ಚಂಡೀಗಢ: ಅಮೃತಸರ ಗ್ರಾಮೀಣ ಪೊಲೀಸರು ಭಾನುವಾರ ಪೊಲೀಸ್ ಠಾಣೆಯನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿದ್ದ ಭಯೋತ್ಪಾದಕರ ಸಂಚನ್ನು ವಿಫಲಗೊಳಿಸಿರುವುದಾಗಿ ಹೇಳಿದ್ದಾರೆ.
ಪೊಲೀಸ್ ಕಾರ್ಯಾಚರಣೆ ವೇಳೆ 690 ಗ್ರಾಂ ತೂಕದ ಐಇಡಿ ಹಾಗೂ ಎಲೆಕ್ಟ್ರಾನಿಕ್ ಡಿಟೋನೇಟರ್ ಪತ್ತೆಯಾಗಿದೆ.
"ಅಮೃತಸರ ಗ್ರಾಮೀಣ ಪೊಲೀಸರು ಪೊಲೀಸ್ ಠಾಣೆಯನ್ನು ಗುರಿಯಾಗಿಸಿಕೊಂಡು ನಡೆಸಲಾಗಿದ್ದ ಭಯೋತ್ಪಾದಕರ ಸಂಚನ್ನು ತಪ್ಪಿಸಿದ್ದಾರೆ ಮತ್ತು 690 ಗ್ರಾಂ ತೂಕದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಜೊತೆಗೆ ಎಲೆಕ್ಟ್ರಾನಿಕ್ ಡಿಟೋನೇಟರ್, ಬ್ಯಾಟರಿ, ಟೈಮರ್ ಮತ್ತು ಕಬ್ಬಿಣದ ಪೆಟ್ಟಿಗೆಯನ್ನು ವಶಪಡಿಸಿಕೊಂಡಿದ್ದಾರೆ" ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
"ವಶಪಡಿಸಿಕೊಂಡ ನಂತರ, ಸ್ಫೋಟಕ ವಸ್ತುವನ್ನು ಸ್ಥಾಪಿತ ಭದ್ರತಾ ಪ್ರೋಟೋಕಾಲ್‌ಗಳ ಪ್ರಕಾರ ನಿರ್ವಹಿಸಲಾಗಿದೆ ಮತ್ತು ಬಾಂಬ್ ನಿಷ್ಕ್ರಿಯ ದಳವು ಅದನ್ನು ನಿಷ್ಕ್ರಿಯಗೊಳಿಸಿತು" ಎಂದು ಗೌರವ್ ಯಾದವ್ ಹೇಳಿದ್ದಾರೆ.
ಅಮೃತಸರ ಗ್ರಾಮೀಣ ಪೊಲೀಸರು ರಾಷ್ಟ್ರವಿರೋಧಿ ಅಂಶಗಳ ಯೋಜನೆಯನ್ನು ವಿಫಲಗೊಳಿಸಿದ್ದಾರೆ ಮತ್ತು ಸಾರ್ವಜನಿಕ ಸುರಕ್ಷತೆಗೆ ಸಂಭಾವ್ಯ ಅಪಾಯವನ್ನು ತಪ್ಪಿಸಿದ್ದಾರೆ ಎಂದು ಅವರು ಹೇಳಿದರು.