ಲವ್ ಟ್ರ್ಯಾಪ್ ಪ್ರಕರಣದ ಆರೋಪಿ ಮಹಮದ್ ಅಯಾಜ್ 
ದೇಶ

ಮಹಾರಾಷ್ಟ್ರ 'Love Trap' ಕೇಸ್: 180 ಯುವತಿಯರು, 350 ವಿಡಿಯೋಗಳು.. ಬ್ರೇಕಪ್ ಬಳಿಕ 'Playboy' ಆಗಿ ಬದಲಾಗಿದ್ದ ಆರೋಪಿ Mohammad Ayaz

180 ಅಪ್ರಾಪ್ತ ಯುವತಿಯರ ಪ್ರೀತಿಸುವ ನೆಪದಲ್ಲಿ ಲೈಂಗಿಕ ದೌರ್ಜನ್ಯ ಎಸಗಿ ಖಾಸಗಿ ಕ್ಷಣಗಳ ವಿಡಿಯೋ ಮಾಡಿಕೊಂಡಿದ್ದ ಆರೋಪದ ಮೇರೆಗೆ ಬಂಧನಕ್ಕೀಡಾಗಿರುವ ಮೊಹಮ್ಮದ್ ಅಯಾಜ್ ತನ್ನ ಪ್ರೇಯಸಿ ಜೊತೆಗಿನ ಬ್ರೇಕಪ್ ಬಳಿಕ ಪ್ಲೇಬಾಯ್ ಆಗಿ ಬದಲಾಗಿದ್ದ.

ಮುಂಬೈ: ಮಹಾರಾಷ್ಟ್ರದಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿರುವ 'Love Trap' ಕೇಸ್ ಗೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಪ್ರಮುಖ ಆರೋಪಿ ಮೊಹಮ್ಮದ್ ಅಯಾಜ್ ತನ್ನ ಪ್ರೇಯಸಿ ಜೊತೆಗಿನ ಬ್ರೇಕಪ್ ಬಳಿಕ ಪ್ಲೇಬಾಯ್ ಆಗಿ ಬದಲಾಗಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ 180 ಅಪ್ರಾಪ್ತ ಯುವತಿಯರ ಪ್ರೀತಿಸುವ ನೆಪದಲ್ಲಿ ಲೈಂಗಿಕ ದೌರ್ಜನ್ಯ ಎಸಗಿ ಖಾಸಗಿ ಕ್ಷಣಗಳ ವಿಡಿಯೋ ಮಾಡಿಕೊಂಡಿದ್ದ ಆರೋಪದ ಮೇರೆಗೆ ಬಂಧನಕ್ಕೀಡಾಗಿರುವ ಮೊಹಮ್ಮದ್ ಅಯಾಜ್ ತನ್ನ ಪ್ರೇಯಸಿ ಜೊತೆಗಿನ ಬ್ರೇಕಪ್ ಬಳಿಕ ಪ್ಲೇಬಾಯ್ ಆಗಿ ಬದಲಾಗಿದ್ದ ಎನ್ನಲಾಗಿದೆ.

ಪರತ್ವಾಡ ನಗರದ ನಿವಾಸಿ ಮೊಹಮ್ಮದ್ ಅಯಾಜ್ ಸಿಕ್ಕ ಸಿಕ್ಕ ಹುಡುಗಿಯರೊಂದಿಗೆ ಸ್ನೇಹ ಮಾಡಿ ಅವರನ್ನು ಪ್ರೀತಿ ಹೆಸರಲ್ಲಿ ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಕನಿಷ್ಠ 180 ಅಪ್ರಾಪ್ತೆರನ್ನು ಗುರಿಯಾಗಿಸಿಕೊಂಡು 350 ಕ್ಕೂ ಹೆಚ್ಚು ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿದ್ದಾನೆ. ಈ ಪೈಕಿ ಕೆಲ ವೀಡಿಯೊಗಳನ್ನು ಆನ್‌ಲೈನ್‌ನಲ್ಲಿಯೂ ಹಂಚಿಕೊಳ್ಳಲಾಗಿದೆ ಎಂದು ಪೊಲೀಸರು ಆರೋಪಿಸಿದ್ದಾರೆ.

