ಅರವಿಂದ ಕೇಜ್ರಿವಾಲ್ 
ದೇಶ

Meta ವಿವಾದ: 'ತಮ್ಮದೇ ದೇಶದ ನಾಗರಿಕರ ವಿರುದ್ಧವೇ ಹೋರಾಡುತ್ತಿದ್ದಾರೆ'; ಪ್ರಧಾನಿ ಮೋದಿ ವಿರುದ್ಧ ಕೇಜ್ರಿವಾಲ್‌ ವಾಗ್ದಾಳಿ

ಒಂದು ಕಾಲದಲ್ಲಿ ಪ್ರಧಾನಿಯನ್ನು ಬೆಂಬಲಿಸುತ್ತಿದ್ದವರೇ ಈಗ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಇ-20 ಇಂಧನದಂತಹ ಸಮಸ್ಯೆಗಳಿಂದ ಬೇಸತ್ತು ಅವರ ವಿರುದ್ಧ ತಿರುಗುತ್ತಿದ್ದಾರೆ.

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೇವಲ ತಮ್ಮ ವೈಯಕ್ತಿಕ ವರ್ಚಸ್ಸನ್ನು ರಕ್ಷಿಸಿಕೊಳ್ಳಲು ಕಾನೂನುಗಳನ್ನು ರೂಪಿಸುತ್ತಿದ್ದು, ತಮ್ಮದೇ ದೇಶದ ನಾಗರಿಕರೊಂದಿಗೆ ಹೋರಾಡುತ್ತಿದ್ದಾರೆಂದು ಆಮ್ ಆದ್ಮಿ ಪಕ್ಷದ (AAP) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ವಾಗ್ದಾಳಿ ನಡೆಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ (X) ನಲ್ಲಿ ಪೋಸ್ಟ್‌ ಮಾಡಿರುವ ಕೇಜ್ರಿವಾಲ್‌, "ಭಾರತದ ಪ್ರಧಾನಿ ಈಗ ತಮ್ಮದೇ ದೇಶದ ನಾಗರಿಕರ ವಿರುದ್ಧ ಹೋರಾಡುತ್ತಿದ್ದಾರೆ. ತಮ್ಮನ್ನು ದೇಶದ ಜನರಿಂದ ರಕ್ಷಿಸಿಕೊಳ್ಳಲು ಕಾನೂನುಗಳನ್ನು ರೂಪಿಸುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.

ಒಂದು ಕಾಲದಲ್ಲಿ ಪ್ರಧಾನಿಯನ್ನು ಬೆಂಬಲಿಸುತ್ತಿದ್ದವರೇ ಈಗ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಇ-20 ಇಂಧನದಂತಹ ಸಮಸ್ಯೆಗಳಿಂದ ಬೇಸತ್ತು ಅವರ ವಿರುದ್ಧ ತಿರುಗುತ್ತಿದ್ದಾರೆ" ಎಂದು ಟೀಕಿಸಿದ್ದಾರೆ.

ಸಾಮಾಜಿಕ ಮಾಧ್ಯಮ ದೈತ್ಯ 'ಮೆಟಾ' (Meta) ಸಂಸ್ಥೆಯು ಭಾರತದಲ್ಲಿ ತೀವ್ರ ಕಂಟೆಂಟ್ ಪರಿಶೀಲನೆ ಎದುರಿಸುತ್ತಿರುವ ಬೆನ್ನಲ್ಲೇ ಈ ರಾಜಕೀಯ ಜಟಾಪಟಿ ಆರಂಭವಾಗಿದೆ.

ಮೂಲಗಳ ಪ್ರಕಾರ, ಪ್ರಧಾನಿ ಮೋದಿ ಅವರ ಫೇಸ್‌ಬುಕ್‌ ವಿಡಿಯೊವನ್ನು ತಾತ್ಕಾಲಿಕವಾಗಿ ತೆಗೆದುಹಾಕಿದ ಘಟನೆ ಸೇರಿದಂತೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಸಂಬಂಧಿತ ವಿಷಯಗಳು (CSAM), ಡೀಪ್‌ಫೇಕ್‌ ವಿಡಿಯೊಗಳು ಹಾಗೂ ಪ್ಲಾಟ್‌ಫಾರ್ಮ್‌ ನಿರ್ವಹಣೆಯಲ್ಲಿನ ದೋಷಗಳ ಕುರಿತು ಮೆಟಾ ಸಿಇಒ ಮಾರ್ಕ್‌ ಜುಕರ್‌ಬರ್ಗ್‌ ಭಾರತ ಸರ್ಕಾರಕ್ಕೆ ಕ್ಷಮೆ ಕೋರಿದ್ದಾರೆ ಎನ್ನಲಾಗಿದೆ.

