ಸುಪ್ರೀಂ ಕೋರ್ಟ್ Online Desk
ದೇಶ

ನಾಲ್ಕು ಗೋಡೆಗಳ ನಡುವೆ ನಡೆದ ಜಗಳ SC/ST ಕಾಯ್ದೆಯಡಿ ಅಪರಾಧವಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ನಾಲ್ಕು ಗೋಡೆಗಳ ನಡುವೆ ನಡೆದ ಜಗಳ ಕಾನೂನಿನ ದೃಷ್ಟಿಯಲ್ಲಿ ಅಪರಾಧವಾಗುತ್ತದೆಯಾ? ಸಾರ್ವಜನಿಕರ ಕಣ್ಣಿಗೆ ಕಾಣದಂತೆ ನಡೆದ ನಿಂದನೆಗೆ ಜಾತಿ ದೌರ್ಜನ್ಯ ಕಾಯ್ದೆ ಅನ್ವಯಿಸುತ್ತದೆಯಾ? ಈ ಗೊಂದಲಗಳಿಗೆ ತೆರೆ ಎಳೆದಿರುವ ಸುಪ್ರೀಂ ಕೋರ್ಟ್ ಅತ್ಯಂತ ಮಹತ್ವದ ತೀರ್ಪೊಂದನ್ನು ನೀಡಿದೆ. ಆ ಕುರಿತ ವರದಿ ಇಲ್ಲಿದೆ:

ನವದೆಹಲಿ: ಸ್ವಾತಂತ್ರ್ಯ ಬಂದು 80 ವರ್ಷವಾದರೂ ಸಹ ದೇಶದಲ್ಲಿ ಜಾತಿ ಆಧಾರಿತ ನಿಂದನೆಗಳು ಸಾಮಾನ್ಯವಾಗಿದೆ. ನಮ್ಮ ದೇಶದಲ್ಲಿ ಜಾತಿ ನಿಂದನೆಗೆ ಅದರಲ್ಲೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಜನರಿಗೆ ಜಾತಿ ನಿಂದನೆಯಾದರೆ ಎಸ್‌ಸಿ ಮತ್ತು ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅನ್ವಯವಾಗುತ್ತದೆ. ಆದರೆ, ಕೆಲವೊಮ್ಮೆ ಈ ಕಾಯಿದೆ ಮಿಸ್ ಯೂಸ್ ಆಗುತ್ತಿದೆ ಎನ್ನುವ ಆರೋಪಗಳು ಕೇಳಿಬರುತ್ತದೆ. ಇದರ ನಡುವೆಯೇ, ದೇಶದ ಸರ್ವೋಚ್ಚ ನ್ಯಾಯಾಲಯವು, ನಾಲ್ಕು ಗೋಡೆಗಳ ಮಧ್ಯೆ ಅಥವಾ ಖಾಸಗಿ ಸ್ಥಳದಲ್ಲಿ ನಡೆಸುವ ಜಾತಿ ನಿಂದನೆಯು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಅಪರಾಧವಾಗುವುದಿಲ್ಲ ಎಂದು ಐತಿಹಾಸಿಕ ತೀರ್ಪು ನೀಡಿದೆ. ಆ ಕುರಿತ ವರದಿ ಇಲ್ಲಿದೆ:

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಸುಪ್ರೀಂ ಕೋರ್ಟ್ ಪೀಠವು, ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 3(1)(r) ಮತ್ತು 3(1)(s) ಅಡಿಯಲ್ಲಿ ಪ್ರಕರಣ ದಾಖಲಾಗಲು ನಡೆದ ಘಟನೆಯನ್ನು ಸಾರ್ವಜನಿಕರು ನೋಡಿರಬೇಕು ಅಥವಾ ಕೇಳಿಸಿಕೊಂಡಿರಬೇಕು. ಅದರಂತೆ, ನಾಲ್ಕು ಗೋಡೆಗಳ ಮಧ್ಯೆ ಅಥವಾ ಸಾರ್ವಜನಿಕರ ಪ್ರವೇಶವಿಲ್ಲದ ಖಾಸಗಿ ಜಾಗದಲ್ಲಿ ಜಾತಿ ನಿಂದನೆ ನಡೆದರೆ, ಅಲ್ಲಿ ಸಾರ್ವಜನಿಕ ಸಾಕ್ಷಿಗಳು ಇಲ್ಲದ ಕಾರಣ ಈ ಕಾಯ್ದೆ ಅನ್ವಯಿಸುವುದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಅದರಲ್ಲೂ, ಒಬ್ಬ ವ್ಯಕ್ತಿಯು ಎಸ್‌ಸಿ ಅಥವಾ ಎಸ್‌ಟಿ ಸಮುದಾಯಕ್ಕೆ ಸೇರಿದವನು ಎಂಬ ಒಂದೇ ಕಾರಣಕ್ಕೆ, ಅವನನ್ನು ಅವಮಾನಿಸುವ ಉದ್ದೇಶದಿಂದಲೇ ಜಾತಿ ನಿಂದನೆ ಮಾಡಿದ್ದರೆ ಮಾತ್ರ ಈ ಕಾಯ್ದೆ ಅನ್ವಯವಾಗುತ್ತದೆ. ಕೇವಲ ವೈಯಕ್ತಿಕ ಗಲಾಟೆಯಲ್ಲಿ ಬೈದಾಡಿಕೊಂಡರೆ ಈ ಕಾಯ್ದೆ ತರಲು ಬರುವುದಿಲ್ಲ ಎಂದು ತಿಳಿಸಿದೆ.

ತೀರ್ಪಿಗೆ ಕಾರಣವಾದ ಪ್ರಕರಣವೇನು?

