ನರೇಂದ್ರ ಮೋದಿ- ರೇವಂತ್ ರೆಡ್ಡಿ online desk
ದೇಶ

ಮೋದಿ ರಾಮಾಯಣದಲ್ಲಿ ಸೀತಾಮಾತೆಯನ್ನು ಅಪಹರಿಸಲು ಬಂದಿದ್ದ ಮಾರೀಚನಿದ್ದಂತೆ; ರೇವಂತ್ ರೆಡ್ಡಿ ವಿವಾದ!

“ಮಾರೀಚನು ಸೀತಾ ಮಾತೆಯ ಅಪಹರಣಕ್ಕಾಗಿ ಬಂದಿದ್ದ. ಅದೇ ರೀತಿ ಮೋದಿ ಜಿ ಮತ್ತು ಸಂಪೂರ್ಣ ಬಿಜೆಪಿ–ಎನ್‌ಡಿಎ ಸಂವಿಧಾನವನ್ನೇ ಕಸಿದುಕೊಳ್ಳಲು ಯತ್ನಿಸುತ್ತಿವೆ ಎಂದು ರೆಡ್ಡಿ ಆರೋಪಿಸಿದ್ದಾರೆ.

ತೆಲಂಗಾಣ: ಭಾರತೀಯ ಜನತಾ ಪಕ್ಷ ಭಾನುವಾರ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ರಾಮಾಯಣದ ರಾಕ್ಷಸ ಮಾರೀಚನಿಗೆ ಹೋಲಿಕೆ ಮಾಡಿರುವುದನ್ನು ಬಿಜೆಪಿ ಖಂಡಿಸಿ, ಈ ಮೂಲಕ ಅವರು ಸಂವಿಧಾನಿಕ ಹುದ್ದೆಯನ್ನು ‘ಅವಮಾನ’ ಮಾಡಿದ್ದಾರೆ ಮತ್ತು ದ್ವೇಷವೇ ಕಾಂಗ್ರೆಸ್ ಪಕ್ಷದ ಗುರುತಾಗಿಬಿಟ್ಟಿದೆ ಎಂದು ಆರೋಪಿಸಿದೆ.

ಎಕ್ಸ್‌ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಲ್ಲಾ, ಕಾಂಗ್ರೆಸ್‌ನೊಳಗಿನ ಒಂದು ಮೂಲ ತಿಳಿಸಿದಂತೆ, ವಿರೋಧ ಪಕ್ಷದ ಎಲ್ಲಾ ನಾಯಕರಿಗೂ, ಪಕ್ಷದ ಅಧ್ಯಕ್ಷರಿಗಿಂತಲೂ “ಮೇಲಿರುವ” ಹೈಕಮಾಂಡ್‌ನಿಂದ ಮೋದಿಯನ್ನು ಗುರಿಯಾಗಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಶನಿವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೇವಂತ್ ರೆಡ್ಡಿ, ಮಹಿಳಾ ಮೀಸಲಾತಿಗೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸುವುದಕ್ಕಾಗಿ ಮೋದಿ ಸರ್ಕಾರ ಒತ್ತಡ ಹೇರುತ್ತಿದ್ದು, 2029ರ ಲೋಕಸಭಾ ಚುನಾವಣೆಯಲ್ಲಿ ತನ್ನ ರಾಜಕೀಯ ಬಲವನ್ನು ಹೆಚ್ಚಿಸಿಕೊಳ್ಳುವ ಉದ್ದೇಶ ಹೊಂದಿದೆ ಎಂದು ಆರೋಪಿಸಿದರು.

