ಸಚಿವೆ ನಿರ್ಮಲಾ ಸೀತಾರಾಮನ್  
ದೇಶ

Union Budget 2026: 10,000 ಕೋಟಿ ರೂ SME ನಿಧಿ, ಸ್ವಾವಲಂಬಿ ಭಾರತ ನಿಧಿಗೆ 4,000 ಕೋಟಿ ರೂ ನಿಗದಿ

ದೊಡ್ಡ ಘಟಕಗಳಾಗಿ ಬೆಳೆಯುವ ಸಾಮರ್ಥ್ಯ ಮತ್ತು ಕಾರ್ಯಸಾಧ್ಯತೆಯನ್ನು ಹೊಂದಿರುವ MSME ಗಳಿಗೆ 50,000 ಕೋಟಿ ರೂಪಾಯಿ ಆರ್ಥಿಕ ಧನ ಸಹಾಯ ನೀಡಲು ಈ ನಿಧಿಯನ್ನು 2023 ರಲ್ಲಿ ಘೋಷಿಸಲಾಗಿತ್ತು.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಉದ್ಯಮಗಳನ್ನು (MSME) ಬೆಂಬಲಿಸಲು 2026-27ರಲ್ಲಿ ಸ್ವಾವಲಂಬಿ ಭಾರತ ನಿಧಿಗೆ 4,000 ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಘೋಷಿಸಿದ್ದಾರೆ.

ದೊಡ್ಡ ಘಟಕಗಳಾಗಿ ಬೆಳೆಯುವ ಸಾಮರ್ಥ್ಯ ಮತ್ತು ಕಾರ್ಯಸಾಧ್ಯತೆಯನ್ನು ಹೊಂದಿರುವ MSME ಗಳಿಗೆ 50,000 ಕೋಟಿ ರೂಪಾಯಿ ಆರ್ಥಿಕ ಧನ ಸಹಾಯ ನೀಡಲು ಈ ನಿಧಿಯನ್ನು 2023 ರಲ್ಲಿ ಘೋಷಿಸಲಾಗಿತ್ತು.

2026-27 ರ ಬಜೆಟ್ ನ್ನು ಇಂದು ಲೋಕಸಭೆಯಲ್ಲಿ ಮಂಡಿಸಿದ ಸಚಿವೆ ನಿರ್ಮಲಾ ಸೀತಾರಾಮನ್, ಐದು ಉಪ-ಭಾಗಗಳೊಂದಿಗೆ ಸಂಯೋಜಿತ ಜವಳಿ ಕಾರ್ಯಕ್ರಮವನ್ನು ಪ್ರಸ್ತಾಪಿಸಿದರು. ಇದು ಅಮೆರಿಕ ವಿಧಿಸಿರುವ ಶೇಕಡಾ 50ರಷ್ಟು ಸುಂಕಗಳಿಂದಾಗಿ ಸವಾಲುಗಳನ್ನು ಎದುರಿಸುತ್ತಿರುವ ವಲಯಕ್ಕೆ ಸಹಾಯ ಮಾಡಬಹುದಾದ ಒಂದು ಕ್ರಮವಾಗಿದೆ ಎಂದರು.

ನೈಸರ್ಗಿಕ ನಾರು ಯೋಜನೆ, ಜವಳಿ ವಿಸ್ತರಣೆ ಮತ್ತು ಉದ್ಯೋಗ ಯೋಜನೆ ಮತ್ತು ರಾಷ್ಟ್ರೀಯ ಕೈಮಗ್ಗ ಮತ್ತು ಕರಕುಶಲ ಕಾರ್ಯಕ್ರಮವನ್ನು ಪ್ರಸ್ತಾಪಿಸಿದರು.

ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳಿಂದ MSME ಗಳಿಂದ ಎಲ್ಲಾ ಖರೀದಿಗಳಿಗೆ ವ್ಯಾಪಾರ ಸ್ವೀಕೃತಿ ರಿಯಾಯಿತಿ ವ್ಯವಸ್ಥೆ (TReDS)ನ್ನು ವಹಿವಾಟು ವೇದಿಕೆಗಳಾಗಿ ಮಾಡುವ ಕುರಿತು ಪ್ರಸ್ತಾಪಿಸಿದ್ದಾರೆ. ವ್ಯಾಪಾರ ಸ್ವೀಕೃತಿ ರಿಯಾಯಿತಿ ವ್ಯವಸ್ಥೆ ವೇದಿಕೆ - ರಿಸೀವಬಲ್ಸ್ ಎಕ್ಸ್ಚೇಂಜ್ ಆಫ್ ಇಂಡಿಯಾ ಲಿಮಿಟೆಡ್ (RXIL) - ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (SIDBI) ಮತ್ತು ರಾಷ್ಟ್ರೀಯ ಷೇರು ವಿನಿಮಯ(NSE) ದಿಂದ ಉತ್ತೇಜಿಸಲ್ಪಟ್ಟ ಜಂಟಿ ಉದ್ಯಮವಾಗಿದೆ.

ಸರ್ಕಾರವು ದ್ವಿತೀಯ ಮತ್ತು ತೃತೀಯ ಶ್ರೇಣಿ ನಗರಗಳಲ್ಲಿ ಮೂಲಭೂತಸೌಕರ್ಯವನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರಿಸುತ್ತದೆ ಎಂದು ಹಣಕಾಸು ಸಚಿವೆ ತಿಳಿಸಿದರು.

