Social Mediaದಲ್ಲಿ Photoಹಾಕುವ ಮುನ್ನ ಹುಷಾರ್ AI Image
ದೇಶ

Social Mediaದಲ್ಲಿ Photo ಹಾಕುವ ಮುನ್ನ ಹುಷಾರ್: ದೆಹಲಿ ಯುವತಿಗೆ AI ಅಶ್ಲೀಲ ಚಿತ್ರ ಸೃಷ್ಟಿ, ಲಕ್ಷಾಂತರ ರೂ ವಂಚನೆ! 2 ವರ್ಷ ಬ್ಲ್ಯಾಕ್‌ಮೇಲ್ ಮಾಡಿದ ಕಿರಾತಕ ಅರೆಸ್ಟ್

ದೆಹಲಿ ಪೊಲೀಸರು ಅಪ್ರಾಪ್ತ ಬಾಲಕಿಯ ಫೋಟೋವನ್ನು AI ಬಳಸಿ ಅಶ್ಲೀಲವಾಗಿ ಮಾರ್ಪಡಿಸಿ, ಆಕೆಯಿಂದ ₹1.2 ಲಕ್ಷ ಹಣ ವಸೂಲಿ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ 25 ವರ್ಷದ ಯುವಕನನ್ನು ಬಂಧಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್ ಮತ್ತು ಕಮೆಂಟ್‌ಗಳಿಗಾಗಿ ಸುಂದರ ಫೋಟೋಗಳನ್ನು ಪೋಸ್ಟ್ ಮಾಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಅಭ್ಯಾಸವಾಗಿದೆ. ಆದರೆ ನೀವು ಮುಗ್ಧತೆಯಿಂದ ಹಂಚಿಕೊಳ್ಳುವ ಒಂದೇ ಒಂದು ಚಿತ್ರ ನಿಮ್ಮ ಜೀವನವನ್ನೇ ನರಕವಾಗಿಸಬಹುದು ಅಂತ ಯಾವತ್ತಾದರೂ ಯೋಚಿಸಿದ್ದೀರಾ? ದೆಹಲಿಯಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿರುವ ಆಘಾತಕಾರಿ ಘಟನೆಯೊಂದು ಸಾಮಾಜಿಕ ಜಲತಾಣದಲ್ಲಿ ಬಳಸುವ ಪ್ರತಿಯೊಬ್ಬರಿಗೂ ಎಚ್ಚರಿಕೆಯ ಗಂಟೆ ಬಾರಿಸಿದೆ. ಕೃತಕ ಬುದ್ಧಿಮತ್ತೆ (AI) ದುರ್ಬಳಕೆ ಮಾಡಿಕೊಂಡು ಯುವತಿಯೊಬ್ಬಳನ್ನು ಬರೋಬ್ಬರಿ ಎರಡು ವರ್ಷಗಳ ಕಾಲ ಬೆದರಿಸಿ, ಬ್ಲ್ಯಾಕ್‌ಮೇಲ್ ಮಾಡಿದ ಭಯಾನಕ ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ.

ಏನಿದು ಘಟನೆ?

ಉತ್ತರ ಪ್ರದೇಶದ ಅಂಬೇಡ್ಕರ್ ನಗರದ ನಿವಾಸಿಯಾದ 25 ವರ್ಷದ ಅಜಯ್ ದುಬೆ ಎಂಬಾತ, ಸಂತ್ರಸ್ತ ಯುವತಿಯು ಅಪ್ರಾಪ್ತ ವಯಸ್ಕಳಾಗಿದ್ದಾಗ (ಡಿಸೆಂಬರ್ 2023 ರಲ್ಲಿ)  ಸಾಮಾಜಿಕ ಜಾಲತಾಣದ ಮೂಲಕ ಆಕೆಗೆ ಪರಿಚಯವಾಗಿದ್ದನು.  ನಂತರದ ದಿನಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿದ್ದ ಆಕೆಯ ಚಿತ್ರವನ್ನು ಬಳಿಸಿ ಈತ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಮೂಲಕ ಅಶ್ಲೀಲವಾಗಿ ಮಾರ್ಪಡಿಸಿ, ಆಕೆಯಿಂದ ಸಾವಿರರು ರೂಪಾಯಿ ಹಣ ವಸೂಲಿ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ  ಪ್ರಕರಣದಲ್ಲಿ  ದೆಹಲಿ ಪೊಲೀಸರು. ಇನ್ನು, ಬಂಧಿತನು ಕಳೆದ ಎರಡು ವರ್ಷಗಳಿಗೂ ಹೆಚ್ಚು ಕಾಲ ಯುವತಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ಲಕ್ಷಕ್ಕೂ ಅಧಿಕ ಹಣ ವಸೂಲಿ ಮಾಡಿದ ಕಿರಾತಕ

