ಜೈರಾಮ್ ರಮೇಶ್  
ದೇಶ

Exit polls ಮೇಲೆ ನನಗೆ ನಂಬಿಕೆ ಇಲ್ಲ: ಅದೊಂದು ಜಾಲ- ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಕಿಡಿ!

ಸಮೀಕ್ಷೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಎಕ್ಸಿಟ್ ಪೋಲ್ ಗಳ ಬಗ್ಗೆ ನನಗೆ ನಂಬಿಕೆ ಇಲ್ಲ. ಅದೊಂದು ವ್ಯವಸ್ಥಿತ ಜಾಲವಾಗಿದ್ದು, ಕೆಲವರ ಆದೇಶದ ಮೇರೆಗೆ ಅವುಗಳನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ನವದೆಹಲಿ: ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಪುದುಚೇರಿ,ಅಸ್ಸಾಂ ವಿಧಾನಸಭಾ ಚುನಾವಣೆಯ ಚುನಾವಣೋತ್ತರ ಸಮೀಕ್ಷೆ ಬಗ್ಗೆ ನಂಬಿಕೆ ಇಲ್ಲ ಎಂದಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಅವುಗಳನ್ನು ಜಾಲ (racket) ಎಂದು ಕರೆದಿದ್ದಾರೆ, ಅವುಗಳಲ್ಲಿ ಬಹುತೇಕ ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿವೆ ಎಂದು ಹೇಳಿದ್ದಾರೆ.

ಸಮೀಕ್ಷೆ ಒಂದು ಕಸರತ್ತಾಗಿ ಮಾರ್ಪಟ್ಟಿದೆ ಮತ್ತು ಚುನಾವಣೋತ್ತರ ಸಮೀಕ್ಷೆಗಳನ್ನು ಯಾರು ಮಾಡುತ್ತಿದ್ದಾರೆ ಮತ್ತು ಅವರ ಮಾದರಿ ಸಮೀಕ್ಷೆ ಏನು ಎಂದು ಯಾರಿಗೂ ತಿಳಿದಿಲ್ಲ ಎಂದು ಅವರು ಹೇಳಿದರು. ಪಶ್ಚಿಮ ಬಂಗಾಳದ 2021 ರ ಸಮೀಕ್ಷೆಯ ಫಲಿತಾಂಶವನ್ನು ಉದಾಹರಣೆಯಾಗಿ ನೀಡಿದ್ದು, ಎಲ್ಲರೂ ಹೇಗೆ ತಪ್ಪಾಗಿ ಗ್ರಹಿಸಿದ್ದರು ಎಂಬುದನ್ನು ತಿಳಿಸಿದ್ದಾರೆ.

ಸಮೀಕ್ಷೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಎಕ್ಸಿಟ್ ಪೋಲ್ ಗಳ ಬಗ್ಗೆ ನನಗೆ ನಂಬಿಕೆ ಇಲ್ಲ. ಅದೊಂದು ವ್ಯವಸ್ಥಿತ ಜಾಲವಾಗಿದ್ದು, ಕೆಲವರ ಆದೇಶದ ಮೇರೆಗೆ ಅವುಗಳನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಪಶ್ಚಿಮ ಬಂಗಾಳದಲ್ಲಿ ಹೆಚ್ಚಿನ ಶೇಕಡವಾರು ಮತದಾನ ಕುರಿತು ಮಾತನಾಡಿದ ಜೈರಾಮ್ ರಮೇಶ್, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಯಾವಾಗಲೂ ಹೆಚ್ಚಿನ ಮತದಾನದ ರಾಜ್ಯಗಳಾಗಿವೆ ಮತ್ತು ಈಗ ಸ್ವಲ್ಪ ಹೆಚ್ಚಾಗಿದೆ ಎಂದು ಹೇಳಿದರು.