ವೇಶ್ಯಾವಾಟಿಕೆಗೆ ತಳ್ಳಲು ಯತ್ನ

ಇನ್ನೂ ಆಘಾತಕಾರಿ ಎಂದರೆ ವಾಟ್ಸಾಪ್ ಮತ್ತು ಸ್ನ್ಯಾಪ್‌ಚಾಟ್ ಗುಂಪುಗಳ ಮೂಲಕ ಹುಡುಗಿಯರನ್ನು ಸಂಪರ್ಕಿಸಿ ಅವರನ್ನು ತನ್ನ ದಾರಿಗೆಳೆಯುತ್ತಿದ್ದ. ಅವರಲ್ಲಿ ಕೆಲವರನ್ನು ಮುಂಬೈ ಮತ್ತು ಪುಣೆಗೆ ಕರೆದೊಯ್ದು, ವೀಡಿಯೊಗಳನ್ನು ರೆಕಾರ್ಡ್ ಮಾಡಿ ಮತ್ತು ಹುಡುಗಿಯರನ್ನು ಬ್ಲ್ಯಾಕ್‌ಮೇಲ್ ಮಾಡಲು ಮತ್ತು ವೇಶ್ಯಾವಾಟಿಕೆಗೆ ತಳ್ಳಲು ಯತ್ನಿಸುತ್ತಿದ್ದ ಎಂದು ಆರೋಪಿಸಲಾಗಿದೆ.

ಪೊಲೀಸರಿಗೆ ಸ್ಫೋಟಕ ಮಾಹಿತಿ

ಇನ್ನು ಪೊಲೀಸ್ ವಿಚಾರಣೆ ವೇಳೆ ಆರೋಪಿ ಅಯಾಜ್ ಸಾಕಷ್ಟು ಸ್ಫೋಟಕ ಮಾಹಿತಿಗಳನ್ನು ಹಂಚಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ತನಗೆ ಸುಮಾರು 18,000 ಅನುಯಾಯಿಗಳಿದ್ದಾರೆ ಮತ್ತು ನಿರ್ದಿಷ್ಟ ಚಿತ್ರವನ್ನು ಪ್ರದರ್ಶಿಸುವಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದೇನೆ ಎಂದು ಅಯಾಜ್ ಪೊಲೀಸರಿಗೆ ತಿಳಿಸಿದ್ದಾನೆ ಎನ್ನಲಾಗಿದೆ.

ಹುಡುಗಿಯರ ಪಟಾಯಿಸಲು ಸ್ನೇಹಿತರ ಸಹೋದರಿಯರ ಬಳಕೆ

ಅಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಪ್ರಾಬಲ್ಯ ತೋರಿಸಲು ಮತ್ತು ಆನ್‌ಲೈನ್ ವ್ಯಕ್ತಿತ್ವವನ್ನು ನಿರ್ಮಿಸಲು ಹುಡುಗಿಯರೊಂದಿಗಿನ ಖಾಸಗಿ ಕ್ಷಣಗಳ ಸೆಲ್ಫಿಗಳನ್ನು ಪೋಸ್ಟ್ ಮಾಡುತ್ತಿದ್ದ ಎನ್ನಲಾಗಿದೆ. ಹುಡುಗಿಯರನ್ನು ಪಟಾಯಿಸಲು ಆತ ತನ್ನ ಸ್ವೇಹಿತ ಸಹೋದರಿಯರನ್ನು ಬಳಕೆ ಮಾಡಿಕೊಳ್ಳುತ್ತಿದ್ದು, ಇದಕ್ಕಾಗಿ ಅವರಿಗೆ ಪ್ರತೀಬಾರಿ ತಲಾ 500 ರೂ ನೀಡುತ್ತಿದ್ದೆ ಎಂದು ಹೇಳಿದ್ದಾನೆ.