ಸರ್ಕಾರ ಅಕ್ರಮ ಕಂಟೆಂಟ್‌ ನಿರ್ವಹಣೆ ಹಾಗೂ ಕಂಟೆಂಟ್‌ ಮಾಡರೇಷನ್‌ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದ ಬಳಿಕ ಜುಕರ್‌ಬರ್ಗ್‌ ಕ್ಷಮೆಯಾಚಿಸಿದ್ದಾರೆಂದು ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, "ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ವಿಷಯಗಳು, ಡೀಪ್‌ಫೇಕ್‌ ಕಂಟೆಂಟ್‌ ಹಾಗೂ ಪ್ಲಾಟ್‌ಫಾರ್ಮ್‌ ನಿರ್ವಹಣೆಯಲ್ಲಿನ ದೋಷಗಳ ಬಗ್ಗೆ ಮಾರ್ಕ್‌ ಜುಕರ್‌ಬರ್ಗ್‌ ಕ್ಷಮೆ ಕೋರಿದ್ದಾರೆಂದು ಹೇಳಲಾಗುತ್ತಿದೆ.

ಮೆಟಾ ಕೇವಲ ಮಧ್ಯವರ್ತಿ (Intermediary) ಅಲ್ಲ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿದ್ದು, ಯಾವ ಕಂಟೆಂಟ್‌ ಯಾರಿಗೆ ತಲುಪಬೇಕು ಎಂಬುದನ್ನು ಕಂಪನಿಯೇ ನಿರ್ಧರಿಸುತ್ತಿರುವುದರಿಂದ ಮಾಹಿತಿ ತಂತ್ರಜ್ಞಾನ ಕಾಯ್ದೆಯ 'ಸೇಫ್‌ ಹಾರ್ಬರ್‌' ರಕ್ಷಣೆ ಅವರಿಗೆ ಅನ್ವಯಿಸುವುದಿಲ್ಲ" ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಬೆಳವಣಿಗೆಗೂ ಮುನ್ನ, ಮೆಟಾದ ಜಾಗತಿಕ ವ್ಯವಹಾರಗಳ ಮುಖ್ಯಸ್ಥ ಜೋಯಲ್‌ ಕಾಪ್ಲನ್‌ ನೇತೃತ್ವದ ಉನ್ನತ ಮಟ್ಟದ ನಿಯೋಗ ಬುಧವಾರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಸ್‌. ಕೃಷ್ಣನ್‌ ಅವರನ್ನು ಭೇಟಿ ಮಾಡಿತ್ತು.

ಸುಮಾರು 45 ನಿಮಿಷಗಳ ಕಾಲ ನಡೆದ ಸಭೆಯಲ್ಲಿ ಪ್ರಧಾನಿ ಮೋದಿ ಅವರ ಫೇಸ್‌ಬುಕ್‌ ವಿಡಿಯೊ ತಪ್ಪಾಗಿ ತೆಗೆದುಹಾಕಲ್ಪಟ್ಟ ಘಟನೆ ಕುರಿತು ಮೆಟಾ ಅಧಿಕಾರಿಗಳು ವಿವರ ನೀಡಿದ್ದರು.

ಇದೇ ವೇಳೆ, ಮೆಟಾ ವೇದಿಕೆಗಳಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಜಾಹೀರಾತುಗಳು (CSEAM) ಪ್ರಚಾರಗೊಂಡಿರುವ ಆರೋಪಗಳ ಕುರಿತೂ ತನಿಖೆ ಮುಂದುವರಿದಿದೆ.

