ಸಾಂದರ್ಭಿಕ ಚಿತ್ರ  
ದೇಶ

ತಿದ್ದುಪಡಿ ಮಸೂದೆಗಳಿಗೆ ಮತದಾನಕ್ಕೆ ಮುನ್ನವೇ ಮಹಿಳಾ ಮೀಸಲಾತಿ ಕಾಯ್ದೆ ಜಾರಿ ಏಕೆ?: ವಿರೋಧ ಪಕ್ಷಗಳ ಪ್ರಶ್ನೆ

ಈ ಕಾಯ್ದೆಯನ್ನು ನಿನ್ನೆ ಏಪ್ರಿಲ್ 16ರಿಂದ ಜಾರಿಗೆ ತರಲಾಗಿದೆ. ಆದರೆ ಇದರ ಅನುಷ್ಠಾನವನ್ನು 2029ರಿಂದ ಆರಂಭಿಸಲು ಸಂಸತ್ತಿನಲ್ಲಿ ಚರ್ಚೆಗಳು ನಡೆಯುತ್ತಿವೆ.

ಮಹಿಳಾ ಮೀಸಲಾತಿ ಕಾಯಿದೆ, 2023 (ನಾರಿ ಶಕ್ತಿ ವಂದನ ಅಧಿನಿಯಮ), ಸಂಸತ್ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33 ಶೇಕಡಾ ಮೀಸಲಾತಿ ನೀಡುವ ಕಾಯ್ದೆ ಲೋಕಸಭೆಯಲ್ಲಿ ಇಂದು ಶುಕ್ರವಾರ ಸಂಜೆ 4 ಗಂಟೆಗೆ ನಡೆಯಲಿರುವ ಮತದಾನಕ್ಕೂ ಮುನ್ನ ಜಾರಿಗೆ ಬಂದಿದೆ. ಮತದಾನವು ಈ ಕಾಯ್ದೆಯನ್ನು ಕಾರ್ಯಗತಗೊಳಿಸಲು ಅಗತ್ಯವಾದ ತಿದ್ದುಪಡಿಗಳ ಕುರಿತು ನಡೆಯುತ್ತಿದೆ.

ಈ ಕಾಯ್ದೆಯನ್ನು ನಿನ್ನೆ ಏಪ್ರಿಲ್ 16ರಿಂದ ಜಾರಿಗೆ ತರಲಾಗಿದೆ. ಆದರೆ ಇದರ ಅನುಷ್ಠಾನವನ್ನು 2029ರಿಂದ ಆರಂಭಿಸಲು ಸಂಸತ್ತಿನಲ್ಲಿ ಚರ್ಚೆಗಳು ನಡೆಯುತ್ತಿವೆ.

ಇದೇ ವೇಳೆ, ಲೋಕಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು, ಮೂಲ ಕಾಯ್ದೆಯನ್ನು ಜಾರಿಗೆ ತರದೇ ಇರುವ ಮುನ್ನವೇ 2023ರ ಮಹಿಳಾ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ಮಸೂದೆ ತರಲು ಸರ್ಕಾರ ಕೈಗೊಂಡ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.

ಸಂಸತ್ತಿನ ದಾಖಲೆಗಳನ್ನು ಮಂಡಿಸಿದ ತಕ್ಷಣ, ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ್ ಅವರು ರಾತ್ರಿ ಸುಮಾರು 10 ಗಂಟೆಗೆ ಕಾನೂನು ಸಚಿವಾಲಯ ಹೊರಡಿಸಿದ ಅಧಿಸೂಚನೆಯನ್ನು ಉಲ್ಲೇಖಿಸಿ, ಏಪ್ರಿಲ್ 16ರಿಂದ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು. ಇದು ಮಸೂದೆ ಮಂಡನೆ ಮತ್ತು ಚರ್ಚೆಯ ನಂತರ ನಡೆದದ್ದು ಎಂದರು.

