ಸುಧಾಂಶು ತ್ರಿವೇದಿ, ರಾಹುಲ್ ಗಾಂಧಿ  
ದೇಶ

'ಕಾಂಗ್ರೆಸ್ ದಲಿತ ವಿರೋಧಿ: 'ಶುದ್ಧೀಕರಣ' ವಿವಾದ ಕುರಿತು ರಾಹುಲ್ ಗಾಂಧಿಗೆ ಬಿಜೆಪಿ ತಿರುಗೇಟು!

ಬಿಜೆಪಿ ವಕ್ತಾರರಾದ ಸುಧಾಂಶು ತ್ರಿವೇದಿ ಮತ್ತು ಗುರು ಪ್ರಕಾಶ್ ಪಾಸ್ವಾನ್ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ಆರೋಪ ಮಾಡಿದರು.ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಇಬ್ಬರೂ ದಲಿತ ವಿರೋಧಿ ನಿಲುವು ಹೊಂದಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗುರು ಪ್ರಕಾಶ್ ಪಾಸ್ವಾನ್ ಆರೋಪಿಸಿದರು.

ನವದೆಹಲಿ: ಕಾಂಗ್ರೆಸ್ ದಲಿತ ವಿರೋಧಿ ಪಕ್ಷವೆಂಬ ರಾಹುಲ್ ಗಾಂಧಿ ಅವರ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದ್ದು, ಕಾಂಗ್ರೆಸ್ ಪಕ್ಷ ದಲಿತ ಸಮುದಾಯದ ವಿರುದ್ಧ ತಾರತಮ್ಯ ಎಸಗಿದ ಇತಿಹಾಸವನ್ನು ಹೊಂದಿದೆ ಎಂದು ಆರೋಪಿಸಿದೆ.

ಬಿಜೆಪಿ ವಕ್ತಾರರಾದ ಸುಧಾಂಶು ತ್ರಿವೇದಿ ಮತ್ತು ಗುರು ಪ್ರಕಾಶ್ ಪಾಸ್ವಾನ್ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ಆರೋಪ ಮಾಡಿದರು.ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಇಬ್ಬರೂ ದಲಿತ ವಿರೋಧಿ ನಿಲುವು ಹೊಂದಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗುರು ಪ್ರಕಾಶ್ ಪಾಸ್ವಾನ್ ಆರೋಪಿಸಿದರು.

ವಯನಾಡಿನಲ್ಲಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ ನಡೆಯುತ್ತಿದ್ದಾಗ ಖರ್ಗೆಯವರು ಹೊರಗಿದ್ದರು. ಒಳಗೆ ದಲಿತರಿಗೆ ಸ್ಥಾನವಿರಲಿಲ್ಲವೇ? ನಾರಾಯಣಸ್ವಾಮಿ ಅವರು ರಾಹುಲ್ ಗಾಂಧಿಯವರ ಚಪ್ಪಲಿಯನ್ನು ಎತ್ತಿಕೊಳ್ಳುತ್ತಿದ್ದಾರೆ. ಇದ್ಯಾವ ರೀತಿಯ ಮನಸ್ಥಿತಿ? ಇದನ್ನು ನಾವು ವಿವರಿಸುವ ಅಗತ್ಯವಿಲ್ಲ ಎಂದು ಪಾಸ್ವಾನ್ ಹೇಳಿದರು.

ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ ಮಾತ್ರ ದಲಿತ ಸಮುದಾಯವನ್ನು ನೆನಪಿಸಿಕೊಳ್ಳುತ್ತದೆ ಎಂದು ಆರೋಪಿಸಿದ ಅವರು, ದೇಶವನ್ನು ವಿಭಜಿಸಲು" ಬಯಸುವ ಶಕ್ತಿಗಳ ಪರವಾಗಿ ರಾಹುಲ್ ಗಾಂಧಿ ನಿಂತಿದ್ದಾರೆ ಎಂದು ದೂರಿದರು.

ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರಾಗಲು ಸಾಧ್ಯವಾದರೂ, ಅವರನ್ನು ಯಾಕೆ ಮುಖ್ಯಮಂತ್ರಿಯನ್ನಾಗಿ ಮಾಡಲಿಲ್ಲ ಎಂದೂ ಪಾಸ್ವಾನ್ ಪ್ರಶ್ನಿಸಿದರು. ಅವರು ಎರಡು ವೀಡಿಯೊಗಳನ್ನು ಪ್ರದರ್ಶಿಸಿದರಲ್ಲದೇ, ಸುಳ್ಳುಗಳ ಆಧಾರದ ಮೇಲೆ ನಿರೂಪಣೆಯನ್ನು (narrative) ಸೃಷ್ಟಿಸಲು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು.

"ಈ ವೀಡಿಯೊಗಳನ್ನು ನೋಡಿದ ನಂತರ, ಕಾಂಗ್ರೆಸ್ ಪಕ್ಷ ಮತ್ತು ಅದರ 'ಯುವರಾಜ'ನ ಅಜೆಂಡಾ ಹೇಗೆ ಬಯಲಾಗಿದೆ ಎಂಬುದು ಎಲ್ಲರಿಗೂ ಅರ್ಥವಾಗಿರಬೇಕುಎಂದು ಹೇಳಿದ ಅವರು, ಸಮಾಜವನ್ನು ವಿಭಜಿಸಲು ಬಯಸುವ ಶಕ್ತಿಗಳನ್ನು ಪಕ್ಷವು ಬೆಂಬಲಿಸುತ್ತದೆ ಎಂದು ಆರೋಪಿಸಿದರು.

ವಯನಾಡ್‌ನಲ್ಲಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸಿದ ಸಂದರ್ಭದ ಫೋಟೋವೊಂದನ್ನು ಪಾಸ್ವಾನ್ ಪ್ರದರ್ಶಿಸಿದರು. ರಾಹುಲ್ ಗಾಂಧಿಯವರ ಕುಟುಂಬ ಸದಸ್ಯರು ಒಳಗೆ ಉಪಸ್ಥಿತರಿದ್ದಾಗ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೊರಗಿನಿಂದ ನೋಡುತ್ತಿರುವುದು ಇದರಲ್ಲಿದೆ. "ಒಳಗೆ ದಲಿತರಿಗೆ ಸ್ಥಾನವಿರಲಿಲ್ಲವೇ? ದಲಿತರ ಸ್ಥಾನ ಹೊರಗೇ ಇದೆಯೇ?" ಎಂದು ಪಾಸ್ವಾನ್ ಪ್ರಶ್ನಿಸಿದರು ಹಾಗೂ ಈ ವಿಷಯವನ್ನು ಎತ್ತಲು ರಾಹುಲ್ ಗಾಂಧಿಗೆ ಇರುವ "ನೈತಿಕ ಅಧಿಕಾರ"ದ ಬಗ್ಗೆ ಪ್ರಶ್ನೆ ಎತ್ತಿದರು.

ಇದೇ ವೇಳೆ ಪುದುಚೇರಿಯ ಮಾಜಿ ಮುಖ್ಯಮಂತ್ರಿ ವಿ. ನಾರಾಯಣಸಾಮಿ, ರಾಹುಲ್ ಗಾಂಧಿ ಅವರ ಚಪ್ಪಲಿಗಳನ್ನು ಎತ್ತಿಕೊಳ್ಳುತ್ತಿರುವ ಫೋಟೋವೊಂದನ್ನು ಪ್ರದರ್ಶಿಸಿದರು. ನಾಮಪತ್ರ ಸಲ್ಲಿಕೆಯ ಕೊಠಡಿಯ ಹೊರಗೆ ಖರ್ಗೆ ಅವರು ನಿಂತಿದ್ದಾಗ, ಮಾಜಿ ಮುಖ್ಯಮಂತ್ರಿಯೊಬ್ಬರು ರಾಹುಲ್ ಗಾಂಧಿ ಅವರ ಚಪ್ಪಲಿಗಳನ್ನು ಹೊತ್ತುಕೊಂಡು ಹೋಗುತ್ತಿರುವುದು ಕಂಡುಬಂದಿದ್ದನ್ನು ಉಲ್ಲೇಖಿಸಿದ ಪಾಸ್ವಾನ್, ಕಾಂಗ್ರೆಸ್‌ನ ಮನಸ್ಥಿತಿಯನ್ನು ಪ್ರಶ್ನಿಸಿದರು.