ನಕಲಿ ಫೋಟೋಗಳನ್ನು ಸೃಷ್ಟಿಸಿದ ನಂತರ ಆರೋಪಿಯು ಬಾಲಕಿಗೆ ಬ್ಲ್ಯಾಕ್‌ಮೇಲ್ ಮಾಡಲು ಶುರುಮಾಡಿದ್ದನು. ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವುದಾಗಿ ಹೆದರಿಸಿದ್ದಾನೆ. ಇದರಿಂದ ಭಯಭೀಳಾದ ಬಾಲಕಿಯು ತನ್ನ ಪೋಷಕರಿಗೆ ತಿಳಿಯದಂತೆ ವಿವಿಧ ಹಂತಗಳಲ್ಲಿ ಒಟ್ಟು ₹1.2 ಲಕ್ಷ ರೂಪಾಯಿಗಳಿಗೂ ಅಧಿಕ ಹಣವನ್ನು ಆರೋಪಿಯ ಖಾತೆಗೆ ವರ್ಗಾವಣೆ ಮಾಡಿದ್ದಳು. ಇನ್ನು, ಭಯದಿಂದ ಕಂಗೆಟ್ಟ ಬಾಲಕಿ ಎರಡು ವರ್ಷಗಳ ಕಾಲ ಈ ನರಕಯಾತನೆಯನ್ನು ಮೌನವಾಗಿಯೇ ಅನುಭವಿಸಿದಳು. ಇತ್ತೀಚೆಗೆ ಆತ ಬಾಲಕಿಯ ಕುಟುಂಬ ಸದಸ್ಯರಿಗೂ ಕರೆ ಮಾಡಿ ಬೆದರಿಕೆ ಹಾಕಲು ಆರಂಭಿಸಿದಲ್ಲದೆ, ಮಾತನ್ನು ಕೇಳದಿದ್ದರೆ ಆಸಿಡ್ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದನು.

ಕೊನೆಗೆ ಧೈರ್ಯ ತಂದುಕೊಂಡ ಯುವತಿ ದೆಹಲಿಯ ಮೋಹನ್ ಗಾರ್ಡನ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದಳು. ಪೊಲೀಸರು ತಕ್ಷಣ ಕ್ರಮ ಕೈಗೊಂಡು ಆರೋಪಿ ಅಜಯ್ ದುಬೆಯನ್ನು ಪೋಕ್ಸೋ ಹಾಗೂ ಸುಲಿಗೆ ಕಾಯ್ದೆಗಳ ಅಡಿಯಲ್ಲಿ ಬಂಧಿಸಿದ್ದಾರೆ. ಅದರಲ್ಲೂ, ಬಂಧನದ ವೇಳೆ, ಆರೋಪಿಯ ಮೊಬೈಲ್ ಲೊಕೇಶನ್ ಟ್ರ್ಯಾಕ್ ಮಾಡಿದ ದೆಹಲಿ ಪೊಲೀಸರು, ಆತ ಬೇರೊಂದು ಹಳೆಯ ಪ್ರಕರಣದ ವಿಚಾರಣೆಗಾಗಿ ದೆಹಲಿ ನ್ಯಾಯಾಲಯಕ್ಕೆ ಬಂದಿದ್ದಾಗಲೇ ಕೈಗೆ ಬೇಡಿ ಹಾಕಿದ್ದಾರೆ. ಏತನ್ಮಧ್ಯೆ, ಈತನ ವಿರುದ್ಧ ಈ ಹಿಂದೆಯೂ ಕೊಲೆ ಯತ್ನ ಸೇರಿದಂತೆ ಹಲವು ಅಪರಾಧ ಪ್ರಕರಣಗಳು ದಾಖಲಾಗಿರುವುದು ತನಿಖೆಯಲ್ಲಿ ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯದಲ್ಲಿ ಮಳೆ ಅಭಾವ: ನಾಲ್ಕು ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ; 27 ಕೋಟಿ ರೂ ವೆಚ್ಚ- ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

ಭಾರತದಲ್ಲಿ ಫುಡ್‌ ಕಂಪನಿಗಳ ಲಾಬಿ: ಚಿಪ್ಸ್ ಮತ್ತು ಕೂಲ್ ಡ್ರಿಂಕ್ಸ್ ಮೇಲೆ ‘ರೆಡ್‌ ಅಲರ್ಟ್’ ಪ್ರಸ್ತಾವ ಕೈಬಿಟ್ಟ FSSAI, ಆಗಿದ್ದೇನು?

'ಬ್ರೋ, ನೀವು ಸುಮ್ಮನೆ ಸಮಯ ವ್ಯರ್ಥ ಮಾಡುತ್ತಿದ್ದೀರಿ': ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ನಾಯಕನ ಕಾಲೆಳೆದ ಸರ್ಫರಾಜ್ ಖಾನ್!