ಸ್ನೇಹಿತನೊಂದಿಗೆ ಜಗಳದಿಂದ ಪ್ರಕರಣ ಬೆಳಕಿಗೆ

ಇನ್ನು ಅಯಾಜ್ ಮತ್ತು ಆತನ ಬಾಲ್ಯದ ಗೆಳೆಯ ಉಜರ್ ಖಾನ್ ನಡುವಿನ ಜಗಳದಿಂದಾಗಿ ಆತನ ಕುಕೃತ್ಯ ಬಟಾಬಯಲಾಗಿದೆ. ಆಯಾಜ್ ನ ಖಾಸಗಿ ಕ್ಷಣಗಳನ್ನು ಹೊಂದಿದ್ದ ಸ್ನೇಹಿತನೇ ಜಗಳದ ಬಳಿಕ ಆ ವಿಡಿಯೋಗಳನ್ನು ಬಯಲು ಮಾಡಿದ್ದಾನೆ.

ಅಯಾಜ್ ಮತ್ತು ಆತನ ಸ್ನೇಹಿತ ಉಜರ್ ಖಾನ್ ಯಾರು ಎಷ್ಟು ಮಂದಿ ಹುಡುಗಿಯರನ್ನು ಪಟಾಯಿಸುತ್ತೇವೆ ಎಂದು ಬೆಟ್ಟಿಂಗ್ ಕಟ್ಟಿದ್ದರಂತೆ. ಇದರಲ್ಲಿ ಅಯಾಜ್ ಗೆದ್ದಾಗ ಆಕ್ರೋಶಗೊಂಡಿದ್ದ ಉಜರ್ ಖಾನ್ ವಿಡಿಯೋಗಳನ್ನು ಲೀಕ್ ಮಾಡಿದ್ದ.

ಅಯಾಜ್ ತನ್ನ ಫೋನ್ ಅನ್ನು ಅಂಗಡಿಯಲ್ಲಿ ಬಿಟ್ಟಿದ್ದಾಗ ಅದರಲ್ಲಿದ್ದ ವಿಡಿಯೋಗಳನ್ನು ಉಜರ್ ಆನ್ಲೈನ್ ನಲ್ಲಿ ಅಪ್ಲೋಡ್ ಮಾಡಿದ್ದ ಎನ್ನಲಾಗಿದೆ. ಅದು ನಂತರ ವ್ಯಾಪಕವಾಗಿ ವೈರಲ್ ಆಗಿತ್ತು.

ಇನ್ನೂ ಸಾಕಷ್ಟು ಪ್ರಕರಣಗಳಲ್ಲಿ ಇದೇ ಉಜರ್ ಅಯಾಜ್ ಮತ್ತು ಆತನ ಪ್ರೇಯಸಿಯರ ಖಾಸಗಿ ಕ್ಷಣಗಳನ್ನು ವಿಡಿಯೋ ರೆಕಾರ್ಡ್ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ವಿಡಿಯೋ ಬೆಳಕಿಗೆ ಬಂದ ಬಳಿಕ ಅಯಾಜ್ ತನಗೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ಬಾಲ್ಯದ ಗೆಳೆಯ ಉಜರ್ ಖಾನ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಸ್ನೇಹಿತ ಉಜರ್ ಆತನ ಹೇಳಿಕೆಗಳ ಆಧಾರದ ಮೇಲೆ, ಅಮರಾವತಿ ಗ್ರಾಮೀಣ ಪೊಲೀಸರು ಹಲವು ಸ್ಥಳಗಳನ್ನು ಪರಿಶೀಲಿಸಿದ್ದಾರೆ. ಇವುಗಳಲ್ಲಿ ಕಥೋರಾ ನಾಕಾದಲ್ಲಿರುವ ಫ್ಲಾಟ್, ಹಲವಾರು ಕೆಫೆಗಳು ಮತ್ತು ವಝರ್ ಅಣೆಕಟ್ಟಿನ ಬಳಿಯ ಉದ್ಯಾನ ಸೇರಿವೆ. ಮಂಗಳವಾರ ಅಯಾಜ್ ಮತ್ತು ಉಜರ್ ಖಾನ್ ಇಬ್ಬರನ್ನೂ ಬಂಧಿಸಲಾಗಿತ್ತು. ಮರುದಿನ, ಅಧಿಕಾರಿಗಳು ಪರತ್ವಾಡದಲ್ಲಿರುವ ಅಯಾಜ್ ಅವರ ಕುಟುಂಬದ ಮನೆಯ ಅಕ್ರಮ ಭಾಗಗಳನ್ನು ಕೆಡವಿ ಹಾಕಲಾಗಿದೆ.

