಯವರು ತಾವೇ ಮಹಿಳಾ ಮೀಸಲಾತಿಯ ಅತಿ ದೊಡ್ಡ ಬೆಂಬಲಿಗರು ಹಾಗೂ ಪ್ರತಿಪಾದಕರು ಎಂಬಂತೆ ಮಾತನಾಡಿದರು.

2023ರಲ್ಲಿ ರಾಹುಲ್ ಗಾಂಧಿ ಪತ್ರ ಬರೆದ ಬಳಿಕ ಈ ಮಸೂದೆ ಅಂಗೀಕಾರವಾದಾಗ, ಕಾಂಗ್ರೆಸ್ ತನ್ನ ಸಿದ್ಧಾಂತಕ್ಕೆ ಅನುಗುಣವಾಗಿ ಅದನ್ನು ಸಂಪೂರ್ಣವಾಗಿ ಬೆಂಬಲಿಸಿತ್ತು" ಎಂದು ಸ್ಪಷ್ಟಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ನೇಪಾಳ ಭೀಕರ ಪ್ರವಾಹಕ್ಕೆ ಚೀನಾದ ನಿರ್ಮಾಣ ಕಾರ್ಯವೇ ಕಾರಣ?

'ಸಿಂಹ ಸುಮ್ಮನೆ ಕುಳಿತಿದೆ ಅಂದ್ರೆ ಸುಸ್ತಾಗಿದೆ ಅಂತಲ್ಲ, ಮುಂದಿನ ಬೇಟೆಗೆ ರೆಡಿ ಆಗ್ತಿದೆ ಎಂದರ್ಥ': ಕಿಚ್ಚ ಸುದೀಪ್ ದಿಢೀರ್ ಪೋಸ್ಟ್; ಇಲ್ಲಿದೆ ಕಾರಣ...

ಕಾನ್ಪುರದಲ್ಲಿ ತರಬೇತಿ ವಿಮಾನ ಪತನ: ಕರ್ನಾಟಕದ ಪೈಲಟ್‌ ಅಭಿಷೇಕ್​ ಸೇರಿ ಇಬ್ಬರು ಸಾವು; Video

Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!

Nepal flood: ಮೃತರ ಸಂಖ್ಯೆ 270ಕ್ಕೆ ಏರಿಕೆ, ಸುಮಾರು 288 ಭಾರತೀಯರು ನಾಪತ್ತೆ! 800ಕ್ಕೂ ಹೆಚ್ಚು ಜನರ ರಕ್ಷಣೆ