ಸ್ವಾತಿ ಮಲಿವಾಲ್  
ದೇಶ

ಕೇಜ್ರಿವಾಲ್ ಎಎಪಿಯ ತತ್ವಗಳಿಂದ ದೂರ ಸರಿದಿದ್ದಾರೆ: ಪಕ್ಷ ತೊರೆದ ಸ್ವಾತಿ ಮಲಿವಾಲ್

"ಇಂದು ಬಹಳ ದುಃಖದಿಂದ, ನಾವು ಪ್ರಾರಂಭಿಸಿದ ಪ್ರಾಮಾಣಿಕ ರಾಜಕೀಯಕ್ಕಾಗಿ ತತ್ವಗಳು, ಮೌಲ್ಯಗಳು ಮತ್ತು ಸಂಕಲ್ಪವನ್ನು ಅರವಿಂದ್ ಕೇಜ್ರಿವಾಲ್ ಜಿ ಮತ್ತು ಅವರ ಆಜ್ಞೆಯ ಮೇರೆಗೆ ಇಡೀ ಆಮ್ ಆದ್ಮಿ ಪಕ್ಷ ಕೈಬಿಟ್ಟಿದೆ ಎಂದು ಹೇಳುತ್ತಿದ್ದೇನೆ"

ನವದೆಹಲಿ: ಆಮ್ ಆದ್ಮಿ ಪಕ್ಷವನ್ನು ತೊರೆಯುವ ನಿರ್ಧಾರ ಪ್ರಕಟಿಸಿದ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಅವರು, ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷವು ತನ್ನ ಸ್ಥಾಪಕ ತತ್ವಗಳಿಂದ ದೂರ ಸರಿದಿದೆ ಮತ್ತು ದುಷ್ಕೃತ್ಯದಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ರಕ್ಷಿಸಿದೆ ಎಂದು ಶುಕ್ರವಾರ ಆರೋಪಿಸಿದ್ದಾರೆ.

ಈ ಕುರಿತು ಎಕ್ಸ್ (ಹಿಂದೆ ಟ್ವಿಟರ್)ನಲ್ಲಿ ಪೋಸ್ಟ್ ಮಾಡಿದ ಮಲಿವಾಲ್, 2006 ರಲ್ಲಿ ದೇಶ ಸೇವೆ ಮತ್ತು ಸಾರ್ವಜನಿಕ ಸೇವೆಯ ಮಾರ್ಗವನ್ನು ಆರಿಸಿಕೊಂಡೆ ಎಂದು ಹೇಳಿದ್ದಾರೆ.

"ಆರ್‌ಟಿಐ ಹೋರಾಟ ಮತ್ತು ಅಣ್ಣಾ ಹಜಾರೆ ಅವರ ಚಳುವಳಿಯಿಂದ ಆಮ್ ಆದ್ಮಿ ಪಕ್ಷದ ರಚನೆ, ದೆಹಲಿ ಮಹಿಳಾ ಆಯೋಗದಲ್ಲಿ ನನ್ನ ಎಂಟು ವರ್ಷಗಳ ಸಮರ್ಪಿತ ಸೇವೆಯವರೆಗೆ, ನಾನು ಪ್ರತಿ ಹಂತದಲ್ಲೂ ಸಂಪೂರ್ಣ ಪ್ರಾಮಾಣಿಕವಾಗಿ ಮತ್ತು ಭಕ್ತಿಯಿಂದ ಕೆಲಸ ಮಾಡಿದ್ದೇನೆ" ಎಂದು ಮಲಿವಾಲ್ ತಿಳಿಸಿದ್ದಾರೆ.

"ಇಂದು ಬಹಳ ದುಃಖದಿಂದ, ನಾವು ಪ್ರಾರಂಭಿಸಿದ ಪ್ರಾಮಾಣಿಕ ರಾಜಕೀಯಕ್ಕಾಗಿ ತತ್ವಗಳು, ಮೌಲ್ಯಗಳು ಮತ್ತು ಸಂಕಲ್ಪವನ್ನು ಅರವಿಂದ್ ಕೇಜ್ರಿವಾಲ್ ಜಿ ಮತ್ತು ಅವರ ಆಜ್ಞೆಯ ಮೇರೆಗೆ ಇಡೀ ಆಮ್ ಆದ್ಮಿ ಪಕ್ಷ ಕೈಬಿಟ್ಟಿದೆ ಎಂದು ಹೇಳುತ್ತಿದ್ದೇನೆ" ಎಂದು ಅವರು ಪೋಸ್ಟ್ ಮಾಡಿದ್ದಾರೆ.

ಕೇಜ್ರಿವಾಲ್ ಅವರ ಅಧಿಕೃತ ನಿವಾಸದಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಂಡ ಮಲಿವಾಲ್, ಕೇಜ್ರಿವಾಲ್ ಅವರ ಸೂಚನೆಯ ಮೇರೆಗೆ ತನ್ನ ಮೇಲೆ "ತೀವ್ರ ದೈಹಿಕ ಹಲ್ಲೆ ಹಾಗೂ ಘೋರ ದುಷ್ಕೃತ್ಯ" ನಡೆಯಿತು ಮತ್ತು ಆರೋಪಿಗಳನ್ನು ರಕ್ಷಿಸುವ ಪ್ರಯತ್ನಗಳು ನಡೆದಿವೆ ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಕ್ಕಿಂನಲ್ಲಿ ವರುಣನ ಆರ್ಭಟ: Rimbi ಗ್ರಾಮದಲ್ಲಿ ಭೀಕರ ಭೂಕುಸಿತ; ಹಲವು ಮನೆಗಳು, ಸರ್ಕಾರಿ ವಸತಿ ಗೃಹಗಳು ಧ್ವಂಸ..!

Delhi SIR: ಕ್ಷೇತ್ರ ಪರಿಶೀಲನೆ ಬಳಿಕ ಎಲ್.ಕೆ. ಅಡ್ವಾಣಿ, ಜಗದೀಪ್ ಧನಕರ್, ಜೈಶಂಕರ್ ಸೇರಿ ಹಲವು ಗಣ್ಯರ Voter ID ಗೊಂದಲಕ್ಕೆ ತೆರೆ!

ಸಂಘರ್ಷ ಅಂತ್ಯಕ್ಕೆ ಇರಾನ್ 7 ದಿನಗಳ ಯೋಜನೆ ಪ್ರಸ್ತಾಪ: ಹಾರ್ಮುಜ್ ಜಲಸಂಧಿ ಮತ್ತೆ ಮುಕ್ತ

ವಿಶ್ವಸಂಸ್ಥೆಯಲ್ಲಿ Pak ಪ್ರಧಾನಿಗೆ ಮುಖಭಂಗ: ಭಯೋತ್ಪಾದನೆ ಕುರಿತ ಪ್ರಶ್ನೆ ಎದುರಿಸಲಾಗದೆ ತಲೆತಗ್ಗಿಸಿ ನಡೆದ ಶೆಹಬಾಜ್ ಷರೀಫ್..! Video

ವಿಶ್ವಸಂಸ್ಥೆಯಲ್ಲಿ ನೆತನ್ಯಾಹುಗೆ ಬಿಗ್ ಶಾಕ್: ಭಾಷಣ ಬಹಿಷ್ಕರಿಸಿ ಹೊರನಡೆದ ಹತ್ತಾರು ದೇಶಗಳ ಪ್ರತಿನಿಧಿಗಳು,"ನೈತಿಕ ಹೇಡಿಗಳು" ಎಂದು ಕರೆದ ಇಸ್ರೇಲ್ ಪ್ರಧಾನಿ..!