ಪೊಲೀಸರ ಜೊತೆಯೂ ನಂಟು

ಸಂಬಂಧಿತ ಬೆಳವಣಿಗೆಯಲ್ಲಿ, ಅಯಾಜ್ ಅವರ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ವೀಡಿಯೊಗಳನ್ನು ತೋರಿಸಿದ ನಂತರ ಒಬ್ಬ ಪೊಲೀಸ್ ಅಧಿಕಾರಿ ಮತ್ತು ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ಅಮಾನತುಗೊಳಿಸಲಾಗಿದೆ.

ಕೆಲವು ಪೊಲೀಸ್ ಸಿಬ್ಬಂದಿ ಅಯಾಜ್ ಅವರೊಂದಿಗೆ ಸಂಪರ್ಕದಲ್ಲಿದ್ದರು. ಒಂದು ವೀಡಿಯೊದಲ್ಲಿ, ಪೊಲೀಸ್ ಅಧಿಕಾರಿಗಳು ಜನ್ಮದಿನ ಆಚರಣೆಯಲ್ಲಿ ಭಾಗವಹಿಸುತ್ತಿದ್ದಾಗ ಅಯಾಜ್ ಸಾರ್ವಜನಿಕ ರಸ್ತೆಯಲ್ಲಿ ಕೇಕ್ ಕತ್ತರಿಸುತ್ತಿರುವುದು ಕಂಡುಬಂದಿದೆ. ಈ ಸಂಬಂಧ ಪೊಲೀಸ್ ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿದೆ. ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಭಾರಿ ಸ್ಫೋಟ: 18 ಸಾವು, ಹಲವರಿಗೆ ಗಾಯ; ಸಿಎಂ ಸ್ಟಾಲಿನ್ ಸಂತಾಪ!

ಹಾರ್ಮುಜ್ ಇನ್ನೂ ಮುಚ್ಚಿದೆ, ಆತ ಓರ್ವ 'ಮೂರ್ಖ' ಇರಾನ್ ರಾಯಭಾರ ಕಚೇರಿಯಿಂದ ಟ್ರಂಪ್ ಅಪಹಾಸ್ಯಕ್ಕೀಡು

ಮೈಸೂರು: ದರ್ಗಾಗೆ ಬಂದಿದ್ದಾಗ ದುರ್ಘಟನೆ; ಕಾವೇರಿ ನದಿಯಲ್ಲಿ ಮುಳುಗಿ 6 ಮಂದಿ ದುರ್ಮರಣ

ನಡು ರಸ್ತೆಯಲ್ಲೇ ಗರ್ಭಿಣಿ ಮಹಿಳೆಗೆ ಲೈಂಗಿಕ ಕಿರುಕುಳ: ಕೊನೆಗೂ ಆರೋಪಿ ಬಂಧನ, Police treatment ಗೆ ಸುಸ್ತು! video

ನೋಯ್ಡಾ ಹಿಂಸಾಚಾರ: ತಮಿಳುನಾಡಿನಲ್ಲಿ ಮಾಸ್ಟರ್ ಮೈಂಡ್ ಆದಿತ್ಯ ಆನಂದ್ ಬಂಧನ!

SCROLL FOR NEXT