ಉದಯನಿಧಿ ಸ್ಟಾಲಿನ್ 
ದೇಶ

ಸನಾತನ ಧರ್ಮ ಟೀಕಿಸಿದ್ದ ವ್ಯಕ್ತಿಯ ಬಂಧನವಾಗಿದೆ: ಉದಯನಿಧಿ ಸ್ಟಾಲಿನ್​​​ಗೆ ಕುಟುಕಿದ BJP

ಉದಯನಿಧಿ ಸ್ಟಾಲಿನ್ ಬಂಧನವನ್ನು ಸ್ವಾಗತಿಸಿದ ಬಿಜೆಪಿ ನಾಯಕ ಅಮಿತ್‌ ಮಾಳವೀಯ ಅವರು, ಸನಾತನ ಧರ್ಮವನ್ನು ಟೀಕಿಸಿದ್ದ ವ್ಯಕ್ತಿಯ ಬಂಧನವಾಗಿದೆ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ನವದೆಹಲಿ: ತಮಿಳುನಾಡು ಮುಖ್ಯಮಂತ್ರಿ ವಿಜಯ್ ಮತ್ತು ನಟಿ ತ್ರಿಷಾ ವಿರುದ್ಧ "ಅವಹೇಳನಕಾರಿ" ಹೇಳಿಕೆ ನೀಡಿದ ಆರೋಪದ ಮೇಲೆ ತಮಿಳುನಾಡು ಪೊಲೀಸರು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು ಮಂಗಳವಾರ ಬಂಧಿಸಿದ್ದಾರೆ.

ಉದಯನಿಧಿ ಸ್ಟಾಲಿನ್ ಬಂಧನವನ್ನು ಸ್ವಾಗತಿಸಿದ ಬಿಜೆಪಿ ನಾಯಕ ಅಮಿತ್‌ ಮಾಳವೀಯ ಅವರು, ಸನಾತನ ಧರ್ಮವನ್ನು ಟೀಕಿಸಿದ್ದ ವ್ಯಕ್ತಿಯ ಬಂಧನವಾಗಿದೆ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಉದಯನಿಧಿ ಸ್ಟಾಲಿನ್, ಮಹಿಳೆಯೊಬ್ಬರ ವಿರುದ್ಧ ಕೆಟ್ಟ ಮತ್ತು ಅವಹೇಳನಕಾರಿ ಹೇಳಿಕೆ ನೀಡಿ ಬಂಧನಕ್ಕೊಳಗಾಗಿದ್ದಾರೆ. ಸನಾತನ ಧರ್ಮವನ್ನು ಹಳಿದಿದ್ದ ವ್ಯಕ್ತಿ ಈಗ ಮಹಿಳೆಯರ ವಿರುದ್ಧದ ನಿಂದನಾತ್ಮಕ ಹೇಳಿಕೆಗಾಗಿ ಕಾನೂನು ಕ್ರಮ ಎದುರಿಸುತ್ತಿದ್ದಾರೆ. ಸಾರ್ವಜನಿಕವಾಗಿ ಮಹಿಳೆಯರ ಘನತೆಗೆ ಕುಂದಂಟು ಮಾಡುವ ಇಂತಹ ಅಸಭ್ಯ ಭಾಷಣಕ್ಕಾಗಿ ಅವರನ್ನು ಬಂಧಿಸಿದ್ದು ಸರಿಯಾದ ಕ್ರಮವೇ ಆಗಿದೆ ಎಂದು ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವೀಯ ಹೇಳಿದ್ದಾರೆ.

ತಂಜಾವೂರಿನಲ್ಲಿ ಸೋಮವಾರ ನಡೆದ ಕಾವೇರಿ ಪ್ರತಿಭಟನೆಯ ಸಂದರ್ಭದಲ್ಲಿ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ದಾಖಲಾಗಿರುವ ಹಲವಾರು ಪ್ರಕರಣಗಳಿಗೆ ಸಂಬಂಧಿಸಿದಂತೆ ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ನೀಲಂಕರೈನ ಪೂರ್ವ ಕರಾವಳಿ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ತಂಜಾವೂರು ಮತ್ತು ನೀಲಂಕರೈ ಪೊಲೀಸರ ಜಂಟಿ ತಂಡ ಉದಯನಿಧಿ ಸ್ಟಾಲಿನ್ ಅವರನ್ನು ಬಂಧಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ತ್ರಿಶಾ ವಿರುದ್ಧ ಡಬಲ್ ಮೀನಿಂಗ್ ಹೇಳಿಕೆ: ವಿಚಾರಣೆ ಬಳಿಕ ಠಾಣೆಯಿಂದ ಉದಯನಿಧಿ ಬಿಡುಗಡೆ, ಅಭಿಮಾನಿಗಳಿಂದ ಸಂಭ್ರಮ!

PoK ಚುನಾವಣೆ ಒಂದು ನೆಪ; ಪ್ರತಿಭಟನೆಯನ್ನು ಹತ್ತಿಕ್ಕಲು ಗುಂಡುಗಳ ಬಳಕೆ: ಭಾರತ ಖಂಡನೆ

ಸಂಪುಟ ವಿಸ್ತರಣೆ ಸರ್ಕಸ್ ನಂತರ ಖಾತೆ ಹಂಚಿಕೆ ಕಸರತ್ತು; ಯಾರಿಗೆ ಯಾವ ಖಾತೆ? ಇಲ್ಲಿದೆ ಸಂಪೂರ್ಣ ಪಟ್ಟಿ

'ನನ್ನ ಅಮ್ಮ ಒಂಥರಾ ಗೂಢಚಾರಿ ಇದ್ದಂತೆ; ಅಪ್ಪ CM ಆಗಿದ್ದು ಐತಿಹಾಸಿಕ ಕ್ಷಣ': ಫಸ್ಟ್ ಟೈಮ್ ಮನಬಿಚ್ಚಿ ಮಾತನಾಡಿದ ವಿಜಯ್ ಪುತ್ರ!

ಜೀವನದ ಅತಿ ದುಬಾರಿ ಖರೀದಿಯನ್ನು ಬಹಿರಂಗಪಡಿಸಿದ Madhavan; ಬ್ಯಾಂಕ್ ಬ್ಯಾಲೆನ್ಸ್ ಬಗ್ಗೆ ನಾನು ತುಂಬಾ Insecure ಅಂದಿದ್ದೇಕೆ ನಟ?