ನಾಗಲಕ್ಷ್ಮಿ  
ದೇಶ

ಶ್ರೀ ಸಾಯಿ ಸಿಲ್ಕ್ಸ್ ಮಾಲಕಿ ಭೀಕರ ಕೊಲೆ: ಪತ್ನಿ ಕೊಂದು ಪತಿ ಆತ್ಮಹತ್ಯೆ; ನಾಗಲಕ್ಷ್ಮಿ ಪೋಸ್ಟ್ ಮಾಡಿದ್ದ ಕೊನೆಯ ವಿಡಿಯೋ ವೈರಲ್!

ಎರಡು ವರ್ಷಗಳ ಹಿಂದೆ ಜಗಳವಾಡಿ ಸುಬ್ರಮಣಿಯನ್ ಮನೆ ಬಿಟ್ಟು ಮಧುರೈನಲ್ಲಿರುವ ತನ್ನ ಸಹೋದರಿಯೊಂದಿಗೆ ವಾಸಿಸಲು ತೆರಳಿದರು. ಈ ಅವಧಿಯಲ್ಲಿ, ನಾಗಲಕ್ಷ್ಮಿ ಅವರಿಗೆ ಆನ್ ಲೈನ್ ನಲ್ಲಿ ಹಣವನ್ನು ಕಳುಹಿಸುತ್ತಿದ್ದರು. 10 ದಿನಗಳ ಹಿಂದೆ ಸುಬ್ರಮಣಿ ವಾಪಸ್ ಬಂದಿದ್ದನು.

ಚೆನ್ನೈ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಚೆನ್ನೈ ಶ್ರೀ ಸಾಯಿ ಸಿಲ್ಕ್ಸ್ ಓನರ್ ನಾಗಲಕ್ಷ್ಮಿಯನ್ನು ಆಕೆಯ ಪತಿಯೇ ಭೀಕರವಾಗಿ ಕೊಲೆ ಮಾಡಿ ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸುಬ್ರಮಣಿಯನ್ (52) ಮತ್ತು ಅವರ ಪತ್ನಿ ನಾಗಲಕ್ಷ್ಮಿ (42) ನಂಗನಲ್ಲೂರಿನ ತಿಳ್ಳೈಗಂಗಾ ನಗರದಲ್ಲಿ ವಾಸವಿದ್ದರು. ನಿರುದ್ಯೋಗಿಯಾಗಿದ್ದ ಆತ ಪ್ರತಿದಿನ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದ ಎಂದು ತಿಳಿದು ಬಂದಿದೆ.

ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ, ಮೊದಲ ಮಗ ಹರೀಶ್ ಭಾರದ್ವಾಜ್ ರಷ್ಯಾದಲ್ಲಿ ಎರಡನೇ ವರ್ಷದ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶೈಲೇಶ್ (18) ನಗರದಲ್ಲಿ ಪ್ರಥಮ ವರ್ಷದ ದಂತ ವೈದ್ಯಕೀಯ ವಿದ್ಯಾರ್ಥಿ. ನಾಗಲಕ್ಷ್ಮಿ ನಂಗನಲ್ಲೂರು ಮತ್ತು ಅಣ್ಣಾ ನಗರದಲ್ಲಿ ರೇಷ್ಮೆ ಸೀರೆ ಅಂಗಡಿಗಳನ್ನು ನಡೆಸುತ್ತಿದ್ದರು, ಆದರೆ ಸುಬ್ರಮಣಿಯನ್ ನಿರುದ್ಯೋಗಿಯಾಗಿದ್ದು, ಹಣಕ್ಕಾಗಿ ಪತ್ನಿಗೆ ಆಗಾಗ್ಗೆ ಕಿರುಕುಳ ನೀಡುತ್ತಿದ್ದರು, ಇದರಿಂದಾಗಿ ನಿರಂತರ ಜಗಳಗಳು ನಡೆಯುತ್ತಿದ್ದವು ಎಂದು ವರದಿಯಾಗಿದೆ.

ಎರಡು ವರ್ಷಗಳ ಹಿಂದೆ ಜಗಳವಾಡಿ ಸುಬ್ರಮಣಿಯನ್ ಮನೆ ಬಿಟ್ಟು ಮಧುರೈನಲ್ಲಿರುವ ತನ್ನ ಸಹೋದರಿಯೊಂದಿಗೆ ವಾಸಿಸಲು ತೆರಳಿದರು. ಈ ಅವಧಿಯಲ್ಲಿ, ನಾಗಲಕ್ಷ್ಮಿ ಅವರಿಗೆ ಆನ್ ಲೈನ್ ನಲ್ಲಿ ಹಣವನ್ನು ಕಳುಹಿಸುತ್ತಿದ್ದರು. 10 ದಿನಗಳ ಹಿಂದೆ ಸುಬ್ರಮಣಿ ವಾಪಸ್ ಬಂದಿದ್ದನು.