ಕಾಂಗ್ರೆಸ್ ನಾಯಕಿ ಕುಮಾರಿ ಸೆಲ್ಜಾ ಅವರೊಂದಿಗೆ ನಡೆದುಕೊಂಡ ರೀತಿಯ ಬಗ್ಗೆಯೂ ಪಾಸ್ವಾನ್ ಪ್ರಶ್ನೆಗಳನ್ನು ಎತ್ತಿದರು. ರಾಜಕೀಯ ಲಾಭಕ್ಕಾಗಿ ದಲಿತರ ವಿಷಯಗಳನ್ನು ಬಳಸಿಕೊಳ್ಳುತ್ತಿದೆ ಎಂದು ಪಕ್ಷದ ವಿರುದ್ಧ ಆರೋಪಿಸಿದ ಅವರು ಬಾಬು ಜಗಜೀವನ್ ರಾಮ್ ಮತ್ತು ಬಿ.ಆರ್. ಅಂಬೇಡ್ಕರ್ ಸೇರಿದಂತೆ ಕಾಂಗ್ರೆಸ್ ನಾಯಕರನ್ನೂ ಪ್ರಸ್ತಾಪಿಸಿದರು.

ದಲಿತರ ವಿಷಯಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ದಾಖಲೆಯನ್ನು ಪರಿಹರಿಸುವಲ್ಲಿ ವಿಫಲರಾಗಿದ್ದಾರೆ ಮತ್ತು ಪದೇ ಪದೇ ತಮ್ಮ ರಾಜಕೀಯ ವರ್ಚಸ್ಸನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ, ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ ಜಲಪ್ರಳಯ: ಕಠ್ಮಂಡು ತಲುಪಿದ ಭಾರತದ ಪರಿಹಾರ ಸಾಮಗ್ರಿ ಹೊತ್ತ 4ನೇ ವಿಮಾನ, ರಕ್ಷಣಾ ಸಾಧನ–ವಿಧಿವಿಜ್ಞಾನ ತಜ್ಞರ ತಂಡ ರವಾನೆ..!

ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ನೀಡಿದ್ರು, ಇನ್ನೂ ಲೋಕಭವನಕ್ಕೆ ತಿಳಿಸದ ಸಿಎಂ ಡಿಕೆ ಶಿವಕುಮಾರ್! ಕುತೂಹಲಕಾರಿ ನಡೆ

ನೇಪಾಳ ಪ್ರವಾಹ: ಪ್ರಾಣ ಉಳಿಸಿಕೊಳ್ಳಲು ಟೆರೇಸ್ ಮೇಲೆ ಟಿ-ಶರ್ಟ್ ಬೀಸಿದ ಯುವಕ, ರೋಚಕ ಕಾರ್ಯಾಚರಣೆಯ Video!

KPSC ಹಗರಣ: IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಸಿಐಡಿ ವಶಕ್ಕೆ

ಭಾರತದಲ್ಲಿ ಮುಸ್ಲಿಂ ಇರಬಾರದು ಎಂದು ಭಾವಿಸುವ ಹಿಂದೂ ಹಿಂದೂವೇ ಅಲ್ಲ- ಅಮೆರಿಕದಲ್ಲಿ ಮೋಹನ್ ಭಾಗವತ್