ಚೆನ್ನೈ: ಇರಾನ್‌ನಲ್ಲಿ ಯುದ್ಧ ಪ್ರಾರಂಭವಾಗುವ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದನ್ನು ಪಾಲಿಸುವ ಸಲುವಾಗಿ ಇಸ್ರೇಲ್‌ಗೆ ಭೇಟಿ ನೀಡಿದ್ದರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ.
ಬಿಜೆಪಿಯನ್ನು ಗುರಿಯಾಗಿಸಿಕೊಂಡು ತಮಿಳುನಾಡಿನಲ್ಲಿ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, "ಟ್ರಂಪ್ ಹೇಳಿದಂತೆ ಪ್ರಧಾನಿ ಮೋದಿ ನಡೆಯುತ್ತಾರೆ" ಎಂಬ ತಮ್ಮ ಆರೋಪವನ್ನು ಪುನರುಚ್ಚರಿಸಿದರು.
ಇದಲ್ಲದೆ, ಇರಾನ್‌ನಲ್ಲಿ ಯುದ್ಧದ ಮೊದಲು, ಇದ್ದಕ್ಕಿದ್ದಂತೆ ಮೋದಿಗೆ ಇಸ್ರೇಲ್‌ಗೆ ಭೇಟಿ ನೀಡಲು ಹೇಳಲಾಯಿತು, ಮತ್ತು ಅವರು ವಿಮಾನ ಹತ್ತಿ, ಅಲ್ಲಿಗೆ ಹೋಗಿ ಹಿಂತಿರುಗಿದರು ಎಂದು ರಾಹುಲ್ ಗಾಂಧಿ ಆರೋಪಿಸಿದರು.
ಮೋದಿ ಟ್ರಂಪ್ ಹೇಳುವುದನ್ನೆಲ್ಲಾ ಕೇಳುತ್ತಿರುವ ನಡವಳಿಕೆಗೆ ಕಾರಣ ಸರಳವಾಗಿದ್ದು ಅದಕ್ಕೆ ಇರುವ ಕಾರಣವೆಂದರೆ ಅದು "ಎಪ್ಸ್ಟೀನ್ ಫೈಲ್ಸ್ ಮತ್ತು ಅದಾನಿ" ಎಂದು ಅವರು ಆರೋಪಿಸಿದ್ದಾರೆ.