ಜನವರಿ 24, 2020 ರಂದು, ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳ ನಡುವೆ ನಡೆದ ಜಗಳದಲ್ಲಿ ಮಗ ಗಾಯಗೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಯ ತಂದೆಯೊಬ್ಬರು ಶಾಲೆಯ ಮ್ಯಾನೇಜರ್ ಅವರನ್ನು ಭೇಟಿ ಮಾಡಲು ಹೋಗಿದ್ದರು. ಈ ವೇಳೆ ಮ್ಯಾನೇಜರ್ ಹಾಗೂ ಸಿಬ್ಬಂದಿ ತನ್ನ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿತ್ತು. ಇದರ ಆಧಾರದಲ್ಲಿ ಹಲ್ಲೆ ಹಾಗೂ ಎಸ್‌ಸಿ-ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿತ್ತು. ಆದರೆ, ಈ ಪ್ರಕರಣವನ್ನು ರದ್ದು ಮಾಡಲು ಅಲಹಾಬಾದ್ ಹೈಕೋರ್ಟ್ ನಿರಾಕರಿಸಿತ್ತು. ಅದನ್ನು ಪ್ರಶ್ನಿಸಿ ಆರೋಪಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅದರಂತೆ, ಸುಪ್ರೀಂ ಕೋರ್ಟ್ ಪ್ರಕರಣದ ತನಿಖಾ ವರದಿಯನ್ನು ಪರಿಶೀಲಿಸಿತು. ಘಟನೆ ನಡೆದಾಗ ಆ ಮುಚ್ಚಿದ ಕೋಣೆಯೊಳಗೆ ಯಾವುದೇ ಸಾರ್ವಜನಿಕರು ಇರಲಿಲ್ಲ ಮತ್ತು ಹೊರಗಿದ್ದ ಯಾರಿಗೂ ಆ ಮಾತುಗಳು ಕೇಳಿಸಿಲ್ಲ ಎಂಬುದು ಸಾಬೀತಾಯಿತು. ಹಾಗಾಗಿ, ಸಾರ್ವಜನಿಕ ನೋಟದ ನಿಯಮ ಇಲ್ಲಿ ಉಲ್ಲಂಘನೆಯಾಗಿರುವುದರಿಂದ, ಆರೋಪಿ ಮೇಲಿದ್ದ ಎಸ್‌ಸಿ/ಎಸ್‌ಟಿ ಕಾಯ್ದೆಯ ದೂರುಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತು.

ಮುಂದುವರೆದು, ಖಾಸಗಿ ಜಾಗದಲ್ಲಿ ಜಾತಿ ನಿಂದನೆ ಮಾಡಿದರೆ ಎಸ್‌ಸಿ/ಎಸ್‌ಟಿ ಕಾಯ್ದೆ ಅನ್ವಯಿಸುವುದಿಲ್ಲ ಅಷ್ಟೇ. ಆದರೆ ಖಾಸಗಿ ಜಾಗದಲ್ಲಿ ಗಲಾಟೆ ಮಾಡಿ, ನಿಂದಿಸಿ, ಹಲ್ಲೆ ನಡೆಸಿದ್ದರೆ ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಸಾಮಾನ್ಯ ಕ್ರಿಮಿನಲ್ ಪ್ರಕರಣಗಳು ಮುಂದುವರಿಯುತ್ತವೆ ಮತ್ತು ಶಿಕ್ಷೆಯೂ ಆಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಆರ್ಥಿಕ ದಿಗ್ಬಂಧನಕ್ಕೆ ಕೆಂಡಾಮಂಡಲ: ಅಮೆರಿಕಕ್ಕೆ ಸಾಥ್ ನೀಡುವ ದೇಶಗಳೂ ನಮಗೆ ಶತ್ರುಗಳೇ; ಇರಾನ್ ಕಠಿಣ ಎಚ್ಚರಿಕೆ

ಪಾರದೀಪ್ ಕರಾವಳಿಯಲ್ಲಿ ಭೀಕರ ದುರಂತ: 72,100 ಟನ್ ಕಬ್ಬಿಣದ ಅದಿರು ಹೊತ್ತಿದ್ದ Panama ಹಡಗು ಮುಳುಗಡೆ; ಇಬ್ಬರ ರಕ್ಷಣೆ, 22 ಮಂದಿ ನಾಪತ್ತೆ..!

Toxic pre-release: ಒಬ್ಬ ವ್ಯಕ್ತಿ ಎಲ್ಲಿಂದ ಬಂದವರು ಎಂಬುದು ಮುಖ್ಯವಲ್ಲ, ಪ್ರತಿಭೆ, ಉತ್ತಮ ಕೆಲಸಕ್ಕೆ ಯಾವಾಗಲೂ ಮನ್ನಣೆ: ಯಶ್ ಭಾಷಣಕ್ಕೆ ಅಭಿಮಾನಿಗಳು, ಶಾಸಕ ಮಲ್ಲಾರೆಡ್ಡಿ ಫಿದಾ!Video

Hormuz ಮೇಲೆ ಅಮೆರಿಕಾ ಕಣ್ಣು: ‘‘NEW US Territory’’ ಎಂದು ಮತ್ತೆ ನಕ್ಷೆ ಪೋಸ್ಟ್ ಮಾಡಿದ ಟ್ರಂಪ್, ಇರಾನ್ ಕೆಂಡಾಮಂಡಲ..!

KSRTC ಬಸ್ಸಿನಲ್ಲಿ ಯುವತಿ ಜೊತೆ ಯುವಕನ ಅನುಚಿತ ವರ್ತನೆ: ಸಾರ್ವಜನಿಕರಿಂದ ಧರ್ಮದೇಟು!