ಪತಿ ರಾಜಾ ರಘುವಂಶಿಯೊಂದಿಗೆ ಆರೋಪಿ ಪತ್ನಿ ಸೋನಾಮ್ ರಘುವಂಶಿ 
ದೇಶ

Meghalaya Honeymoon Murder: ಆರೋಪಿ ಪತ್ನಿಗೆ ನ್ಯಾಯಾಲಯದಿಂದ ಜಾಮೀನು!

2025ರಲ್ಲಿ ಮೇಘಾಲಯದಲ್ಲಿ ಹನಿಮೂನ್ ಗೆ ತೆರಳಿದ ವೇಳೆಯಲ್ಲಿ ತನ್ನ ಬಾಯ್ ಫ್ರೆಂಡ್ ಜೊತೆಗೆ ಸೇರಿ ಹತ್ಯೆ ಮಾಡಿದ್ದ ಇಂದೋರ್ ನಿವಾಸಿ ಸೋನಾಮ್ ರಘುವಂಶಿಗೆ ಮೇಘಾಲಯದ ಸ್ಥಳೀಯ ನ್ಯಾಯಾಲಯವೊಂದು ಮಂಗಳವಾರ ಜಾಮೀನು ನೀಡಿದೆ.

ಮೇಘಾಲಯ: ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದ ಮೇಘಾಲಯ ಹನಿಮೂನ್ ಮರ್ಡರ್ ಪ್ರಕರಣದ ಆರೋಪಿಗೆ ನ್ಯಾಯಾಲಯದಿಂದ ಜಾಮೀನು ದೊರೆತಿದೆ.

2025ರಲ್ಲಿ ಮೇಘಾಲಯದಲ್ಲಿ ಹನಿಮೂನ್ ಗೆ ತೆರಳಿದ ವೇಳೆಯಲ್ಲಿ ತನ್ನ ಬಾಯ್ ಫ್ರೆಂಡ್ ಜೊತೆಗೆ ಸೇರಿ ಹತ್ಯೆ ಮಾಡಿದ್ದ ಇಂದೋರ್ ನಿವಾಸಿ ಸೋನಾಮ್ ರಘುವಂಶಿಗೆ ಮೇಘಾಲಯದ ಸ್ಥಳೀಯ ನ್ಯಾಯಾಲಯವೊಂದು ಮಂಗಳವಾರ ಜಾಮೀನು ನೀಡಿದೆ.

ದಂಪತಿ ಹನಿಮೂನ್ ಗೆ ತೆರಳಿದ್ದಾಗ ಮೇ 23, 2025 ರಂದು ಸೋನಾಮ್ ಪತ್ನಿ ರಾಜಾ ರಘುವಂಶಿ ನಾಪತ್ತೆಯಾಗಿದ್ದರು. ಜೂನ್ 2 ರಂದು ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಸೊಹ್ರಾ ಪ್ರದೇಶದ ಜಲಪಾತದ ಬಳಿ ಅವರ ವಿರೂಪಗೊಂಡ ಮೃತದೇಹ ಪತ್ತೆಯಾಗಿತ್ತು.

ಈ ಪ್ರಕರಣದಲ್ಲಿ ಸೋನಮ್ ಮತ್ತು ಆಕೆಯ ಬಾಯ್ ಫ್ರೆಂಡ್ ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು. ಆರೋಪಿ ಸೋನಾಮ್ ಗೆ ನ್ಯಾಯಾಲಯ ಜಾಮೀನು ನೀಡಿದೆ.

ಆದಾಗ್ಯೂ, ಅಗತ್ಯ ಕಾನೂನು ಕ್ರಮ ಅನುಸರಿಸಲಾಗಿದ್ದು, ಪೊಲೀಸರು ಕಾನೂನಿನ ಪ್ರಕಾರ ಪ್ರಕರಣವನ್ನು ಮುಂದುವರಿಸುತ್ತಾರೆ ಎಂದು ಎಸ್ಪಿ ವಿವೇಕ್ ಸೈಮ್ ಹೇಳಿರುವುದಾಗಿ ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್