ಸಣ್ಣ ಮತ್ತು ಮಧ್ಯಮ ಉದ್ಯಮಗಳು (SME)

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಆರ್ಥಿಕತೆಯನ್ನು ಉತ್ತೇಜಿಸಲು ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು (SME) ರಚಿಸಲು 10,000 ಕೋಟಿ ರೂಪಾಯಿ ನಿಧಿಯನ್ನು ಸ್ಥಾಪಿಸಲು ಪ್ರಸ್ತಾಪಿಸಿದ್ದಾರೆ.

2026-27ರ ಕೇಂದ್ರ ಬಜೆಟ್ ಮಂಡಿಸುತ್ತಾ, ಜಾಗತಿಕವಾಗಿ ಸ್ಪರ್ಧಾತ್ಮಕ ಪರಿಸರ ವ್ಯವಸ್ಥೆಯನ್ನು ರಚಿಸಲು ಕಂಟೇನರ್ ತಯಾರಿಕೆಗೆ ಒಂದು ಯೋಜನೆಯನ್ನು ಪ್ರಸ್ತಾಪಿಸಿದರು.

ಅಲ್ಲದೆ, ತಾಂತ್ರಿಕ ಜವಳಿಗಳಿಗೆ ಮೌಲ್ಯವರ್ಧನೆಯ ಮೇಲೆ ಕೇಂದ್ರೀಕರಿಸುವ ಮೆಗಾ ಜವಳಿ ಪಾರ್ಕ್‌ಗಳನ್ನು ಸ್ಥಾಪಿಸಲಾಗುವುದು.

ತಾಂತ್ರಿಕ ಜವಳಿಗಳಿಗೆ ಮೌಲ್ಯವರ್ಧನೆಯ ಮೇಲೆ ಕೇಂದ್ರೀಕರಿಸುವ ಮೆಗಾ ಜವಳಿ ಪಾರ್ಕ್‌ಗಳು ಮತ್ತು ಐದು ಉಪ-ಭಾಗಗಳೊಂದಿಗೆ ಸಂಯೋಜಿತ ಜವಳಿ ಕಾರ್ಯಕ್ರಮವನ್ನು ಸ್ಥಾಪಿಸಲು ಬಜೆಟ್ ಪ್ರಸ್ತಾಪಿಸಿದೆ ಎಂದು ಅವರು ಹೇಳಿದರು.

ಭಾರತವು ಉತ್ತಮ ಗುಣಮಟ್ಟದ ಕೈಗೆಟುಕುವ ಕ್ರೀಡಾ ಸರಕುಗಳಿಗೆ ಜಾಗತಿಕ ಕೇಂದ್ರವಾಗಿ ಹೊರಹೊಮ್ಮುವ ಸಾಮರ್ಥ್ಯವನ್ನು ಹೊಂದಿದೆ ಎಂದರು.

ಖಾದಿ ಉದ್ಯಮಕ್ಕೆ ಒತ್ತು

ಖಾದಿ ಕೈಮಗ್ಗವನ್ನು ಬಲಪಡಿಸಲು ಮಹಾತ್ಮಾ ಗಾಂಧಿ ಗ್ರಾಮ ಸ್ವರಾಜ್ ಉಪಕ್ರಮವನ್ನು ಸಹ ಸಚಿವೆ ಪ್ರಸ್ತಾಪಿಸಿದರು. ಇದಲ್ಲದೆ, 200 ಪಾರಂಪರಿಕ ಕೈಗಾರಿಕಾ ಕ್ಲಸ್ಟರ್‌ಗಳನ್ನು ಪುನರುಜ್ಜೀವನಗೊಳಿಸುವ ಯೋಜನೆಯೂ ಇರುತ್ತದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯ ಸರ್ಕಾರದ 'ದ್ವೇಷ ಭಾಷಣ' ಮಸೂದೆಗೆ ಅಮಿತ್ ಶಾ ಅಡ್ಡಗಾಲು; ಅಸ್ತಿತ್ವದಲ್ಲಿರುವ ಕಾನೂನೇ ಸಾಕು: ಕೇಂದ್ರ

Mekedatu row: ಕರ್ನಾಟಕದ DPR ತಿರಸ್ಕರಿಸಿ; ಪ್ರಧಾನಿ ಮೋದಿಗೆ ತಮಿಳುನಾಡು ಸಿಎಂ ವಿಜಯ್ ಮನವಿ

IPL 2026: ನಾವೇನು ಸಿನಿಮಾ ಸ್ಟಾರ್‌ಗಳಲ್ಲ: ವಿಮಾನ ನಿಲ್ಗಾಣದಲ್ಲಿ Riyan Parag ಗರಂ, ವೈಭವ್ ಸೂರ್ಯವಂಶಿ ಶಾಕ್! Video

Video: 'ಕಾಂತಾರ' ಕೆಂಗಣ್ಣಿಗೆ ಗುರಿ, ಬಾಲಿವುಡ್​ನಿಂದ ಬ್ಯಾನ್; ಚಾಮುಂಡೇಶ್ವರಿಗೆ ತಲೆಬಾಗಿ ಕ್ಷಮೆಯಾಚಿಸಿದ ರಣವೀರ್ ಸಿಂಗ್!

IPL 2026: RCB vs GT ನಡುವಿನ ಕ್ವಾಲಿಫೈಯರ್ ಪಂದ್ಯಕ್ಕೆ ಮಳೆ ಆತಂಕ, ರಿಸರ್ವ್ ಡೇ ಕೂಡ ಇಲ್ಲ.. ಪಂದ್ಯ ರದ್ದಾದರೆ ಯಾರು ಫೈನಲ್ ಗೆ?

SCROLL FOR NEXT