ರಾಘವ್ ಚಡ್ಡಾ 
ದೇಶ

'ಬಿಜೆಪಿ ಭಯದಿಂದ AAP ಬಿಟ್ಟಿಲ್ಲ, ಅಸಹ್ಯದಿಂದ ಹೊರ ಬಂದ್ದಿದ್ದೇನೆ': ರಾಘವ್ ಚಡ್ಡಾ

ಆಮ್ ಆದ್ಮಿ ಪಕ್ಷವು ಈಗ ತಪ್ಪು ಹಾದಿಯಲ್ಲಿ ನಡೆಯುತ್ತಿದೆ. ಪರಿಣಾಮವಾಗಿ, ಒಬ್ಬೊಬ್ಬರಾಗಿ, ಅನೇಕ ನಾಯಕರು ಆಮ್ ಆದ್ಮಿ ಪಕ್ಷವನ್ನು ತೊರೆಯುತ್ತಿದ್ದಾರೆ" ಎಂದು ಚಡ್ಡಾ ಆರೋಪಿಸಿದ್ದಾರೆ.

ನವದೆಹಲಿ: ಆಮ್ ಆದ್ಮಿ ಪಕ್ಷದಿಂದ ಹೊರಬಂದ ಒಂದು ದಿನದ ನಂತರ, ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಅವರು, ಆಪ್ ತನ್ನ ಮೂಲ ತತ್ವಗಳಿಂದ ವಿಮುಖವಾಗಿದೆ ಮತ್ತು ಪ್ರಾಮಾಣಿಕ ಕಾರ್ಯಕರ್ತರಿಗೆ ಇನ್ನು ಮುಂದೆ ಅಲ್ಲಿ ಜಾಗ ಇಲ್ಲ ಎಂದು ಶನಿವಾರ ಹೇಳಿದ್ದಾರೆ.

"ಇಂದು, ಆಮ್ ಆದ್ಮಿ ಪಕ್ಷವನ್ನು ತಮ್ಮ ರಕ್ತ ಮತ್ತು ಬೆವರಿನಿಂದ ಪೋಷಿಸಿ, ಹೆಚ್ಚಿನ ನಿರೀಕ್ಷೆಗಳೊಂದಿಗೆ ಸೇರಿದ ಪ್ರತಿಯೊಬ್ಬ ನಿಜವಾದ ದೇಶಭಕ್ತ ಆಮ್ ಆದ್ಮಿ ಪಕ್ಷವನ್ನು ತೊರೆದಿದ್ದಾರೆ ಅಥವಾ ಅದನ್ನು ತೊರೆಯುತ್ತಿದ್ದಾರೆ ಎಂದು ಚಡ್ಡಾ ಹೇಳಿದ್ದಾರೆ.

ಪ್ರತಿಯೊಬ್ಬ ಪ್ರಾಮಾಣಿಕ, ಶ್ರಮಶೀಲ ವ್ಯಕ್ತಿಯು ಇನ್ನು ಮುಂದೆ ಆಮ್ ಆದ್ಮಿ ಪಕ್ಷದಲ್ಲಿ ಕೆಲಸ ಮಾಡಲು ಅವಕಾಶವಿಲ್ಲ ಎಂದು ಭಾವಿಸುತ್ತಾನೆ. ಆಮ್ ಆದ್ಮಿ ಪಕ್ಷವು ಈಗ ತಪ್ಪು ಹಾದಿಯಲ್ಲಿ ನಡೆಯುತ್ತಿದೆ. ಪರಿಣಾಮವಾಗಿ, ಒಬ್ಬೊಬ್ಬರಾಗಿ, ಅನೇಕ ನಾಯಕರು ಆಮ್ ಆದ್ಮಿ ಪಕ್ಷವನ್ನು ತೊರೆಯುತ್ತಿದ್ದಾರೆ" ಎಂದು ಚಡ್ಡಾ ಆರೋಪಿಸಿದ್ದಾರೆ.