ಡಿಎಂಕೆ ಸಂಸದೆ ಕನಿಮೋಳಿ ಕೂಡ ಈ ವಿಷಯವನ್ನು ಪ್ರಸ್ತಾಪಿಸಿ, ಮೂಲ ಕಾಯ್ದೆಯನ್ನು ಜಾರಿಗೆ ತಂದ ನಂತರ ತಿದ್ದುಪಡಿ ಕುರಿತು ಚರ್ಚಿಸುವ ತರ್ಕವನ್ನು ಪ್ರಶ್ನಿಸಿದರು. ವಿರೋಧ ಪಕ್ಷದ ಸದಸ್ಯರು ಲೋಕಸಭೆಯಲ್ಲಿ ಹಾಜರಿದ್ದ ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಅವರಿಂದ ಸ್ಪಷ್ಟೀಕರಣವನ್ನು ಕೇಳಿದರು.

ಸಂವಿಧಾನ ತಿದ್ದುಪಡಿ ಮಸೂದೆ ಕಾನೂನಾಗಿದ್ದರೂ, ಸರ್ಕಾರ ಅದನ್ನು ಜಾರಿಗೆ ತರದಿದ್ದರಿಂದ ಅದು ಸಂವಿಧಾನದ ಭಾಗವಾಗಿರಲಿಲ್ಲ. ಒಂದು ಕಾಯ್ದೆ ಜಾರಿಗೆ ಬರದೇ ಇದ್ದರೆ, ಅದರ ತಿದ್ದುಪಡಿಯನ್ನು ಹೇಗೆ ಜಾರಿಗೆ ತರಬಹುದು ಎಂಬ ಪ್ರಶ್ನೆ ಎದುರಾಗುತ್ತದೆ. ಅದಕ್ಕಾಗಿ ಏಪ್ರಿಲ್ 16ರಿಂದ ಅದನ್ನು ಜಾರಿಗೆ ತರಲಾಗಿದೆ ಎಂದು ಸದನದ ಅಧಿಕಾರಿ ವಿವರಿಸಿದರು.

ಇನ್ನೊಬ್ಬ ಅಧಿಕಾರಿ ತಾಂತ್ರಿಕ ಕಾರಣಗಳಿಂದ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರೂ ಹೆಚ್ಚಿನ ವಿವರಗಳನ್ನು ನೀಡಲಿಲ್ಲ.

ಕಾಯ್ದೆ ಜಾರಿಗೆ ಬಂದಿದ್ದರೂ, ಪ್ರಸ್ತುತ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿಯನ್ನು ಜಾರಿಗೆ ತರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಮುಂದಿನ ಜನಗಣತಿ ಆಧಾರದ ಮೇಲೆ ಕ್ಷೇತ್ರ ಮರುವಿಂಗಡಣೆ (Delimitation) ಪ್ರಕ್ರಿಯೆ ಪೂರ್ಣಗೊಂಡ ನಂತರ ಮಾತ್ರ ಮಹಿಳಾ ಮೀಸಲಾತಿಯನ್ನು ಜಾರಿಗೆ ತರಬಹುದು ಎಂದು ಹೇಳಿದರು.

ಸಂವಿಧಾನ (106ನೇ ತಿದ್ದುಪಡಿ) ಕಾಯಿದೆ, 2023ರ ವಿಧಿ 1ರ ಉಪವಿಧಿ (2) ಅಡಿಯಲ್ಲಿ ನೀಡಲಾದ ಅಧಿಕಾರಗಳನ್ನು ಬಳಸಿಕೊಂಡು, ಕೇಂದ್ರ ಸರ್ಕಾರವು ಏಪ್ರಿಲ್ 16ರಂದು ಈ ಕಾಯ್ದೆಯ ವಿಧಿಗಳು ಜಾರಿಗೆ ಬರುತ್ತವೆ ಎಂದು ಘೋಷಿಸುತ್ತದೆ.

