ಬಿಹಾರ-ಜಾರ್ಖಂಡ್ ಸನ್ ನದಿಯ ನೀರು ಹಂಚಿಕೆ ವಿವಾದ ಇತ್ಯರ್ಥ 
ದೇಶ

ಅಮಿತ್ ಶಾ ಅಧ್ಯಕ್ಷತೆಯಲ್ಲಿ ಬಿಹಾರ-ಜಾರ್ಖಂಡ್ ನಡುವಿನ 25 ವರ್ಷಗಳ ಹಳೆಯ ನದಿ ನೀರು ಹಂಚಿಕೆ ವಿವಾದ ಇತ್ಯರ್ಥ!

ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಿಹಾರ ಮತ್ತು ಜಾರ್ಖಂಡ್ ಸನ್ ನದಿಯ ನೀರು ಹಂಚಿಕೆ ವಿವಾದ ಇತ್ಯರ್ಥಗೊಂಡಿದೆ. ಒಪ್ಪಂದದ ಪ್ರಕಾರ, 7.75 ಮಿಲಿಯನ್ ಎಕರೆ ಅಡಿ ನೀರಿನಲ್ಲಿ ಬಿಹಾರ 5.57 MAF ನೀರನ್ನು ಮತ್ತು ಜಾರ್ಖಂಡ್ 2 MAF ನೀರನ್ನು ಪಡೆಯುತ್ತವೆ.

ರಾಂಚಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಿಹಾರ ಮತ್ತು ಜಾರ್ಖಂಡ್ ಸನ್ ನದಿಯ ನೀರು ಹಂಚಿಕೆ ವಿವಾದ ಇತ್ಯರ್ಥಗೊಂಡಿದೆ. ಒಪ್ಪಂದದ ಪ್ರಕಾರ, 7.75 ಮಿಲಿಯನ್ ಎಕರೆ ಅಡಿ ನೀರಿನಲ್ಲಿ ಬಿಹಾರ 5.57 MAF ನೀರನ್ನು ಮತ್ತು ಜಾರ್ಖಂಡ್ 2 MAF ನೀರನ್ನು ಪಡೆಯುತ್ತವೆ. ಬಿಹಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಮತ್ತು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಉಪಸ್ಥಿತರಿದ್ದರು.

ಬಿಹಾರ ಮತ್ತು ಜಾರ್ಖಂಡ್ ನಡುವಿನ ಇಂದಿನ ಒಪ್ಪಂದವು ಪೂರ್ವ ಭಾರತದಲ್ಲಿ ಬಹುನಿರೀಕ್ಷಿತ ನೀರಿನ ವಿವಾದ ಪರಿಹಾರಗೊಂಡಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಹೇಳಿದ್ದಾರೆ. ಈ ಒಪ್ಪಂದವು ಬಿಹಾರ ಮತ್ತು ಜಾರ್ಖಂಡ್‌ನ ವಿಶಾಲ ಗ್ರಾಮೀಣ ಪ್ರದೇಶಗಳಲ್ಲಿನ ಲಕ್ಷಾಂತರ ರೈತರಿಗೆ ನೀರಾವರಿ ನೀರನ್ನು ಹಾಗೂ ಕುಡಿಯುವ ನೀರನ್ನು ಒದಗಿಸುತ್ತದೆ ಎಂದರು. ಸನ್ ನದಿ ಹಂಚಿಕೆಗೆ ಸಂಬಂಧಿಸಿದಂತೆ ಇಂದು ನಡೆದ ಒಪ್ಪಂದವು ಪ್ರಧಾನಿ ಮೋದಿಯವರ ಟೀಮ್ ಇಂಡಿಯಾ ಮತ್ತು ಸಹಕಾರಿ ಒಕ್ಕೂಟ ವ್ಯವಸ್ಥೆಯ ದೃಷ್ಟಿಕೋನಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಅಮಿತ್ ಶಾ ಹೇಳಿದರು.

