ಉದಯನಿಧಿ ಸ್ಟಾಲಿನ್ 
ದೇಶ

ತ್ರಿಶಾ ವಿರುದ್ಧ ಡಬಲ್ ಮೀನಿಂಗ್ ಹೇಳಿಕೆ: ವಿಚಾರಣೆ ಬಳಿಕ ಠಾಣೆಯಿಂದ ಉದಯನಿಧಿ ಬಿಡುಗಡೆ, ಅಭಿಮಾನಿಗಳಿಂದ ಸಂಭ್ರಮ!

ನಟಿ ತ್ರಿಶಾ ವಿರುದ್ಧ 'ಡಬಲ್ ಮೀನಿಂಗ್' ಹೇಳಿಕೆ ನೀಡಿದ್ದ ಆರೋಪ ಹಿನ್ನೆಲೆಯಲ್ಲಿ ತಮಿಳುನಾಡಿನ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ನನ್ನು ಬಂಧಿಸಲಾಗಿತ್ತು. ತೀವ್ರ ವಿಚಾರಣೆ ಬಳಿಕ ಸ್ಟೇಷನ್ ಜಾಮೀನಿನ ಮೇಲೆ ಉದಯನಿಧಿ ಸ್ಟಾಲಿನ್ ನನ್ನು ಬಿಡುಗಡೆ ಮಾಡಲಾಗಿದೆ.

ಚೆನ್ನೈ: ನಟಿ ತ್ರಿಶಾ ವಿರುದ್ಧ 'ಡಬಲ್ ಮೀನಿಂಗ್' ಹೇಳಿಕೆ ನೀಡಿದ್ದ ಆರೋಪ ಹಿನ್ನೆಲೆಯಲ್ಲಿ ತಮಿಳುನಾಡಿನ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ನನ್ನು ಬಂಧಿಸಲಾಗಿತ್ತು. ತೀವ್ರ ವಿಚಾರಣೆ ಬಳಿಕ ಸ್ಟೇಷನ್ ಜಾಮೀನಿನ ಮೇಲೆ ಉದಯನಿಧಿ ಸ್ಟಾಲಿನ್ ನನ್ನು ಬಿಡುಗಡೆ ಮಾಡಲಾಗಿದೆ. ತಂಜಾವೂರು ಬಳಿಯ ಸೆಂಗಿಪಟ್ಟಿ ಪೊಲೀಸ್ ಠಾಣೆಯಲ್ಲಿ ಡಿಎಂಕೆ ನಾಯಕನ ವಿಚಾರಣೆ ನಡೆಸಲಾಯಿತು. ಇನ್ನು ಪೊಲೀಸ್ ಠಾಣೆ ಮುಂದೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದು ಉದಯನಿಧಿ ಸ್ಟಾಲಿನ್ ಬಿಡುಗಡೆಯಾಗುತ್ತಿದ್ದಂತೆ ಅಭಿಮಾನಿಗಳು ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.

ತಂಜಾವೂರಿನಲ್ಲಿ ಸೋಮವಾರ ನಡೆದ ಕಾವೇರಿ ಪ್ರತಿಭಟನೆಯ ಸಂದರ್ಭದಲ್ಲಿ ತ್ರಿಶಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನಲೆಯಲ್ಲಿ ಅವರ ಮೇಲೆ ಹಲವು ಪ್ರಕರಣಗಳು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ನೀಲಂಕರೈನ ಪೂರ್ವ ಕರಾವಳಿ ರಸ್ತೆಯಲ್ಲಿರುವ ಅವರ ನಿವಾಸದಿಂದ ತಂಜಾವೂರು ಮತ್ತು ನೀಲಂಕರೈ ಪೊಲೀಸರ ಜಂಟಿ ತಂಡವು ವಿಚಾರಣೆಗಾಗಿ ಉದಯನಿಧಿಯನ್ನು ಬಂಧಿಸಿತ್ತು.

ನಾನು ರೈತರು, ಅವರ ಕಲ್ಯಾಣ ಮತ್ತು ಕಾವೇರಿ ನದಿ ನೀರಿನ ಸಮಸ್ಯೆಯ ಬಗ್ಗೆ 20 ನಿಮಿಷಗಳಿಗೂ ಹೆಚ್ಚು ಕಾಲ ಮಾತನಾಡಿದ್ದೇನೆ. ನಾನು ಎಂದಿಗೂ ಮಾತನಾಡದ ವಿಷಯವನ್ನು ತಿರುಚಿ ನನ್ನ ವಿರುದ್ಧ ಷಡ್ಯಂತ್ರಕ್ಕೆ ಬಳಸಲಾಗುತ್ತಿದೆ. ನಾನಲ್ಲ ನನ್ನ ಪಕ್ಷದ ಮೂಲ ಸದಸ್ಯನಿಗೂ ಸಹ ಇಂತಹ ಬಂಧನಗಳಿಗೆ ಹೆದರುವುದಿಲ್ಲ. ನಾವು ಅದನ್ನು ಕಾನೂನುಬದ್ಧವಾಗಿ ಎದುರಿಸುತ್ತೇವೆ ಎಂದು ಉದಯನಿಧಿ ಮಾಧ್ಯಮಗಳಿಗೆ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

PoK ಚುನಾವಣೆ ಒಂದು ನೆಪ; ಪ್ರತಿಭಟನೆಯನ್ನು ಹತ್ತಿಕ್ಕಲು ಗುಂಡುಗಳ ಬಳಕೆ: ಭಾರತ ಖಂಡನೆ

ಸಂಪುಟ ವಿಸ್ತರಣೆ ಸರ್ಕಸ್ ನಂತರ ಖಾತೆ ಹಂಚಿಕೆ ಕಸರತ್ತು; ಯಾರಿಗೆ ಯಾವ ಖಾತೆ? ಇಲ್ಲಿದೆ ಸಂಪೂರ್ಣ ಪಟ್ಟಿ

'ನನ್ನ ಅಮ್ಮ ಒಂಥರಾ ಗೂಢಚಾರಿ ಇದ್ದಂತೆ; ಅಪ್ಪ CM ಆಗಿದ್ದು ಐತಿಹಾಸಿಕ ಕ್ಷಣ': ಫಸ್ಟ್ ಟೈಮ್ ಮನಬಿಚ್ಚಿ ಮಾತನಾಡಿದ ವಿಜಯ್ ಪುತ್ರ!

ಜೀವನದ ಅತಿ ದುಬಾರಿ ಖರೀದಿಯನ್ನು ಬಹಿರಂಗಪಡಿಸಿದ Madhavan; ಬ್ಯಾಂಕ್ ಬ್ಯಾಲೆನ್ಸ್ ಬಗ್ಗೆ ನಾನು ತುಂಬಾ Insecure ಅಂದಿದ್ದೇಕೆ ನಟ?

ರಾಜ್ಯದ ರೈತರಿಗೆ ತಕ್ಷಣ 10 ಸಾವಿರ ಕೋಟಿ ರೂ ಪರಿಹಾರ ಬಿಡುಗಡೆ ಮಾಡಿ: ರಾಜ್ಯ ಸರ್ಕಾರಕ್ಕೆ ಬಿ.ವೈ ವಿಜಯೇಂದ್ರ ಆಗ್ರಹ