ವಿನೋದ್ ಪನ್ನುಗೆ ಗುಂಡಿಕ್ಕಿ ಹತ್ಯೆ 
ದೇಶ

ಹಿಸಾರ್ ಜಿಲ್ಲಾ ನ್ಯಾಯಾಲಯದ ಹೊರಗೆ ಗ್ಯಾಂಗ್‌ಸ್ಟರ್ ವಿನೋದ್ ಪನ್ನುಗೆ ಗುಂಡಿಕ್ಕಿ ಹತ್ಯೆ

ಗುರುವಾರ ಮಧ್ಯಾಹ್ನ ಜಿಲ್ಲಾ ನ್ಯಾಯಾಲಯದ ಸಂಕೀರ್ಣದ ಮುಖ್ಯ ದ್ವಾರದಲ್ಲಿ ಗ್ಯಾಂಗ್‌ಸ್ಟರ್ ವಿನೋದ್ ಪನ್ನು ಅಲಿಯಾಸ್ ಕಾನಾ ಎಂಬಾತನ ಮೇಲೆ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಸಾರ್: ಗುರುವಾರ ಮಧ್ಯಾಹ್ನ ಜಿಲ್ಲಾ ನ್ಯಾಯಾಲಯದ ಸಂಕೀರ್ಣದ ಮುಖ್ಯ ದ್ವಾರದಲ್ಲಿ ಗ್ಯಾಂಗ್‌ಸ್ಟರ್ ವಿನೋದ್ ಪನ್ನು ಅಲಿಯಾಸ್ ಕಾನಾ ಎಂಬಾತನ ಮೇಲೆ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ನ್ಯಾಯಾಲಯದ ವಿಚಾರಣೆಯ ನಂತರ ಪನ್ನು ತನ್ನ ಸಹಚರರೊಂದಿಗೆ ಸಂಕೀರ್ಣದಿಂದ ಹೊರಬರುತ್ತಿದ್ದಾಗ ಆತನ ಮೇಲೆ ದಾಳಿ ನಡೆಸಲಾಗಿದೆ. ಹೊಂಚು ಹಾಕಿದ್ದ ಇಬ್ಬರು ದುಷ್ಕರ್ಮಿಗಳು ನ್ಯಾಯಾಲಯದ ದ್ವಾರದಲ್ಲಿ ಪನ್ನುವನ್ನು ಗುರಿಯಾಗಿಸಿಕೊಂಡು ಸತತ 10 ಗುಂಡುಗಳನ್ನು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ನಂತರ, ಸ್ಥಳದಲ್ಲಿ ದೊಡ್ಡ ಪೊಲೀಸ್ ಪಡೆ ನಿಯೋಜಿಸಲಾಗಿದ್ದು, ಪ್ರದೇಶವನ್ನು ಸುತ್ತುವರೆದಿದೆ. ಪನ್ನು ಹಿಸಾರ್ ಜಿಲ್ಲೆಯ ತುರಾನಾ ಗ್ರಾಮದ ನಿವಾಸಿಯಾಗಿದ್ದು ಆತನ ವಿರುದ್ಧ ಕೊಲೆ ಸೇರಿದಂತೆ 31 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದೆ. ಆತನ ಅಪರಾಧ ಚಟುವಟಿಕೆಗಳು ದೆಹಲಿ-ಎನ್‌ಸಿಆರ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಹರಡಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Southern Zonal Council meet: ಜಲ ವಿವಾದಗಳ ಕುರಿತು ಮಾತುಕತೆಗೆ ಅಮಿತ್ ಶಾ ಕರೆಗೆ ರಾಜ್ಯಗಳ ಬೆಂಬಲ

ಎಲ್ಲರಿಗೂ ಕಾನೂನು ಒಂದೇ: ಅನುಮತಿ ಇಲ್ಲದೆ ತಮ್ಮ ಪೋಸ್ಟರ್‌ ಅಂಟಿಸಿದ್ದಕ್ಕೆ ಮೂರು FIR ದಾಖಲು!

'ಬಾಹುಬಲಿ'ಗೆ ಏನಾಯಿತು?: ಪ್ರಭಾಸ್ ಆರೋಗ್ಯದ ಬಗ್ಗೆ ಅಭಿಮಾನಿಗಳಲ್ಲಿ ತೀವ್ರ ಆತಂಕ!

ಕೇಂದ್ರದಿಂದ ಮಹತ್ವದ ನಿರ್ಧಾರ: ಲಡಾಖ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ಪೀಠ ಸ್ಥಾಪನೆ

J&K ಭಾರತದ ಅವಿಭಾಜ್ಯ ಅಂಗ: ಅಮೆರಿಕ ರಾಯಭಾರಿಗೆ ಪಾಕ್ ಸಮನ್ಸ್; ಅದು ಅವರ ವಿಷಯ- ಸಿಎಂ ಒಮರ್ ಅಬ್ದುಲ್ಲಾ