ನಿರ್ಮಲಾ ಸೀತಾರಾಮನ್ 
ದೇಶ

2026ರ ಹಣಕಾಸು ವರ್ಷದಲ್ಲಿ ನಾಮಿನಲ್ ಜಿಡಿಪಿ ಶೇ. 10 ರಷ್ಟು ಬೆಳವಣಿಗೆ ವಾಸ್ತವ: ನಿರ್ಮಲಾ ಸೀತಾರಾಮನ್

ಸದ್ಯ ಇರುವ GDP ಮೂಲ ವರ್ಷ ಮತ್ತು ವಿಧಾನದ ಆಧಾರದ ಮೇಲೆ ನಾಮಿನಲ್ ಜಿಡಿಪಿ ಶೇ. 10 ರಷ್ಟು ಬೆಳವಣಿಗೆಯ ಅಂಶಗಳನ್ನು ತೋರಿಸುತ್ತಿವೆ.

ನವದೆಹಲಿ: ಏಪ್ರಿಲ್ 1 ರಿಂದ ಪ್ರಾರಂಭವಾಗುವ 2026ರ ಹಣಕಾಸು ವರ್ಷದಲ್ಲಿ ನಾಮಿನಲ್ ಜಿಡಿಪಿ ಶೇ. 10 ರಷ್ಟು ಬೆಳವಣಿಗೆ ವಾಸ್ತವವಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಬಜೆಟ್ ದಾಖಲೆಯ ಪ್ರಕಾರ, ಸಂಪೂರ್ಣ ಪರಿಭಾಷೆಯಲ್ಲಿ ಭಾರತದ ಜಿಡಿಪಿ ಬೆಳವಣಿಗೆಯು 393 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಬಜೆಟ್ ಮಂಡನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ಮಲಾ ಸೀತಾರಾಮನ್, ದೇಶದಲ್ಲಿ ಹಣದುಬ್ಬರ ಕಡಿಮೆಯಾಗಿದ್ದು, ಸ್ವಲ್ಪ ಸಮಯದವರೆಗೂ ಇರಲಿದೆ. ಇದು ಪ್ರಮುಖ ಆರ್ಥಿಕ (deflator) ಅಂಶವಾಗಿದೆ.

ಆದಾಗ್ಯೂ, ಹೆಚ್ಚಾಗಿ ಅದರ ಮೇಲೆ ಅವಲಂಬನೆಯಾಗಿದ್ದೇವೆ. ಆದ್ದರಿಂದ ನಾಮಿನಲ್ ಜಿಡಿಪಿ ಊಹೆಯು ವಾಸ್ತವಿಕವಾಗಿದೆ ಎಂದು ಅವರು ಹೇಳಿದರು.

ಸದ್ಯ ಇರುವ GDP ಮೂಲ ವರ್ಷ ಮತ್ತು ವಿಧಾನದ ಆಧಾರದ ಮೇಲೆ ನಾಮಿನಲ್ ಜಿಡಿಪಿ ಶೇ. 10 ರಷ್ಟು ಬೆಳವಣಿಗೆಯ ಅಂಶಗಳನ್ನು ತೋರಿಸುತ್ತಿವೆ. ಜಿಡಿಪಿ ಮತ್ತು ಗ್ರಾಹಕ ಬೆಲೆ ಸೂಚ್ಯಂಕ (CPI) ಮೂಲಕ ಅಳೆಯಲಾದ ಚಿಲ್ಲರೆ ಹಣದುಬ್ಬರ ಸೇರಿದಂತೆ ಹಲವು ಪ್ರಮುಖ ಆರ್ಥಿಕ ಸೂಚ್ಯಂಕಗಳಿಗೆ ಮೂಲ ವರ್ಷವನ್ನು ಈ ತಿಂಗಳ ಕೊನೆಯಲ್ಲಿ ಪರಿಷ್ಕರಿಸಲು ಸರ್ಕಾರ ಸಜ್ಜಾಗಿದೆ.

ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MoSPI) ಫೆಬ್ರವರಿ 27 ರಂದು ಪರಿಷ್ಕೃತ ಮೂಲ ವರ್ಷಗಳೊಂದಿಗೆ ಹೊಸ ಅಂಕಿಅಂಶಗಳ ಸರಣಿಯನ್ನು ಬಿಡುಗಡೆ ಮಾಡುತ್ತದೆ. ರಾಷ್ಟ್ರೀಯ ಅಂಕಿಸಂಖ್ಯೆಗಳ ಡೇಟಾವು 2022-23 ಅನ್ನು ಮೂಲ ವರ್ಷವಾಗಿ ಅನುಸರಿಸುತ್ತದೆ. ಇದು ಫೆಬ್ರವರಿ 12 ರಂದು ಬಿಡುಗಡೆಯಾಗುತ್ತದೆ. ಅಲ್ಲದೇ CPI ಪರಿಷ್ಕರಣೆ ಫೆಬ್ರವರಿ ಅಂತ್ಯದಲ್ಲಿ ನಡೆಯುತ್ತದೆ.

ಇದಾದ ನಂತರ ಬೆಳವಣಿಗೆ ದರಗಳು, ಹಣದುಬ್ಬರ ಪ್ರವೃತ್ತಿಗಳು ಮತ್ತು ಹಣಕಾಸಿನ ಪ್ರಕ್ಷೇಪಗಳ ಬೆನ್ನೆಲುಬಾಗಿರುವ ನಾಮಿನಲ್ ಜೆಡಿಪಿ ಮೌಲ್ಯಗಳನ್ನು ಐತಿಹಾಸಿಕ ಡೇಟಾವನ್ನು ಮರು ಲೆಕ್ಕಾಚಾರ ಮಾಡಲಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಲಡಾಖ್ ಗಡಿ ಸಂಘರ್ಷ: ಮಾಜಿ ಸೇನಾಧಿಕಾರಿ ನರವಾಣೆ ಅಪ್ರಕಟಿತ ಪುಸ್ತಕ ಪ್ರಸ್ತಾಪಿಸಿದ ರಾಹುಲ್ ಗಾಂಧಿ, ಸಂಸತ್ ನಲ್ಲಿ ಕೋಲಾಹಲ, ಕಲಾಪ ಮುಂದೂಡಿಕೆ

ಔಟಾಗಿ ಹೋಗುತ್ತಿದ್ದ Pak ಆಟಗಾರನ ಕಡೆ ಕೋಪದಿಂದ ನುಗ್ಗಿದ ಸೂರ್ಯವಂಶಿ, ಕೂಡಲೇ ಮಧ್ಯಪ್ರವೇಶಿಸಿದ ವಿಹಾನ್, Video!

BLA ಯಲ್ಲಿ ಸುಶಿಕ್ಷಿತ ಹೆಣ್ಣು ಮಕ್ಕಳು! ಪಾಕ್ ವಿರುದ್ಧ ರಾತ್ರಿಯಿಡೀ ಹೋರಾಡಿ ಪ್ರಾಣತೆತ್ತ ಫಿದಾಯೀನ್': ಅಂತಿಮ ಕ್ಷಣದ Video!

ಸಿಜೆ ರಾಯ್ ಆತ್ಮಹತ್ಯೆ: ನ್ಯಾಯಾಂಗ ತನಿಖೆಗೆ ಕೇರಳ ಸಿಎಂ ಪಿಣರಾಯಿ ಒತ್ತಾಯ, ಕೇಂದ್ರಕ್ಕೆ ಪತ್ರ!

'ಮುಖಂಡರ ಮುಂದೆ ಗ್ಲಾಮರಸ್‌ ಆಗಿರಲು ಬಯಸಬೇಡಿ': ಕಾಂಗ್ರೆಸ್ ನಾಯಕಿ ಮೋಟಮ್ಮ ಹೇಳಿಕೆ ವೈರಲ್!

SCROLL FOR NEXT