ಸುಕೇಶ್ ಚಂದ್ರಶೇಖರ್ 
ದೇಶ

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೋಗಿನಲ್ಲಿ ಪ್ರಭಾವ ಬೀರಲು ಯತ್ನ: ಸುಖೇಶ್ ಚಂದ್ರಶೇಖರ್‌ಗೆ 8 ವರ್ಷ ಕಠಿಣ ಜೈಲು ಶಿಕ್ಷೆ

ಆಗಸ್ಟ್ 20 ರಂದು ನ್ಯಾಯಾಲಯವು, ಐಪಿಸಿ ಸೆಕ್ಷನ್ 170, 189 ಮತ್ತು 507 ರ ಅಡಿಯಲ್ಲಿ ಸುಖೇಶ್ ಚಂದ್ರಶೇಖರ್ ದೋಷಿ ಎಂದು ತೀರ್ಪು ನೀಡಿತ್ತು.

ನವದೆಹಲಿ: ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸೋಗಿನಲ್ಲಿ 2017ರ ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಜಾಮೀನು ಪಡೆಯಲು ವಿಶೇಷ ನ್ಯಾಯಾಧೀಶರ ಮೇಲೆ ಪ್ರಭಾವ ಬೀರಿದ ಆರೋಪದ ಮೇಲೆ ದೆಹಲಿ ನ್ಯಾಯಾಲಯವು ವಂಚಕ ಸುಖೇಶ್ ಚಂದ್ರಶೇಖರ್‌ಗೆ ಎಂಟು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

ತೀಸ್ ಹಜಾರಿ ನ್ಯಾಯಾಲಯದ ಮುಖ್ಯ ನ್ಯಾಯಾಧೀಶೆ ಹರ್ಷಿತಾ ಮಿಶ್ರಾ ಅವರು ಚಂದ್ರಶೇಖರ್‌ಗೆ ಐಪಿಸಿ ಸೆಕ್ಷನ್ 170 ರ ಅಡಿಯಲ್ಲಿ ಎರಡು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 5,000 ರೂ. ದಂಡ, ಸೆಕ್ಷನ್ 189 ರ ಅಡಿಯಲ್ಲಿ ಎರಡು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 5,000 ರೂ. ದಂಡ ಹಾಗೂ ಸೆಕ್ಷನ್ 507 ರ ಅಡಿಯಲ್ಲಿ ನಾಲ್ಕು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದ್ದಾರೆ.

ಇದು ನ್ಯಾಯಾಂಗ ಪ್ರಕ್ರಿಯೆಯ ಸ್ವಾತಂತ್ರ್ಯ ಮತ್ತು ಪಾವಿತ್ರ್ಯತೆಗೆ ಮಾಡಿದ "ನೇರ ಅವಮಾನ" ಎಂದು ನ್ಯಾಯಾಲಯ ಹೇಳಿದೆ.

ಈ ಮೂರು ಶಿಕ್ಷೆಗಳು ಒಂದರ ನಂತರ ಒಂದು ಜಾರಿಯಾಗುತ್ತವೆ, ಒಟ್ಟು ಜೈಲು ಶಿಕ್ಷೆಯನ್ನು ಎಂಟು ವರ್ಷಗಳವರೆಗೆ ವಿಸ್ತರಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ. ದಂಡ ಪಾವತಿಸಲು ವಿಫಲವಾದರೆ, ಚಂದ್ರಶೇಖರ್ ಹೆಚ್ಚುವರಿ ಒಂದು ತಿಂಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ಕೋರ್ಟ್ ಎಚ್ಚರಿಸಿದೆ.

ಆಗಸ್ಟ್ 20 ರಂದು ನ್ಯಾಯಾಲಯವು, ಐಪಿಸಿ ಸೆಕ್ಷನ್ 170, 189 ಮತ್ತು 507 ರ ಅಡಿಯಲ್ಲಿ ಚಂದ್ರಶೇಖರ್ ದೋಷಿ ಎಂದು ತೀರ್ಪು ನೀಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣಕ್ಕೆ ಬಿಗ್‌ ಟ್ವಿಸ್ಟ್‌ ; ₹40 ಲಕ್ಷಕ್ಕೆ ಪ್ರಶ್ನೆಪತ್ರಿಕೆ ಮಾರಾಟ ಮಾಡಿದ್ದ ಮಧ್ಯವರ್ತಿ, BJP ಮುಖಂಡನ ಬಂಧನ!

ನೇಪಾಳದಲ್ಲಿ ಭೀಕರ ಪ್ರವಾಹ; ಮೃತರ ಸಂಖ್ಯೆ 903ಕ್ಕೆ ಏರಿಕೆ, ವಿದೇಶಿಯರು ಸೇರಿ 4,000ಕ್ಕೂ ಹೆಚ್ಚು ಮಂದಿ ಇನ್ನೂ ನಾಪತ್ತೆ!

ಮರ ಬಿದ್ದು ತುಂಡಾಗಿ ವೃದ್ದನ ಮೇಲೆ ಬಿದ್ದ ಹೈಟೆನ್ಷನ್ ವೈರ್, ಅಂಗಡಿ ಮಾಲೀಕನ ಸಮಯಪ್ರಜ್ಞೆಯಿಂದ ಜೀವ ರಕ್ಷಣೆ, Video Viral

ನೆರೆ ಸಂತ್ರಸ್ತರಿಗೆ ನೆರವು ಹೊತ್ತು ಹೋದವರಿಗೆ ಶಾಕ್: 'ಇಲ್ಲೇ ಖರೀದಿಸಿ' ಎಂದ ನೇಪಾಳ ಅಧಿಕಾರಿಗಳು! ಆಗಿದ್ದೇನು?

ನೇಪಾಳ ಪ್ರವಾಹ: ಲೈಕ್ಸ್ ಗಾಗಿ ನಕಲಿ ವಿಡಿಯೋ, ಸುಳ್ಳು ಮಾಹಿತಿ ಪ್ರಸಾರ; 72 ಸೋಶಿಯಲ್ ಮೀಡಿಯಾ ಬಳಕೆದಾರರಿಗೆ ಕಟ್ಟುನಿಟ್ಟಿನ ಸೂಚನೆ!