ದೇಶದ ಎಲ್ಲಾ ರಾಜ್ಯಗಳು ಪ್ರತ್ಯೇಕ ಅಸ್ತಿತ್ವವನ್ನು ಹೊಂದಿದ್ದರೂ, ಭಾರತ ಅಂತ ಬಂದಾಗ ಎಲ್ಲಾ ರಾಜ್ಯಗಳು ಟೀಮ್ ಇಂಡಿಯಾವಾಗಿ ಮುಂದುವರೆದರೆ, ಪರಿಹರಿಸಲಾಗದ ಯಾವುದು ಸಮಸ್ಯೆ ಇಲ್ಲ ಎಂದು ಅಮಿತ್ ಶಾ ಹೇಳಿದರು. ಈ ವರ್ಷ ಇಲ್ಲಿಯವರೆಗೆ ವಿವಿಧ ರಾಜ್ಯಗಳ ನಡುವೆ ಸಹಿ ಹಾಕಲಾದ ನಾಲ್ಕನೇ ನೀರಿನ ಒಪ್ಪಂದ ಇದಾಗಿದ್ದು, ಇದು ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಕುಡಿಯುವ ನೀರಿಗೆ ನೀರಿನ ಲಭ್ಯತೆಯನ್ನು ಹೆಚ್ಚಿಸುತ್ತದೆ ಎಂದು ಶಾ ಹೇಳಿದರು.

ಬಿಹಾರ ಮತ್ತು ಜಾರ್ಖಂಡ್ ನಡುವಿನ ಸುಮಾರು 25 ವರ್ಷಗಳಷ್ಟು ಹಳೆಯದಾದ ನೀರಿನ ವಿವಾದವನ್ನು ಪರಿಹರಿಸುವ ಇಂದಿನ ಒಪ್ಪಂದವು ಸಹಕಾರಿ ಒಕ್ಕೂಟ ವ್ಯವಸ್ಥೆಯ ಸ್ಫೂರ್ತಿಯಲ್ಲಿ ಯಾವುದೇ ಸಮಸ್ಯೆಯನ್ನು ಸಂವಾದದ ಮೂಲಕ ಪರಿಹರಿಸಬಹುದು ಎಂಬುದಕ್ಕೆ ಒಂದು ಉದಾಹರಣೆಯಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಇಂದು, ಎರಡೂ ರಾಜ್ಯಗಳಲ್ಲಿನ ದೊಡ್ಡ ಭೌಗೋಳಿಕ ಪ್ರದೇಶ, ರೈತರು, ಗ್ರಾಮೀಣ ಪ್ರದೇಶಗಳು ಮತ್ತು ಕುಡಿಯುವ ನೀರಿನ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸಲಾಗಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

"ಶಾಂತಿಯೆಡೆಗೆ ಹೆಜ್ಜೆ ಮಾನವೀಯತೆಗೆ ಹೊಸ ಭರವಸೆ"- ಯುಕ್ರೇನ್-ರಷ್ಯಾ ಯುದ್ಧ ಕೊನೆಗೊಳಿಸಲು Putin ಗೆ Modi ಒತ್ತಾಯ

ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ಹಠಾತ್ ನಿವೃತ್ತಿ ಘೋಷಿಸಿದ ಲಿಯೋನೆಲ್ ಮೆಸ್ಸಿ

ಇರಾನ್ ಸಂಘರ್ಷದ ನಡುವೆಯೂ ಭಾರತದ GDP ಶೇ.7.8ರಷ್ಟು ಬೆಳವಣಿಗೆ: ಪ್ರಧಾನಿ ಮೋದಿ ಮೆಚ್ಚುಗೆ!

'ಮೋದಿ ನನ್ನ ಜೀವನ ನರಕ ಮಾಡಿದ್ದಾರೆ, ಹೇಡಿ': ಕಣ್ಣೀರಿಟ್ಟು ಪ್ರಧಾನಿ ಕ್ಷಮೆ ಕೇಳಿದ್ದ ಹುಡುಗಿ ಯೂಟರ್ನ್; ಮತ್ತೊಂದು ವಿಡಿಯೋ!

ಕುಮಾರಸ್ವಾಮಿ ಟಾರ್ಗೆಟ್ BJP, ಕಾಂಗ್ರೆಸ್ ಅಲ್ಲ; ರಾಜ್ಯದಲ್ಲಿ ಕೇಸರಿ ಪಕ್ಷ ಇರಬಾರದೆಂದು ಹೋರಾಟ: CM ಡಿಕೆ ಶಿವಕುಮಾರ್