ರಸ್ತೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಾಕಿದ ವ್ಯಕ್ತಿ 
ದೇಶ

ಸಂಕಷ್ಟ ತಂದ Birthday ಆಚರಣೆ: ರಸ್ತೆ ಪೆಟ್ರೋಲ್ ಸುರಿದು ಬೆಂಕಿ.. ಪೊಲೀಸರ ಅತಿಥಿಯಾದ ಫಹಾದ್ ಶೇಖ್! Video

ಮುಂಬೈನ ಗೋರೆಗಾಂವ್‌ನಲ್ಲಿ ತನ್ನ 33ನೇ ಹುಟ್ಟುಹಬ್ಬದ ಸಂಭ್ರಮಕ್ಕಾಗಿ ರಸ್ತೆಯ ಮೇಲೆ ಪೆಟ್ರೋಲ್ ನಿಂದ 33 ಅಕ್ಷರ ಬರೆದು ಅದಕ್ಕೆ ಬೆಂಕಿ ಹಚ್ಚಿ ರೀಲ್ಸ್ ಮಾಡಿದ್ದ ಕಾರ್ ಡೀಲರ್ ಫಹಾದ್ ಶೇಖ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಮುಂಬೈ: ತನ್ನ ಜನ್ಮದಿನದ ನಿಮಿತ್ತ ರಸ್ತೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಾಕಿ ಸಂಭ್ರಮಿಸಿದ್ದ ಫಹಾದ್ ಶೇಖ್ ಎಂಬಾತ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಹೌದು.. ಮುಂಬೈನ ಗೋರೆಗಾಂವ್‌ನಲ್ಲಿ ತನ್ನ 33ನೇ ಹುಟ್ಟುಹಬ್ಬದ ಸಂಭ್ರಮಕ್ಕಾಗಿ ರಸ್ತೆಯ ಮೇಲೆ ಪೆಟ್ರೋಲ್ ನಿಂದ 33 ಅಕ್ಷರ ಬರೆದು ಅದಕ್ಕೆ ಬೆಂಕಿ ಹಚ್ಚಿ ರೀಲ್ಸ್ ಮಾಡಿದ್ದ ಕಾರ್ ಡೀಲರ್ ಫಹಾದ್ ಶೇಖ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಈತ ಗೋರೆಗಾಂವ್ ಪಶ್ಚಿಮದ ರಾಮ್ ಮಂದಿರ್ ರಸ್ತೆಯಲ್ಲಿ ಪೆಟ್ರೋಲ್ ಬಳಸಿ ರಸ್ತೆಯ ಮೇಲೆ '33' ಎಂದು ಬರೆದು ಅದಕ್ಕೆ ಬೆಂಕಿ ಹಚ್ಚಿದ್ದನು. ಈ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಮುಂಬೈ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಸಾರ್ವಜನಿಕರ ಜೀವಕ್ಕೆ ಅಪಾಯ ತಂದೊಡ್ಡಿದ ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ ಆರೋಪದ ಮೇಲೆ ಗೋರೆಗಾಂವ್ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ (BNS) ಅಡಿಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ

ಇನ್ನು ಫಹಾದ್ ಶೇಖ್ ನ ಈ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಅದೇ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಇದು ಅಪಾಯಕಾರಿಯಾಗಬಹುದಿತ್ತು ಎಂದು ಕೆಲವರು ಟೀಕಿಸಿದ್ದಾರೆ. ಅಂತೆಯೇ ಈತ ಹಾಕಿದ ಬೆಂಕಿ ಸಮೀಪದ ಗಿಡಗಂಟೆಗಳಿಗೆ ಸೋಕಿದ್ದರೆ ಕಾಡ್ಗಿಚ್ಚು ಹತ್ತಿ ಸುತ್ತಮುತ್ತಲ ಪ್ರದೇಶಕ್ಕೂ ಹಾನಿಯಾಗುತ್ತಿತ್ತು. ಈತನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಮತ್ತೆ ಕೆಲವರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈಶಾನ್ಯ ರಾಜ್ಯಗಳು 'ಭಾರತದ ಅಷ್ಟಲಕ್ಷ್ಮಿ'ಯರಿದ್ದಂತೆ, 'Act East', 'Act Fast' ನೀತಿಗೆ ಹೆಚ್ಚಿನ ಒತ್ತು: ಪ್ರಧಾನಿ ಮೋದಿ

ಜೈಲಿಗೆ ಹೋಗಿ ಬಂದ್ರು ಬುದ್ಧಿ ಕಲಿಯದ ರಜತ್! ಮತ್ತೊಂದು ಎಡವಟ್ಟು,Video ವೈರಲ್

ಹೆಸರಿನಲ್ಲಿ ಅಹಿಂಸೆ, ಮಾತಿನಲ್ಲಿ ಕನ್ನಡಿಗರಿಗೆ ಹಿಂಸೆ, ಚೇತನ್ ಗೆ ನಿಖಿಲ್ ಖಡಕ್ ತಿರುಗೇಟು!

ಕಲ್ಮಾ ಪಠಿಸುವಂತೆ ಅಮೆರಿಕದಿಂದ ಬಂದ ಉಗ್ರ ಒತ್ತಾಯ; ಒಪ್ಪದಿದ್ದಕ್ಕೆ ಭದ್ರತಾ ಸಿಬ್ಬಂದಿಗೆ ಇರಿದು ಹತ್ಯೆಗೆ ಯತ್ನ; ISIS ನಂಟು!

KSDL ಅಭೂತಪೂರ್ವ ಸಾಧನೆ: ಇದೇ ಮೊದಲ ಬಾರಿಗೆ 2,016 ಕೋಟಿ ರೂ. ವಹಿವಾಟು! ಲಾಭ ಎಷ್ಟು ಗೊತ್ತಾ?

SCROLL FOR NEXT