“ಮಾರೀಚನು ಸೀತಾ ಮಾತೆಯ ಅಪಹರಣಕ್ಕಾಗಿ ಬಂದಿದ್ದ. ಅದೇ ರೀತಿ ಮೋದಿ ಜಿ ಮತ್ತು ಸಂಪೂರ್ಣ ಬಿಜೆಪಿ–ಎನ್‌ಡಿಎ ಸಂವಿಧಾನವನ್ನೇ ಕಸಿದುಕೊಳ್ಳಲು ಯತ್ನಿಸುತ್ತಿವೆ. ಆದರೆ ನಾವು ಅಂತಹ ಯಾವುದೇ ಪ್ರಯತ್ನ ಯಶಸ್ವಿಯಾಗಲು ಬಿಡುವುದಿಲ್ಲ,” ಎಂದು ಅವರು ಹೇಳಿದರು.

ರೆಡ್ಡಿ ದ್ವೇಷದ ರಾಜಕೀಯವನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದ ಪೂನಾವಾಲಾ, ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನಕಾರಿ ಭಾಷೆ ಬಳಸಿ, ರೇವಂತ್ ರೆಡ್ಡಿ ಪ್ರಧಾನಿಯ ಸಂವಿಧಾನಿಕ ಹುದ್ದೆಗೆ ಅವಮಾನ ಮಾಡಿದ್ದಾರೆ ಎಂದು ವಿಡಿಯೋ ಸಂದೇಶದಲ್ಲಿ ಹೇಳಿದರು.

“ರೇವಂತ್ ರೆಡ್ಡಿ ಅವರು ಪ್ರಧಾನಿಯನ್ನು ರಾಕ್ಷಸನಿಗೆ ಹೋಲಿಸಿದ್ದಾರೆ... ಕಾಂಗ್ರೆಸ್ ಪಕ್ಷವು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಗ್ಗೆ 150 ಕ್ಕೂ ಹೆಚ್ಚು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದೆ. ‘ನಾರಿ ಶಕ್ತಿ’ಗೆ ಉತ್ತೇಜನ ನೀಡಿದ ಕಾರಣಕ್ಕೂ ಅವರು ಮತ್ತೆ ಅವರನ್ನು ನಿಂದಿಸುತ್ತಿದ್ದಾರೆ. ಇದು ಅಪರೂಪದ ಘಟನೆ ಅಲ್ಲ, ಪೂರ್ವನಿಯೋಜಿತ ರಾಜಕೀಯ ಪ್ರಯೋಗ,” ಎಂದು ಪೂನಾವಾಲಾ ಆರೋಪಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಾರ್ಮುಜ್ ಇನ್ನೂ ಮುಚ್ಚಿದೆ, ಆತ ಓರ್ವ 'ಮೂರ್ಖ' ಇರಾನ್ ರಾಯಭಾರ ಕಚೇರಿಯಿಂದ ಟ್ರಂಪ್ ಅಪಹಾಸ್ಯಕ್ಕೀಡು

ಮೈಸೂರು: ದರ್ಗಾಗೆ ಬಂದಿದ್ದಾಗ ದುರ್ಘಟನೆ; ಕಾವೇರಿ ನದಿಯಲ್ಲಿ ಮುಳುಗಿ 6 ಮಂದಿ ದುರ್ಮರಣ

ನಡು ರಸ್ತೆಯಲ್ಲೇ ಗರ್ಭಿಣಿ ಮಹಿಳೆಗೆ ಲೈಂಗಿಕ ಕಿರುಕುಳ: ಕೊನೆಗೂ ಆರೋಪಿ ಬಂಧನ, Police treatment ಗೆ ಸುಸ್ತು! video

ನೋಯ್ಡಾ ಹಿಂಸಾಚಾರ: ತಮಿಳುನಾಡಿನಲ್ಲಿ ಮಾಸ್ಟರ್ ಮೈಂಡ್ ಆದಿತ್ಯ ಆನಂದ್ ಬಂಧನ!

ಸಿಎಂ ಸಿದ್ದರಾಮಯ್ಯ ಆಪ್ತ ಸೈಫುಲ್ಲಾ ಸಾಬ್ ನಿಧನ

SCROLL FOR NEXT