ಸೋಮವಾರ ಮಧ್ಯಾಹ್ನ, ಸುಬ್ರಮಣಿಯನ್ ಕಾಲೇಜಿನಲ್ಲಿದ್ದ ಶೈಲೇಶ್‌ಗೆ ವಾಟ್ಸಾಪ್ ಸಂದೇಶ ಕಳುಹಿಸಿದರು, ಅದರಲ್ಲಿ “ನಿನ್ನ ತಾಯಿ ಮತ್ತು ನಾನು ಇನ್ನು ಮುಂದೆ ಮನೆಯಲ್ಲಿ ಇರುವುದಿಲ್ಲ. ನಾನು ನಿಮಗಾಗಿ ಆಹಾರವನ್ನು ಇಟ್ಟಿದ್ದೇನೆ. ಮನೆಗೆ ಬಂದು ತಿನ್ನು ಎಂದು ಬರೆಯಲಾಗಿತ್ತು.

ಅನುಮಾನಗೊಂಡ ಶೈಲಾಶ್ ಮನೆಗೆ ಧಾವಿಸಿ ನೋಡಿದಾಗ, ಒಂದು ಕೋಣೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ನಾಗಲಕ್ಷ್ಮಿಯನ್ನು ಕಂಡರು. ಕುಡುಗೋಲಿನಿಂದ ಕೈ, ತಲೆ ಮತ್ತು ಕುತ್ತಿಗೆಗೆ ಮಾರಕ ಗಾಯಗಳಾಗಿದ್ದವು. ಇನ್ನೊಂದು ಕೋಣೆಯಲ್ಲಿ, ಸುಬ್ರಮಣಿಯನ್ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದರು.

ಪೊಲೀಸ್ ತನಿಖೆಯ ಪ್ರಕಾರ, ತೀವ್ರ ವಾಗ್ವಾದದ ನಂತರ, ಸುಬ್ರಮಣಿಯನ್ ಮನೆಯಿಂದ ಹೊರಟು, ಕುಡುಗೋಲು ಖರೀದಿಸಿ, ಹಿಂತಿರುಗಿ ಬಂದು, ತನ್ನ ಹೆಂಡತಿಯ ಮೇಲೆ ಹಲ್ಲೆ ನಡೆಸಿ ಕೊಂದು ನಂತರ ನೇಣು ಬಿಗಿದುಕೊಂಡಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

NCP ಬಣಗಳ ವಿಲೀನದ ಸುಳಿವು: INDIA ಗೆ ಕೈ ಕೊಟ್ಟು NDA ಸೇರ್ತಾರಾ ಶರದ್ ಪವಾರ್, ಸುಪ್ರಿಯಾ?

ತೇಜೋವಧೆಗೆ ಹುನ್ನಾರ: 'ಸತ್ಯಾಸತ್ಯತೆ' ಹೊರಬರಬೇಕಿದೆ; HD ಕುಮಾರಸ್ವಾಮಿ ಆರೋಪಕ್ಕೆ ಹಾಸನ ಜಿಲ್ಲಾಧಿಕಾರಿ ತಿರುಗೇಟು, Video

ಪಟಾಕಿಗಳು ಕಾಯಿಲೆಗಳನ್ನು ಗುಣಪಡಿಸುತ್ತೆ ಎಂದ ಬಂಗಾಳ ಬಿಜೆಪಿ ಶಾಸಕಿ; ವಿವಾದ ಸೃಷ್ಟಿ!

'ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ಆರ್ಥಿಕ ನೆರವು ಕೊಡಬೇಡಿ': ಟ್ರಂಪ್‌ಗೆ ಅಮೆರಿಕದ ಮೊದಲ ಮುಸ್ಲಿಂ ಸೆನೆಟರ್ ಸಲಹೆ!

ಸಿಎಂ ಶಿವಕುಮಾರ್ ಹಾಸನಾಂಬೆ ದರ್ಶನ ಪಡೆಯುತ್ತಿರುವ ವಿಡಿಯೋಗೆ ಆಕ್ರೋಶಿತ ಭಕ್ತರಿಂದ ಚಪ್ಪಲಿ ಎಸೆತ, Video!