ನನಗೆ ಇದರ ಬಗ್ಗೆ ಹೆಚ್ಚು ತಿಳಿದಿಲ್ಲ. ಈ ಚುನಾವಣೆಯಲ್ಲಿ ಚುನಾವಣಾ ಆಯೋಗವು ತಟಸ್ಥವಾಗದ ಕಾರಣ ನಾವು ಚುನಾವಣಾ ಆಯೋಗದ ವಿರುದ್ಧವೂ ಹೋರಾಡುತ್ತಿದ್ದೇವೆ. ಅವರು ಈ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅಡಿಯಲ್ಲಿ ಹೆಚ್ಚಿನ ರಾಜಿ ಮಾಡಿಕೊಳ್ಳಲಾಗಿದೆ. ಅವರ ಆಡಳಿತಾವಧಿಯಲ್ಲಿ 'ಕೊಳೆತ' ಪ್ರಾರಂಭವಾಯಿತು ಎಂದು ಆರೋಪಿಸಿದರು.

"ಈ ವ್ಯಕ್ತಿ ತಟಸ್ಥ ವೀಕ್ಷಕನಲ್ಲ. ಸಿಇಸಿ ಪದಚ್ಯುತಿಗಾಗಿ ಸಂಸತ್ತಿನಲ್ಲಿ ನೀಡಲಾದ ನೋಟಿಸ್‌ನಲ್ಲಿ ಅವರ ವಿರುದ್ಧ ಒಂಬತ್ತು ಆರೋಪಗಳಿವೆ. ಸಿಇಸಿ ಕುಮಾರ್ ಅವರ ಪದಚ್ಯುತಿಗಾಗಿ ನೀಡಿದ ನೋಟಿಸ್ ಅನ್ನು ಅಧ್ಯಕ್ಷರು ಮತ್ತೆ ತಿರಸ್ಕರಿಸಿದರೆ ನಾವು ಹೋರಾಟ ನಡೆಸುತ್ತೇವೆ. ಅವರನ್ನು ಪದಚ್ಯುತಗೊಳಿಸಲು ನಾವು ನಮ್ಮ ಪ್ರಯತ್ನಗಳನ್ನು ಮುಂದುವರಿಸುತ್ತೇವೆ. ಪಶ್ಚಿಮ ಬಂಗಾಳದಲ್ಲಿ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗಿದೆ, ಮತದಾರರ ಪಟ್ಟಿಯಿಂದ ಲಕ್ಷಾಂತರ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂದು ಕಾಂಗ್ರೆಸ್ ನಾಯಕ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೌರಿಂಗ್ ಆಸ್ಪತ್ರೆ ದುರಂತ: ಕಾರ್ಯನಿರ್ವಾಹಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ಧಾರವಾಡ ವಿದ್ಯಾಗಿರಿ ಠಾಣೆ ಇನ್ಸ್​​ಪೆಕ್ಟರ್ ರಫೀಕ್​​ ಅಮಾನತು!

'ಅಮೆರಿಕನ್ನರಿಗೆ ಗಲ್ಫ್ ನೀರಿನ ಕೆಳಭಾಗವೇ ಗತಿ': 'ಪರಮಾಣು, ಕ್ಷಿಪಣಿ ಸಾಮರ್ಥ್ಯ' ರಕ್ಷಣೆಗೆ ಬದ್ಧ- ಖಮೇನಿ ಪ್ರತಿಜ್ಞೆ

ಟ್ರಂಪ್ ಯೋಜನೆ ಬುಡಮೇಲು ಮಾಡಿದ ಪಾಕಿಸ್ತಾನ: ನಿರ್ಬಂಧಕ್ಕೆ Dont Care; ರಷ್ಯಾ, ಚೀನಾ ಜೊತೆ ವ್ಯಾಪಾರಕ್ಕೆ ಇರಾನ್ ಗೆ ನೆರವು!

ಸಾರ್ವಜನಿಕವಾಗಿ ನನ್ನನ್ನು ಬಂಧಿಸಿ ಅವಮಾನಿಸುವ ಅಗತ್ಯವಿಲ್ಲ: ಪವನ್ ಖೇರಾ; ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

SCROLL FOR NEXT