ಇನ್ನೂ ಅನೇಕ ಸಂಸದರು ಒಟ್ಟಿಗೆ ಪಕ್ಷವನ್ನು ತೊರೆಯಲು ನಿರ್ಧರಿಸಿದ್ದಾರೆ ಎಂದು ಚಡ್ಡಾ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಒಬ್ಬರಲ್ಲ, ಇಬ್ಬರಲ್ಲ, ಮೂವರಲ್ಲ, ನಾಲ್ವರಲ್ಲ, ಐದು ಅಲ್ಲ, ಆರು ಅಲ್ಲ, ಏಳು ಸಂಸದರು ಒಟ್ಟಿಗೆ ಆಮ್ ಆದ್ಮಿ ಪಕ್ಷವನ್ನು ತೊರೆಯುತ್ತಿದ್ದಾರೆ. ಏಕೆಂದರೆ ಆಮ್ ಆದ್ಮಿ ಪಕ್ಷವು ಭ್ರಷ್ಟ ಮತ್ತು ರಾಜಿ ಮಾಡಿಕೊಂಡ ಕೈಗಳಲ್ಲಿ ಸಿಲುಕಿದೆ ಎಂದು" ಎಂದು ಹೇಳಿದ್ದಾರೆ.

ಬಿಜೆಪಿ ಭಯದಿಂದ ಪಕ್ಷ ತೊರೆದಿದ್ದಾರೆ ಎಂಬ ಎಎಪಿ ನಾಯಕರ ಟೀಕೆಗೆ ಪ್ರತಿಕ್ರಿಯಿಸಿದ ಚಡ್ಡಾ, ಈ ನಿರ್ಧಾರವು ಭಯಕ್ಕಿಂತ ಹೆಚ್ಚಾಗಿ ಭ್ರಮನಿರಸನದಿಂದ ಹೊರ ಬಂದಿದ್ದೇನೆ ಎಂದು ಪ್ರತಿಪಾದಿಸಿದರು.

https://www.kannadaprabha.com/videos/2026/Apr/24/raghav-chadha-quits-aap-says-7-rs-mps-will-merge-with-bjp

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

US-Iran war: 'ಒಪ್ಪಂದಕ್ಕೆ ಒಪ್ಪಿಗೆ ಸಿಕ್ಕಿದೆ’ ಎಂದ ಟ್ರಂಪ್‌; ‘ಇನ್ನೂ ನಿರ್ಧಾರವೇ ಆಗಿಲ್ಲ’ ಎಂದ ಇರಾನ್‌ - ಶಾಂತಿ ಒಪ್ಪಂದದ ಸುತ್ತ ಹೆಚ್ಚಿದ ಅನಿಶ್ಚಿತತೆ..!

ಇರಾನ್ ಮೇಲೆ ದಾಳಿ ರದ್ದು, ಮಾತುಕತೆ ಪ್ರಮುಖ ಅಂಶಗಳಿಗೆ ಟೆಹ್ರಾನ್‌ ಅತ್ಯುನ್ನತ ನಾಯಕರ ಅನುಮೋದನೆ: ಡೊನಾಲ್ಡ್ ಟ್ರಂಪ್ ಘೋಷಣೆ

6 ನಾಗಾಗಳ ಹತ್ಯೆ ಬೆನ್ನಲ್ಲೇ ಮಣಿಪುರದಲ್ಲಿ ಕುಕಿ ಸಮುದಾಯದ ಇಬ್ಬರ ಬರ್ಬರ ಹತ್ಯೆ; 30 ಮನೆಗಳು ಸುಟ್ಟು ಕರಕಲು!

ಧರ್ಮಸ್ಥಳಕ್ಕೆ ಕಳಂಕ ಪ್ರಕರಣದಲ್ಲಿ ನಟ ಪ್ರಕಾಶ್ ರಾಜ್ ಹೆಸರು: 200 ಕೋಟಿ ಬಳಸಿ ಕೇರಳದಿಂದ ಷಡ್ಯಂತ್ರ?

ಹಗರಣಗಳೇ ಇಲ್ಲದ ಮೋದಿಯವರದ್ದು ಸ್ವಚ್ಛ ಆಡಳಿತ: ಯುಪಿಎ ಆಡಳಿತಾವಧಿ ಭ್ರಷ್ಟಾಚಾರದ ಕರಾಳ ಅಧ್ಯಾಯ; ವಿಜಯೇಂದ್ರ

SCROLL FOR NEXT