2023ರ ಸೆಪ್ಟೆಂಬರ್‌ನಲ್ಲಿ ಸಂಸತ್ತು ‘ನಾರಿ ಶಕ್ತಿ ವಂದನ ಅಧಿನಿಯಮ’ವನ್ನು ಅಂಗೀಕರಿಸಿತ್ತು, ಇದು ಮಹಿಳೆಯರ ಪ್ರತಿನಿಧಿತ್ವವನ್ನು ಹೆಚ್ಚಿಸಲು ಮಹತ್ವದ ಹೆಜ್ಜೆಯಾಗಿದೆ. ಈ ಕಾಯ್ದೆಯಡಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದ ಸ್ಥಾನಗಳನ್ನು ಮೀಸಲಿಡಲಾಗಿದೆ. 2027ರ ಜನಗಣತಿಯ ನಂತರ ನಡೆಯುವ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಗೆ ಇದು ಸಂಬಂಧಿಸಿದ ಕಾರಣ, 2034ಕ್ಕೂ ಮೊದಲು ಈ ಮೀಸಲಾತಿ ಜಾರಿಗೆ ಬರುವುದಿಲ್ಲ ಎಂದು ತಿಳಿಸಲಾಗಿದೆ.

ಪ್ರಸ್ತುತ ಲೋಕಸಭೆಯಲ್ಲಿ ಚರ್ಚೆಯಾಗುತ್ತಿರುವ ಮೂರು ಮಸೂದೆಗಳು — ಸಂವಿಧಾನ (131ನೇ ತಿದ್ದುಪಡಿ) ಮಸೂದೆ, 2026, ಕ್ಷೇತ್ರ ಮರುವಿಂಗಡಣೆ ಮಸೂದೆ, 2026 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನು (ತಿದ್ದುಪಡಿ) ಮಸೂದೆ, 2026 — ಮಹಿಳಾ ಮೀಸಲಾತಿಯನ್ನು 2029ರಿಂದ ಜಾರಿಗೆ ತರಲು ಸರ್ಕಾರವು ಮುಂದಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Parliament special session: ಅಗ್ನಿ ಪರೀಕ್ಷೆಯಲ್ಲಿ ಮೋದಿ ಸರ್ಕಾರ, ಇಂದು ಪಾಸ್ ಆಗುತ್ತಾ ಪ್ರಮುಖ ಮಸೂದೆಗಳು?

'ಇರಾನ್ ತನ್ನ ಸಮೃದ್ಧ ಯುರೇನಿಯಂ ಸಂಗ್ರಹವನ್ನು ಹಸ್ತಾಂತರಿಸಲು ಒಪ್ಪಿಕೊಂಡಿದೆ, ಶಾಂತಿ ಒಪ್ಪಂದ ಹತ್ತಿರದಲ್ಲಿದೆ': Donald Trump

ಇನ್ಮುಂದೆ ನೇಚರ್ ಗೈಡ್, GPS ವಾಕಿಟಾಕಿ ಇಲ್ಲದೆ ಯಾರಿಗೂ ಚಾರಣಕ್ಕೆ ಅವಕಾಶವಿಲ್ಲ: SOP ಬಿಡುಗಡೆ ಮಾಡಿದ ಸಚಿವ ಈಶ್ವರ ಖಂಡ್ರೆ!

ವಿಜ್ಞಾನ-ತಂತ್ರಜ್ಞಾನ ಕ್ಷೇತ್ರ: ಮಹಿಳೆಯರದ್ದು ಪ್ರಧಾನ ಪಾತ್ರ; ಕೇವಲ ಪಾಲ್ಗೊಳ್ಳುವುದಲ್ಲ, ನಾಯಕತ್ವಕ್ಕೂ ಬೇಕು ನಾರಿ ಶಕ್ತಿ

ಕರ್ನಾಟಕ ಲೋಕಾಯುಕ್ತದ ನಾಲ್ಕು ದಶಕಗಳ ಸಾರ್ಥಕ ಪಯಣ: ಏಪ್ರಿಲ್ 18 ರಂದು ವಿಶೇಷ ಕಾರ್ಯಕ್ರಮ!

SCROLL FOR NEXT