ಹೈದರಾಬಾದ್‌ನ NALSAR ಕಾನೂನು ವಿಶ್ವವಿದ್ಯಾಲಯದ 2026 ರ ಪದವಿ ಬ್ಯಾಚ್ ಅನ್ನು ವಕೀಲರಾಗಿ ನೋಂದಾಯಿಸಿಕೊಳ್ಳುವುದನ್ನು ರಾಜ್ಯ ಬಾರ್ ಕೌನ್ಸಿಲ್‌ಗಳು ನಿಷೇಧಿಸುವ ಆದೇಶಕ್ಕಾಗಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಶನಿವಾರ ಕಾನೂನು ವಿದ್ಯಾರ್ಥಿಗಳಲ್ಲಿ ಕ್ಷಮೆಯಾಚಿಸಿದ್ದಾರೆ.
ನಿಷೇಧದ ಆದೇಶವನ್ನು ರಾಜ್ಯ ಬಾರ್ ಕೌನ್ಸಿಲ್ ಗಳು ಈಗ ಹಿಂಪಡೆದಿವೆ. ಕಾನೂನು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ, ವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ಮಾತುಗಳು ಅಥವಾ ಪತ್ರವು ಅವರ ಭಾವನೆಗಳಿಗೆ ನೋವುಂಟುಮಾಡಿದ್ದರೆ "ಪ್ರಾಮಾಣಿಕವಾಗಿ" ವಿಷಾದಿಸುತ್ತೇನೆ ಮತ್ತು ಕ್ಷಮೆಯಾಚಿಸುತ್ತೇನೆ ಎಂದು ಮಿಶ್ರಾ ಹೇಳಿದ್ದಾರೆ. ಈ ವಿಷಯವನ್ನು ಸ್ವತಂತ್ರವಾಗಿ ನಿರ್ಣಯಿಸಲು ಮತ್ತು ಅವರ ಘಟಿಕೋತ್ಸವಕ್ಕೆ ಹಾಜರಾಗಬೇಕೆ ಎಂದು ಸ್ವತಃ ನಿರ್ಧರಿಸಲು ಅವರು ವಿದ್ಯಾರ್ಥಿಗಳನ್ನು ಒತ್ತಾಯಿಸಿದರು.
ಹೈದರಾಬಾದ್‌ನ ರಾಷ್ಟ್ರೀಯ ಕಾನೂನು ಅಧ್ಯಯನ ಮತ್ತು ಸಂಶೋಧನಾ ಅಕಾಡೆಮಿ (NALSAR) ವಿಶ್ವವಿದ್ಯಾಲಯದಲ್ಲಿ ಘಟಿಕೋತ್ಸವಕ್ಕೆ ಸಿಜೆಐ ಸೂರ್ಯಕಾಂತ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಆದರೆ ಈ ಕ್ರಮವನ್ನು ವಿಶ್ವವಿದ್ಯಾಲಯದಿಂದ ಉತ್ತೀರ್ಣರಾಗುತ್ತಿರುವ ವಿದ್ಯಾರ್ಥಿಗಳ ಗುಂಪೊಂದು ವಿರೋಧಿಸಿದ ಬಳಿಕ ವಿವಾದ ಭುಗಿಲೆದ್ದಿತ್ತು.
ವಿಶ್ವವಿದ್ಯಾನಿಲಯ ಆಡಳಿತ ಮಂಡಳಿಗೆ ಕಳುಹಿಸಿದ ವಿದ್ಯಾರ್ಥಿಗಳ ಪತ್ರದಲ್ಲಿ, ಯುವಕರನ್ನು ಪರಾವಲಂಬಿಗಳು (ಜಿರಳೆ)ಗಳೆಂದು ಕರೆಯುವುದರಿಂದ ಹಿಡಿದು ಪೊಲೀಸ್ ದೌರ್ಜನ್ಯದ ವೀಡಿಯೊಗಳನ್ನು ವೀಕ್ಷಿಸಲು ಸಮಯವಿಲ್ಲ ಎಂಬಂತಹ ಅಸಂವೇದನಾಶೀಲ ಹೇಳಿಕೆಗಳನ್ನು ನೀಡುವವರೆಗೆ, ಸಿಜೆಐ ನಮ್ಮಂತಹ ವಿದ್ಯಾರ್ಥಿಗಳ ಬಗ್ಗೆ ಅಸಡ್ಡೆ ತೋರಿಸಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರನ್ನು ನಮ್ಮ ಕಾಲೇಜಿಗೆ ಆಹ್ವಾನಿಸುವುದು ಮತ್ತು ಶೈಕ್ಷಣಿಕವಾಗಿ ಮತ್ತು ಭಾವನಾತ್ಮಕವಾಗಿ ನಮಗೆ ಬಹಳ ಮುಖ್ಯವಾದ ಪದವಿಗಳನ್ನು ಅವರಿಂದ ಪಡೆಯುವುದು ಸರಿಯಲ್ಲ ಎಂದು ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದರು. ವಿದ್ಯಾರ್ಥಿಗಳ ಈ ಪತ್ರ ತೀವ್ರ ವಿವಾದಕ್ಕೆ ಗುರಿಯಾಗಿ, ಹೈದರಾಬಾದ್ ಮೂಲದ NALSAR ಕಾನೂನು ವಿಶ್ವವಿದ್ಯಾಲಯದ 2026 ರ ಪದವಿ ಬ್ಯಾಚ್‌ಗೆ ದಾಖಲಾತಿ ನೀಡದಂತೆ ಆಗಸ್ಟ್ 13 ರಂದು ರಾಜ್ಯ ಬಾರ್ ಕೌನ್ಸಿಲ್‌ಗಳಿಗೆ BCI ಆದೇಶಿಸಿತ್ತು.
ಬಿಸಿಐ ನ ಕ್ರಮ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಬಿಸಿಐ ವಿದ್ಯಾರ್ಥಿಗಳಿಗೆ ದಾಖಲಾಗಲು ಅವಕಾಶ ಮಾಡಿಕೊಟ್ಟಿತು ಮತ್ತು ನಂತರ ಹೆಚ್ಚಿನ ವಿದ್ಯಾರ್ಥಿಗಳು ನಿರಪರಾಧಿಗಳು ಎಂದು ಹೇಳಿ ವಿಚಾರಣೆಯನ್ನು ಹಿಂತೆಗೆದುಕೊಂಡಿತು.
ಏತನ್ಮಧ್ಯೆ, ಸಿಜೆಐ ಕಾಂತ್ ಬಿಸಿಐ ಆದೇಶವನ್ನು "ಸಂಪೂರ್ಣವಾಗಿ ಅನಗತ್ಯ" ಕ್ರಮ ಎಂದು ಕರೆದರು, ವಿದ್ಯಾರ್ಥಿಗಳ ಪ್ರತಿಭಟನೆಯ ಹಕ್ಕನ್ನು ಎತ್ತಿಹಿಡಿದರು ಮತ್ತು NALSAR ವಿದ್ಯಾರ್ಥಿಗಳು ಅಥವಾ ಅಧ್ಯಾಪಕರ ವಿರುದ್ಧ ದಂಡನಾತ್ಮಕ ಕ್ರಮವನ್ನು ನಿಷೇಧಿಸಿದರು.