ಕಂಪನಿಯು ಅಕ್ರಮ ಕಂಟೆಂಟ್‌ ಪ್ರಸಾರವಾಗಿರುವುದನ್ನು ಒಪ್ಪಿಕೊಂಡಿದ್ದು, ಹಣ ಪಾವತಿಸಿ ನಿರ್ದಿಷ್ಟ ಬಳಕೆದಾರರನ್ನು ಗುರಿಯಾಗಿಸಿಕೊಂಡು ಜಾಹೀರಾತುಗಳನ್ನು ಪ್ರದರ್ಶಿಸಲಾಗಿತ್ತು ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಈ ವಿಚಾರವಾಗಿ ಮತ್ತೊಮ್ಮೆ ಮೆಟಾ ಅಧಿಕಾರಿಗಳನ್ನು ವಿಚಾರಣೆಗೆ ಕರೆಯುವ ಸಾಧ್ಯತೆಯಿದೆ.

ಈ ವಿವಾದ ಸಂಸತ್ತಿನ ಗಮನವನ್ನೂ ಸೆಳೆದಿದೆ. ಪ್ರಧಾನಿ ಮೋದಿ ಅವರ ವಿಡಿಯೊ ತೆಗೆದುಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದೀಯ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸ್ಥಾಯಿ ಸಮಿತಿಯು ಮೆಟಾ ಸಿಇಒ ಮಾರ್ಕ್‌ ಜುಕರ್‌ಬರ್ಗ್‌ ಅವರಿಂದ ಬೇಷರತ್ ಕ್ಷಮೆಯಾಚನೆ ಕೋರಿದ್ದು, ಗಂಭೀರ ಉಲ್ಲಂಘನೆಗಳು ಸಾಬೀತಾದರೆ ಭಾರತದಲ್ಲಿ ಮೆಟಾಗೆ ಇರುವ ಕಾನೂನು ರಕ್ಷಣೆ (Legal Immunity) ಹಿಂಪಡೆಯುವ ಎಚ್ಚರಿಕೆಯನ್ನೂ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಭಾರತದ ಕಾನೂನು ಪಾಲಿಸುತ್ತಿದ್ದೀರಾ?': Metaಗೆ ಖಡಕ್ ಕ್ಲಾಸ್‌ ತೆಗೆದುಕೊಂಡ ಕೇಂದ್ರ ಸರ್ಕಾರ, ತೀವ್ರ ವಿಚಾರಣೆ

ಸಂಪುಟ ವಿಸ್ತರಣೆ ಕಿಚ್ಚು; 'ಕೈ' ಪಾಳಯದಲ್ಲಿ ಹೈ ಡ್ರಾಮಾ: ಡ್ಯಾಮೇಜ್ ಕಂಟ್ರೋಲ್‌ಗೆ ಸುರ್ಜೇವಾಲಾ ಎಂಟ್ರಿ..!

18 ಅಡಿ ಬಾವಿಯಲ್ಲಿ ಸಮುದ್ರದ ರೀತಿ ಅಲೆ...! ಗುಜರಾತ್‌ನಲ್ಲಿ ಬೆರಗು ಮೂಡಿಸಿದ ವಿಚಿತ್ರ ವಿದ್ಯಮಾನ; ಭೂಮಿಯೊಳಗೆ ನಡೆಯುತ್ತಿರುವುದೇನು? Video

'Real estate mafia ಲಾಭಕ್ಕಾಗಿ ಬಿಡದಿ ಯೋಜನೆ'; ಸರ್ಕಾರದ ವಿರುದ್ಧ BJP-JDS ವಾಗ್ದಾಳಿ, ಜಂಟಿ ಪಾದಯಾತ್ರೆಗೆ ಮುಂದು..!

ಒಂದಲ್ಲ, 5 ಪೊಲೀಸ್‌ ಆಯುಕ್ತಾಲಯಗಳು; ಬೆಂಗಳೂರು ಪೊಲೀಸ್‌ ವ್ಯವಸ್ಥೆಗೆ ಮೇಜರ್‌ ಸರ್ಜರಿ; ಆ.15ರಂದು ಡಿಕೆ.ಶಿವಕುಮಾರ್ ಮಹತ್ವದ ಘೋಷಣೆ..?